ಕರ್ನಾಟಕದ ಪ್ರಮುಖ ರಿಯಾಲಿಟಿ ಶೋ ಆದ ಬಿಗ್ ಬಾಸ್ ಸೀಸನ್ 9 ಎರಡನೇ ವಾರಕ್ಕೆ ಪಾದಾರ್ಪಣೆ ಮಾಡಿದ್ದು, ರೋಚಕ ತಿರುವುಗಳನ್ನು ಪಡೆಯುತ್ತಿರುವ ನಡುವೆ ಆರ್ಯವರ್ದನ್ ಗುರೂಜಿ ನಟಿ ಅಮೂಲ್ಯ ತುಟಿ ನೋಡಿ ಜೋತಿಷ್ಯ ಹೇಳಿರುವ ವಿಡಿಯೋ ಸಖತ್ ವೈರಲ್ ಆಗ್ತಿದೆ.
ಸಾಮಾನ್ಯವಾಗಿ ಕೈ ನೋಡಿ ಜೋತಿಷ್ಯ ಹೇಳುವವರಿದ್ದಾರೆ, ಮುಖ ನೋಡಿ ಜೋತಿಷ್ಯ ಹೇಳ್ತಾರೆ. ಆದರೆ, ಗುರೂಜಿ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ತುಟಿಗಳನ್ನು ಗಾಢವಾಗಿ ಗಮನಿಸುತ್ತಾ ಅಮೂಲ್ಯ ಭವಿಷ್ಯದ ಬಗ್ಗೆ ಜೋತಿಷ್ಯ ಹೇಳಿದ್ದಾರೆ. ಅದಕ್ಕೆ ಅಮೂಲ್ಯ ಸಹ ಸಖತ್ ಫಿದಾ ಆಗೋಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಒಂದಲ್ಲಾ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುವ ಆರ್ಯವರ್ಧನ್ ಗುರೂಜಿ ಇದೀಗ ಮತ್ತೆ ಚರ್ಚಾ ವಿಷಯವಾಗಿದ್ದಾರೆ. ಜ್ಯೋತಿಷ್ಯ ನಂಬಿಕೊಂಡು ಜೀವನ ನಡೆಸೋ ಗುರೂಜಿ ಇದೀಗ ದೊಡ್ಮನೆಯಲ್ಲಿ ಸಖತ್ ಹಾಟ್ ಹಾಟ್ ಆದ ವಿಷ್ಯಕ್ಕೆ ಪೇಮಸ್ ಆಗ್ತಿದ್ದಾರೆ.
ಬಿಗ್ ಬಾಸ್ ಆರಂಭಗೊಂಡು ವಾರ ಮುಗಿದಿದೆ. ಈ ನಡುವೆ ಸ್ಪರ್ಧಿಗಳ ನಡುವೆ ಹಲವಾರು ಪ್ರೇಮ ಕಥೆಗಳು, ಪಂಚ್ ಡೈಲಾಗ್ ಗಳು, ಗಲಾಟೆ, ಜಗಳ ನಡುವೆ ಸಖತ್ ಎಂಟರ್ ಟೈನ್ ಮೆಂಟ್ ಕೊಡ್ತಿದ್ದಾರೆ. ದೊಡ್ಮನೆಯಲ್ಲಿ ಇದೀಗ ಕಾಲಿಗೆ ಒಂದು ಕಾಲ ಎಂಬ ಟಾಸ್ಕ್ ಅನ್ನು ಕೊಡಲಾಗಿದೆ.
ದಿವ್ಯಾ ಉರುಡುಗ ಮತ್ತು ಸಾನ್ಯ ಒಂದು ಜೋಡಿ ಮತ್ತು ದೀಪಿಕಾ ಮತ್ತು ರೂಪೇಶ್ ಮತ್ತೊಂದು ಜೋಡಿಯಾಗಿ ಎರಡು ತಂಡಗಳ ಜಟಾಪಟಿ ನಡೆದಿದೆ. ಇಂತಹ ಸಂದರ್ಭದಲ್ಲಿ ನಟಿ ಅಮೂಲ್ಯ ಮತ್ತು ಗುರೂಜಿ ನಡುವಿನ ಸಂಭಾಷಣೆ ಎಲ್ಲರನ್ನೂ ಸೆಳೆಯುವಂತೆ ಮಾಡಿದೆ.
ಮನೆಯಲ್ಲಿ ಟಾಸ್ಕ್ ಮಾಡುವ ಸಮಯದಲ್ಲಿ ಗುರೂಜಿ ಅಮೂಲ್ಯ ಕಡೆಗೆ ನೋಡುತ್ತಾ ಭವಿಷ್ಯವನ್ನು ಹೇಳಿದ್ದಾರೆ. ನಿಮ್ಮ ತುಟಿ ಮೇಲೆ ಚೂಪಾಗಿದೆ. ಹೀಗಿದ್ದರೆ ಒಳ್ಳೆಯದು ಎಲ್ಲರೂ ನಿಮ್ಮನ್ನು ಇಷ್ಟಪಡುತ್ತಾರೆ ಎಂದು ಗುರೂಜಿ ಹೇಳಿದ್ದಾರೆ. ಅದಕ್ಕೆ ಅಮೂಲ್ಯ ಒಂದು ಸ್ಮೈಲ್ ಕೊಟ್ಟು ಗುರೂಜಿ ಮಾತಿಗೆ ಸಮ್ಮತಿ ಸೂಚಿಸಿದ್ದಾರೆ.

ಈ ನಡುವೆ ಮಧ್ಯೆ ಬಂದ ರಾಕೇಶ್ ಅಡಿಗ ನನ್ನ ತುಟಿ ಭವಿಷ್ಯ ಹೇಳಿ ಎಂದು ಕೇಳಿದ್ದಾರೆ. ಆಗ ಗುರೂಜಿ, ನಿನ್ನ ಹಿಂದೆ ಯಾರು ಬೀಳಲ್ಲ, ನೀನೇ ಎಲ್ಲರ ಹಿಂದೆ ಹೋಗುತ್ತೀಯಾ ಟಾಂಗ್ ಕೊಟ್ಟಿದ್ದಾರೆ. ಅಲ್ಲದೇ ಮಧ್ಯೆ ಬಂದ ಅರುಣ್ ಸಾಗರ್ ಕೂಡ ನನ್ನ ತುಟಿ ನೋಡಿ ಭವಿಷ್ಯ ಹೇಳಿ ಎಂದಿದ್ದಾರೆ. ನೀವು ಮೊದಲು ಮೀಸೆ ಬೊಳಿಸಿಕೊಂಡು ಬನ್ನಿ ಎಂದರು.
#bigg boss season 9 #actress amulya #aryaverdhan guruji #lips astrology #lips astrology viral