ಸಿನಿಮಾಗಳಲ್ಲಿ ನಟಿಸಲು ನಟ – ನಟಿಯರು ಸಾಕಷ್ಟು ಕಸರತ್ತನ್ನು ಮಾಡುತ್ತಿರುತ್ತಾರೆ. ಪಾತ್ರದೊಳಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಲು ವಿವಿಧ ರೀತಿಯಲ್ಲಿ ಅಭ್ಯಾಸ ಮಾಡುತ್ತಾರೆ. ಶ್ರಮಪಡುತ್ತಾರೆ. ಹಾಗೆಯೇ ಟಾಲಿವುಡ್ ನಟಿ ಮೃಣಾಲ್ ಠಾಕೂರ್ ತಮ್ಮ ಸಿನಿಮಾಗಾಗಿ ಎರಡು ವಾರ ವೇಶ್ಯಗೃಹದಲ್ಲಿದ್ದರು ಎಂಬ ಅಂಶವನ್ನು ಅವರೇ ಹೇಳಿಕೊಂಡಿದ್ದಾರೆ.
ಇತ್ತೀಚೆಗಷ್ಟೇ ಒಟಿಟಿಗೆ ಬಂದ ಸೀತಾ ರಾಮ್ ಸಿನಿಮಾ ನೋಡಿದ ಪ್ರೇಕ್ಷಕರು ಮೃಣಾಲ್ ಅಭಿನಯಕ್ಕೆ ಫಿದಾ ಆಗಿದ್ದಾರೆ. ಸೀತಾ ಮಹಾಲಕ್ಷ್ಮಿ ಪಾತ್ರದಲ್ಲಿ ಮೃಣಾಲ್ ಠಾಕೂರ್ ಕಾಣಿಸಿಕೊಂಡಿದ್ದು, ಅವರ ಅತ್ಯುತ್ತಮ ಅಭಿನಯಕ್ಕಾಗಿ ಪ್ರಶಂಸೆಗೆ ಒಳಗಾಗಿದ್ದಾರೆ.
“ಖಿನ್ನತೆಗೆ ಒಳಗಾಗಿದ್ದೆ”
ಸಿನಿಮಾ ಸಕ್ಸಸ್ ಸ್ಟೋರಿ ಬಗ್ಗೆ ಸುದ್ದಿ ಮಾದ್ಯಮವೊಂದಕ್ಕೆ ಮಾತನಾಡಿರುವ ಅವರು, ಸಿನಿಮಾ ಚಿತ್ರೀಕರಣ ವೇಳೆ ಲೈಂಗಿಕ ಕಾರ್ಯಕರ್ತರ ಮನೆಯಲ್ಲಿ ವೇಶ್ಯೆಯರೊಂದಿಗೆ ಸಮಯ ಕಳೆದೆ.

ಅವರ ಕಥೆಗಳನ್ನು ಕೇಳಿ ಭಾವುಕಳಾದೆ. ಅವರು ಹೇಗಿದ್ದಾರೆ, ಅವರ ಸ್ಥಿತಿ ಏನಾಗಿದೆ ಎಂದು ತಿಳಿಯಲು ಅಲ್ಲಿಗೆ ಹೋಗಿದ್ದೆ. ಆದರೆ ಅಲ್ಲಿಂದ ಹೊರಬಂದ ನಂತರವೂ ಅದೇ ವಿಷಯಗಳು ನೆನಪಾಗಿ ಖಿನ್ನತೆಗೆ ಒಳಗಾಗಿದ್ದೆ ಎಂದು ಮೃಣಾಲ್ ಹೇಳಿದ್ದಾರೆ.

ಸೀತಾರಾಮ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಅಷ್ಟೇನೂ ಓಡಲಿಲ್ಲ. ಆದರೆ, ಹಣ ಗಳಿಸದಿದ್ದರೂ, ಸಾಕಷ್ಟು ಹೆಸರು ಮಾಡಿದೆ. ಮೃಣಾಲ್ ಗೆ ಇದೀಗ ತೆಲುಗು ಸಿನಿಮಾ ಕ್ಷೇತ್ರದಲ್ಲಿ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ.

ಸೀತಾರಾಮ ಚಿತ್ರದ ಯಶಸ್ಸಿನ ನಂತರ ಮೃಣಾಲ್ ಠಾಕೂರ್ ಸಂಭಾವನೆ ದುಪ್ಪಟ್ಟಾಗಿದ್ದರೂ ಕೂಡ ಆಫರ್ ಬರುತ್ತಿವೆ. ದುಲ್ಕರ್ ಜೊತೆ ಮೃಣಾಲ್ ಕೆಮೆಸ್ಟ್ರಿ ಸುಂದರವಾಗಿ ಮೂಡಿ ಬಂದಿದ್ದು ನಟಿ ಇಂಥದ್ದೇ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ ಎನ್ನಲಾಗಿದೆ.
