ಉತ್ತರಕನ್ನಡ: ಕಳಪೆ ರಸ್ತೆ ಕಾಮಗಾರಿ, ಕಾಮಗಾರಿ ನಡೆಸದೇ ಹಣ ಮಂಜೂರು ಸೇರಿದಂತೆ ಇನ್ನಿತರ ಆರೋಪದ ಹಿನ್ನೆಲೆಯಲ್ಲಿ ಭಟ್ಕಳ ಶಾಸಕ ಸುನೀಲ್ ನಾಯ್ಕ ಅವರಿಗೆ ತಮ್ಮ ಪಕ್ಷದ ಕಾರ್ಯಕರ್ತರೇ ಕಪ್ಪು ಬಾವುಟ ಪ್ರದರ್ಶಿಸಿದ್ದರಿಂದ ತೀವ್ರ ಮುಖಭಂಗ ಎದುರಿಸಿದರು.
ಹೊನ್ನಾವರದ ಚಿಕ್ಕನಕೊಡ್ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಟೆಬೈಲ್ ನಲ್ಲಿ ಸನ್ಮಾನ ಸ್ವೀಕರಿಸಲು ಬಂದ ಶಾಸಕ ಸುನೀಲ್ ನಾಯ್ಕರಿಗೆ ಬಿಜೆಪಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಈ ಸಂದರ್ಭದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನೆಲೆಸಿತ್ತು.

ಕಳೆದ ಐದು ವರ್ಷಗಳಿಂದ ಬಿಜೆಪಿ ಶಾಸಕ ಸುನಿಲ್ ನಾಯ್ಕ ಅವರ ಕಾರ್ಯವೈಖರಿಗೆ ಬೇಸತ್ತ ಕಾರ್ಯಕರ್ತರು, ಕಳಪೆ ರಸ್ತೆ ಕಾಮಗಾರಿ, ಕಾಮಗಾರಿ ನಡೆಸದೇ ಹಣ ಮಂಜೂರು ಮಾಡಿದ್ದಾರೆ ಎಂದು ಆರೋಪಿಸಿದರು.

ವೇದಿಕೆ ಮೇಲಿದ್ದ ಶಾಸಕ ಸುನಿಲ್ ನಾಯ್ಕಗೆ ಇದರಿಂದ ತೀವ್ರ ಮುಖಭಂಗ ಎದುರಿಸುವಂತಾಯಿತು. ಈ ಸಂದರ್ಭದಲ್ಲಿ ಶಾಸಕರ ಬೆಂಬಲಿಗರಿಂದ ಕಪ್ಪು ಬಾವುಟ ಪ್ರದರ್ಶಿಸಿದ ಕಾರ್ಯಕರ್ತರ ಮೇಲೆ ಹಲ್ಲೆಗೆ ಮುಂದಾಗಿದ್ದರು.

ಪೊಲೀಸರ ಆಗಮನದಿಂದ ಪರಿಸ್ಥಿತಿ ಸಹಜ ಸ್ಥಿತಿಗೆ ಮರುಕರುಳಿಸಿತು.