ಕಿಚ್ಚ ಸುದೀಪ್ ಮಗಳು ಸಾನ್ವಿ ಸುದೀಪ್ ಹಾಡಿರೋ ಹಾಡೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ತಂದೆಯ ಸಿನಿಮಾ ವಿಕ್ರಾಂತ್ ರೋಣದ ತಣ್ಣನೆ ಬೀಸೋ ಗಾಳಿ ಹಾಡನ್ನು ಹಾಡಿರುವ ಸಾನ್ವಿ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ. ವೀಡಿಯೋ ಅಪ್ ಲೋಡ್ ಮಾಡುತ್ತಿದ್ದಂತೆ ಸಖತ್ ವೈರಲ್ ಆಗಿದೆ.

ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಸಾನ್ವಿ ಸುದೀಪ್ ಮಧುರ ಕಂಠದಲ್ಲಿ ಹಾಡನ್ನು ಕೇಳೋದೇ ಒಂದು ಚೆಂದ ಎಂದು ಕಮೆಂಟ್ ಗಳ ಸುರಿಮಳೆ ಗಯ್ಯುತ್ತಿದ್ದಾರೆ ನೆಟ್ಟಿಗರು.

ಸಾನ್ವಿ ಸುದೀಪ್ ಮ್ಯೂಸಿಕ್ ವಿದ್ಯಾರ್ಥಿಯೂ ಹೌದು, ಈ ಹಿಂದೆ ತಮ್ಮದೇ ಯೂಟ್ಯೂಬ್ ನಲ್ಲಿ ಹಾಡಿದ್ದ ರೈಸ್ ಅಪ್ ಹಾಡಿಗೂ ಭಾರೀ ಪ್ರಶಂಸೆ ಗಳಿಸಿಕೊಂಡಿದ್ದ ಸಾನ್ವಿ, ಇದೀಗ ತಂದೆಯ ವಿಕ್ರಾಂತ್ ರೋಣ ಸಿನಿಮಾದ ಜನಪ್ರಿಯ ಹಾಡಿಗೆ ಚೆಂದದ ದನಿ ನೀಡಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
#kichcha sudeep #actor sudeep #sanvi #singing #viral