SIDDU RATH YATHRE: ನವೆಂಬರ್ 1 ರಿಂದ ಸಿದ್ದರಾಮಯ್ಯರವರ ರಥಯಾತ್ರೆಗೆ ಸಿದ್ದತೆ : ಇದಕ್ಕಾಗಿ ಸಿದ್ದಗೊಂಡಿದೆ ವಿಶೇಷ ವಾಹನ

ಬೆಂಗಳೂರು : ಇತ್ತೀಚೆಗೆ ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ@75 ಕಾರ್ಯಕ್ರಮದ ಭರ್ಜರಿ ಯಶಸ್ವಿಯಿಂದ ಇದೀಗ ಮತ್ತೆ ಮತ್ತೊಂದು ರಥಯಾತ್ರೆಗೆ ಸಿದ್ದರಾಮಯ್ಯ ಆಪ್ತ ಬಳಗ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಲ್ಲಿ ಸದ್ದಿಲ್ಲದೆ ರಥಯಾತ್ರೆಯ ಯೋಜನೆಯ ರೂಪುರೇಷ ನಡೆಯುತ್ತಿದ್ದು, ಇದೊಂದು ಮತ್ತೊಂದು ಮೆಘಾ ಯಾತ್ರೆಯಾಗಲಿದೆ ಎಂದು ತಿಳಿದುಬಂದಿದೆ. ನವೆಂಬರ್ ೧ ರಿಂದ ಈ ರಥಯಾತ್ರೆ ಆರಂಭವಾಗಲಿದೆ ಎಂದು ತಿಳಿದುಬಂದಿದ್ದು, ಇದಕ್ಕಾಗಿ ಸರ್ವ ಸಿದ್ದತೆಗಳನ್ನು ನಡೆಸಲಾಗುತ್ತಿದೆ.
ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಿಗೂ ಈ ರಥಯಾತ್ರೆ ಸಂಚರಿಸಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಪರ ಅಲೆ ಸೃಷ್ಠಿಸಲು ಪ್ರಯತ್ನವೇ ಈ ರಥಯಾತ್ರೆ ಎಂದು ಹೇಳಲಾಗುತ್ತಿದೆ.
ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ರಥಯಾತ್ರೆ ಆರಂಭಿಸಲಾಗಿದ್ದು, ಈ ಹಿಂದೆ 1999ರಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಪಾಂಚಜನ್ಯ ರಥಯಾತ್ರೆ ನಡೆಸಿ ಅಧಿಕಾರದ ಗದ್ದುಗೆ ಏರಿದ್ದರು.

ಅದರ ಮುಂದುವರಿದ ಭಾಗವಾಗಿ ಸಿದ್ದರಾಮಯ್ಯ ರಥಯಾತ್ರೆ ನಡೆಯಲಿದೆ ಎಂದು ತಿಳಿದುಬಂದಿದ್ದು, ಇದರಲ್ಲಿ ಪಕ್ಷದ ಎಲ್ಲಾ ನಾಯಕರಿಗೆ ಆಹ್ವಾನವಿದೆ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಮುನಿಯಪ್ಪ ಸೇರಿ ಎಲ್ಲಾ ಹಿರಿಯ ನಾಯಕರಿಗೂ ಆಹ್ವಾನ ನೀಡಲಾಗುವುದು ಎಂದು ತಿಳಿದುಬಂದಿದ್ದು, ಈಗಾಗಲೇ ಇದಕ್ಕೆ ಸಾಕಷ್ಟು ಸಿದ್ಧತೆಗಳು ನಡೆದಿವೆ.
ರಥಯಾತ್ರೆ ವಾಹನದ ವಿಶೇಷತೆ
ಈ ರಥಯಾತ್ರೆಗಾಗಿ ವಿಶೇಷ ವಾಹನವನ್ನ ಸಿದ್ಧಪಡಿಸಲಾಗಿದ್ದು, ಮಿಸ್ಸುಬಿಷಿ ಕಂಪನಿ ವಾಹನವನ್ನು ವಿನೂತನವಾಗಿ ವಿನ್ಯಾಸಗೊಳಿಸಲಾಗಿದೆ. ಈ ವಾಹನದಲ್ಲಿ ಭಾಷಣ ಮಾಡಲು ವೇದಿಕೆ ಇದೆ. ಮಲಗುವ ಕೋಣೆ, ಶೌಚಾಲಯ, ಎಂಟು ಮಂದಿ ಸಭೆ ನಡೆಸಲು ಮೀಟಿಂಗ್ ರೂಮ್ ಗಳಿವೆ.

ಸಂಪೂರ್ಣ ಹವಾನಿಯಂತ್ರಿತವಾಗಿರುವ ವಾಹನ, ಎರಡು ಟಿವಿ ಅಳವಡಿಸಲಾಗಿದೆ, ವಿದ್ಯುತ್ ಪೂರೈಕೆಗಾಗಿ ಎರಡು ಜನರೇಟರ್ ವ್ಯವಸ್ಥೆಯಿದ್ದು, ನೀರಿನ ಟ್ಯಾಂಕ್ ಅಳವಡಿಸಲಾಗಿದೆ, ಸಿದ್ದರಾಮಯ್ಯ ಆಪ್ತ ಬಳಗವೇ ಈ ಯಾತ್ರೆಗೆ ಸಿದ್ಧತೆ ನಡೆಸುತ್ತಿದೆ.

#siddu rath yathre #panchajanya #sm krishna #siddaramaiah #assembly election preparation #siddaramaiah@75 #siddaramaosthava

More News

You cannot copy content of this page