PSI RECRUITMENT SCAM: ಪಿಎಸ್ ಐ ನೇಮಕಾತಿ ಅಕ್ರಮ: ಅಕ್ಟೋಬರ್ ನಂತರ ಪಿಎಸ್ ಐ ಮರು ಪರೀಕ್ಷೆ ಸಾಧ್ಯತೆ..?

ಬೆಂಗಳೂರು: ಕರ್ನಾಟಕದ 454 ಸಬ್​ ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿಯಲ್ಲಿ ನಡೆದಿರುವ ಅವ್ಯವಹಾರ ತನಿಖೆಯಲ್ಲಿದೆ. ಆದರೆ, ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಇನ್ನೂ ಯಾವಾಗ ಮರು ಪರೀಕ್ಷೆ ನಡೆಯಲಿದೆ ಎಂಬ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದೆ.
ಪ್ರಕರಣದ ಬಳಿಕ 90 ದಿನಗಳೊಳಗೆ ಚಾರ್ಜಿಶೀಟ್ ಸಲ್ಲಿಸಬೇಕಿದೆ. ಈ ಸಂಬಂಧ ಪ್ರಕ್ರಿಯೆ ನಡೆಯುತ್ತಿದ್ದು, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ ನಂತರ ಮರು ಪರೀಕ್ಷೆಯ ದಿನಾಂಕ ಘೋಷಿಸಲಾಗುವುದು ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್​ ಸೂದ್ ಹೇಳಿದ್ದಾರೆ.
ಮರು ಪರೀಕ್ಷೆಯ ದಿನಾಂಕ ಅಂತಿಮವಾಗದಿದ್ದರಿಂದ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ಈಗಾಗಲೇ ಅನೇಕರು ವಯಸ್ಸಿನ ಮಿತಿಯನ್ನು ಮೀರುವ ಹಂತದಲ್ಲಿದ್ದಾರೆ. ಇನ್ನೊಂದಷ್ಟು ಜನರು ಪಿ ಎಸ್ ಐ ಪರೀಕ್ಷೆಗೂ ತಯಾರಾಗುತ್ತಾ, ಇನ್ನೊಂದು ಪರೀಕ್ಷೆಗೂ ಅರ್ಜಿ ಸಲ್ಲಿಸದೇ ಗೊಂದಲದಲ್ಲಿದ್ದಾರೆ.
ಆದರೆ, ಸಿಐಡಿ ತನಿಖೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯು ಇನ್ನೂ ಜಾರ್ಜ್ ಶೀಟ್ ಸಲ್ಲಿಕೆ ಮಾಡಿಲ್ಲ. ಅದರಿಂದ ದಿನಾಂಕ ನಿಗಧಿ ಮಾಡಲು ಸಾಧ್ಯವಾಗುತ್ತಿಲ್ಲ. ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಪ್ರಕ್ರಿಯೆ ಮುಗಿದ ನಂತರ ಮರು ಪರೀಕ್ಷೆ ನಡೆಸುವ ಬಗ್ಗೆ ಪ್ರಕಟಣೆ ಹೊರಡಿಸಲಾಗುವುದು,
ರದ್ದಾದ ಪರೀಕ್ಷೆ ಬರೆದಿದ್ದ ಹಾಗೂ ಅಕ್ರಮದಲ್ಲಿ ಭಾಗಿಯಾಗದಿದ್ದ ಎಲ್ಲಾ 56000 ಅಭ್ಯರ್ಥಿಗಳು ಮರು ಪರೀಕ್ಷೆ ತೆಗೆದುಕೊಳ್ಳಲು ಅರ್ಹತೆ ಹೊಂದಿದ್ದು, ಯಾವುದೇ ಆತಂಕ ಬೇಡ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ.
ಆದರೂ, ಅಭ್ಯರ್ಥಿಗಳಿಂದ ಈ ಬಗ್ಗೆ ಯಾವುದೇ ನಂಬಿಕೆಯಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ಪಿ ಎಸ್ ಐ ಪರೀಕ್ಷೆಯ ನೇಮಕಾತಿ ಯ ಹಗರಣದಲ್ಲಿ ಹಲವಾರು ಜನರು ಪ್ರಾಮಾಣಿಕವಾಗಿ ಪರೀಕ್ಷೆಯನ್ನು ಬರೆದಿದ್ದಾರೆ. ಇದೀಗ ಪರೀಕ್ಷೆ ರದ್ದು ಮಾಡಿರುವುದರಿಂದ ಅವರಿಗೆ ಅನ್ಯಾಯ ಆಗುತ್ತದೆ.
ಆದರೆ, ಇದೇ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದವರೇ ಅಕ್ರಮದ ಪಾಲುದಾರರಾದ್ದರಿಂದ ಅವರು ಅರೆಸ್ಟ್ ಆಗಿದ್ದಾರೆ. ಹೀಗಾಗಿ ಪ್ರಕರಣ ತನಿಖೆ ನಡೆಯುತ್ತಿದ್ದು, ಇನ್ನಷ್ಟು ಅಕ್ರಮದಲ್ಲಿ ಭಾಗಿಯಾದವರ ಹುಡುಕಾಟದಲ್ಲಿದೆ ಖಾಕಿ ಪಡೆ.

More News

You cannot copy content of this page