ಹೈದರಾಬಾದ್ : ‘ಬಬ್ಲಿ ಬೌನ್ಸರ್’ ಚಿತ್ರದ ಪ್ರಚಾರದ ವೇಳೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಬೌನ್ಸರ್ಸ್ ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿರುವ ಘಟನೆ ವರದಿಯಾಗಿದೆ.
ಮಧುರ್ ಭಂಡಾರ್ಕರ್ ನಿರ್ದೇಶಿಸಿರುವ ‘ಬಬ್ಲಿ ಬೌನ್ಸರ್’ ಚಿತ್ರದ ಪ್ರಚಾರದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಈ ಸಿನಿಮಾದಲ್ಲಿ ತಮನ್ನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಸಿನಿಮಾ ಪ್ರಚಾರ ಕಾರ್ಯಕ್ರಮದ ವೇಳೆಯಲ್ಲಿ ನಟಿಯ ಫೋಟೋಗಳನ್ನು ತೆಗೆಯಲು ಫೋಟೋಗ್ರಾಫರ್ಸ್ ಮುಂದಾದ ವೇಳೆ ಹಾಗೂ ಪತ್ರಕರ್ತರು ಬೈಟ್ ತೆಗೆದುಕೊಳ್ಳಲು ಬಂದಾಗ ಫೋಟೋಗ್ರಾಫರ್ ಮತ್ತು ಪತ್ರಕರ್ತರು ಗಳನ್ನು ತಡೆದಿದ್ದಾರೆ. ಅಲ್ಲದೇ, ಪತ್ರಕರ್ತರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ್ದಾರೆ.


ಸಿನಿಮಾ ಪ್ರಚಾರದ ಸಂದರ್ಭದಲ್ಲಿ ನಟಿಯೊಂದಿಗೆ ಚರ್ಚೆ ಮಾಡಲು ಅವಕಾಶ ಇಲ್ಲದಿದ್ದಲ್ಲಿ ಯಾಕೆ ಪತ್ರಿಕಾಗೋಷ್ಠಿಗೆ ಕರೆಯಬೇಕು..? ಅದಲ್ಲದೇ, ಬೌನ್ಸರ್ ಗಳು ಪತ್ರಕರ್ತರನ್ನು ಕೆಟ್ಟದಾಗಿ ನಿಂದಿಸಿ ದೈಹಿಕ ಹಲ್ಲೆಗೂ ಮುಂದಾಗಿರುವುದು ಖಂಡನೀಯ. ಈ ಘಟನೆಯನ್ನು ಕೆಲವು ಪತ್ರಕರ್ತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.


ನಟಿಯಾದ ಮಾತ್ರಕ್ಕೆ ಅವರು ಮನುಷ್ಯರಲ್ಲವೇ, ಅವರ ಫೋಟೋ ತೆಗೆಯುವುದು ಸಹ ಅಪರಾಧವೇ ಎಂದು ನಟಿ ತಮನ್ನಾ ಅವರ ಬೌನ್ಸರ್ ವರ್ತನೆ ಬಗ್ಗೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ತಮನ್ನಾ ಆಪ್ತರು, ಇದು ತಮನ್ನಾ ಮತ್ತು ನಮ್ಮನ್ನು ಮುಜುಗರಕ್ಕೀಡು ಮಾಡಿದೆ ಎಂದು ತಿಳಿಸಿದ್ದಾರೆ.
#TAMANNAAH BHATIA #MADHUR BHANDARKAR #BABLI BOUNCERS #JOUNALIST #MILKY BEAUTY #ATTACK