ನವದೆಹಲಿ: ದೇಶದ ಜನರ ಬಹುನಿರೀಕ್ಷಿತ 5 ಜಿ ನೆಟ್ ವರ್ಕ್ ಇದೀಗ ದೇಶದ 12 ಪ್ರಮುಖ ನಗರಗಳಲ್ಲಿ ಲಭ್ಯವಾಗಲಿದೆ.
ಹಲವು ವರ್ಷಗಳಿಂದ ಪ್ರಯೋಗಾತ್ಮಕವಾಗಿದ್ದ ಹಾಗೂ ದೇಶದ ಜನರ ಬಹು ನಿರೀಕ್ಷಿತ ಅತಿವೇಗದ ತಂತ್ರಜ್ಞಾನವಾದ 5 ಜಿ ನೆಟ್ ವರ್ಕ್ ಗೆ ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.
ಇಂದಿನಿಂದ ದಿಲ್ಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿರುವ ಆರನೇ ಆವೃತ್ತಿಯ ಇಂಡಿಯಾ ಮೊಬೈಲ್ ಕಾಂಗ್ರೆಸ್- 2022 ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅತಿವೇಗದ ತಂತ್ರಜ್ಞಾನಕ್ಕೆ ಚಾಲನೆ ನೀಡಿದರು
ದೇಶದ ಒಟ್ಟು 12 ನಗರಗಳಾದ ದೆಹಲಿ, ಬೆಂಗಳೂರು, ಅಹಮದಾಬಾದ್, ಚಂಡೀಗಢ, ಚೆನ್ನೈ, ಕೋಲ್ಕತ್ತಾ, ಪುಣೆ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್ ನಗರ, ಲಕ್ನೋದಲ್ಲಿ 5 ಜಿ ಸೇವೆ ಆರಂಭಿಕ ಹಂತದಲ್ಲಿ ಸೇವೆ ಒದಗಿಸಲಿದ್ದು, ಅನಂತರ ದೇಶದಾದ್ಯಂತ ವಿಸ್ತಾರಗೊಳ್ಳಲಿದೆ.
ಮೊದಲ ಹಂತದಲ್ಲಿ 12 ಆಯ್ದ ನಗರಗಳಲ್ಲಿ ಮಾತ್ರವೇ 5 ಜಿ ಸೇವೆ ಲಭ್ಯವಾಗಲಿದೆ ಎಂದು ಬೇಸರ ಪಡಬೇಡಿ. ಮುಂದಿನ ಎರಡು ವರ್ಷಗಳ ಒಳಗಾಗಿ ದೇಶದಾದ್ಯಂತ ಸೇವೆ ಲಭ್ಯವಾಗಲಿದೆ ಎಂದು ಮೋದಿ ಹೇಳಿದ್ದಾರೆ ಸಭೆಯಲ್ಲಿ ಹೇಳಿದ್ದಾರೆ.
ವಿಶ್ವದಾದ್ಯಂತ ಅತಿವೇಗದ ನೆಟ್ ವರ್ಕ್ ಹೊಂದಿರುವ ದೇಶಗಳ ಪಟ್ಟಿಗೆ ಭಾರತ ಸೇರಿದ್ದು, 75 ನೇ ರಾಷ್ಟವಾಗಿ ಇದೀಗ 5 ಜಿ ಸೇವೆ ಆರಂಭಿಸಿದ ದೇಶವಾಗಿ ಭಾರತ ಸೇರ್ಪಡೆಗೊಂಡಿದೆ.
ವಿಶ್ವದ 75 ದೇಶಗಳ 1947 ನಗರಗಳಲ್ಲಿ 5ಜಿ ಸೇವೆ ಲಭ್ಯವಿದೆ. ಅದರಲ್ಲಿ ಟಾಪ್ 10 ರಾಷ್ಟ್ರಗಳು ಇಲ್ಲಿವೆ. ಅಮೆರಿಕಾದಲ್ಲಿ 296, ಚೀನಾ 356, ಕೆನಡಾ 84, ದಕ್ಷಿಣ ಕೊರಿಯಾ 85, ಇಟಲಿ 65, ಸ್ಪೇನ್ 71, ಜರ್ಮನಿ 58, ಯುನೈಟೆಡ್ ಕಿಂಗ್‌ಡಮ್ 57 ಹಾಗೂ ಸೌದಿಯಲ್ಲಿ 48 ನಗರಗಳಲ್ಲಿ 5 ಜಿ ಸೇವೆ ಸಧ್ಯಕ್ಕೆ ಚಾಲನೆಯಲ್ಲಿದೆ.
#5G INTERNET #PM NARENDRA MODI #LAUNCHED 5G INTERNET #13 CITIES WILL GET INTERNET