ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಅವಧಿ ಮುಗಿದ ಮೇಲೆ ಕ್ಯಾಪ್ಟನ್ ಕೊಠಡಿಯಲ್ಲಿ ಮಿತಿ ಮೀರಿದ್ದ ರೂಪೇಶ್ ಮತ್ತು ಸಾನ್ಯಳ ನಡೆಗೆ ನಟ ಸುದೀಪ್ ಖಡಕ್ ವಾರ್ನಿಂಗ್ ನೀಡುತ್ತಿದ್ದಂತೆ ರೂಪೇಶ್ ಗಳಗಳನೆ ಅತ್ತಿದ್ದಾರೆ.
ದೊಡ್ಮನೆಯಲ್ಲಿ ಕ್ಯಾಪ್ಟನ್ ಅವಧಿ ಪೂರ್ತಿಯಾದ ಮೇಲೆ ಆ ಸ್ಥಾನಕ್ಕೆ ನಿಯೋಜನೆಯಾದ ಮತ್ತೊಬ್ಬರು ಬರುತ್ತಾರೆ. ಆ ಸ್ಥಾನವನ್ನು ಬಿಟ್ಟು ಕೊಡುವುದು ಸಂಪ್ರದಾಯ. ಆದರೆ, ರೂಪೇಶ್ ಮತ್ತು ಸಾನ್ಯ ರೂಂನಲ್ಲಿಯೇ ಇದ್ದುದರ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಪ್ರೇಮಿಗಳು ಎಂಬಂತೆ ಕಾಣಿಸಿಕೊಂಡ ರೂಪೇಶ್ ಮತ್ತು ಸಾನ್ಯಗೆ ಸುದೀಪ್ ಟೈಟ್ ವಾರ್ನಿಂಗ್ ಕೊಡ್ತಿದ್ದಂತೆಯೇ ಗಪ್ ಚಿಪ್ ಆಗಿದ್ದಾರೆ. ಕ್ಯಾಪ್ಟೆನ್ಸಿ ಅವಧಿಯ ನಂತರ ಗುರೂಜಿ ಜೊತೆ ಮಾತನಾಡುತ್ತ ಬೆಡ್ ಮೇಲೆ ರೂಪೇಶ್ ಮತ್ತು ಸಾನ್ಯ ಮಲಗಿರುವ ರೀತಿಗೆ ಸುದೀಪ್ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರೂಪೇಶ್ ನಾನೇನು ಮಾಡಿಲ್ಲ ಅಂತ ಭಾವುಕರಾಗಿ ಕಣ್ಣೀರಿಟ್ಟರು.

ಕ್ಯಾಪ್ಟನ್ಸಿ ಮುಗಿದ ನಂತರ ನೀವೇನಾದರೂ ಪಿಕ್ ನಿಕ್ ಮಾಡುತ್ತಾ ಇದ್ರಾ. ಕ್ಯಾಪ್ಟನ್ ರೂಂ ಗೆ ಒಂದು ವಿಶೇಷವಾದ ಗೌರವ, ಮರ್ಯಾದೆ ಇದೆ ಅದನ್ನು ನೀವುಗಳು ಮೋಜು ಮಾಡಿಕೊಳ್ಳುವ ಪ್ಲೇಸ್ ಮಾಡ್ಕೋಬೇಡಿ ಅಂತ ಸುದೀಪ್ ಹೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ರೂಪೇಶ್ ನಮ್ಮ ಉದ್ದೇಶ ಆ ರೀತಿ ಇರಲಿಲ್ಲ. ನಾನು ಯಾವಾಗಲೂ ಆ ರೀತಿ ಮಾಡಿಲ್ಲ ಎಂದು ಸ್ಪಷ್ಟನೆ ನೀಡಲು ಮುಂದಾದರು.
ನೀವಿಲ್ಲಿನ ನಿಯಮ ಮೀರಿ ನಡ್ಕೊತೀದೀರಾ. ಅದಕ್ಕಾಗಿಯೇ ನಾವು ಇವತ್ತು ಇದನ್ನ ಹೇಳಬೇಕಾಗಿ ಬಂದಿದೆ. ಮಿಡ್ ನೈಟ್ ನಲ್ಲಿ ಹಗ್ ಮಾಡ್ಕೋತೀರಾ, ಅದಕ್ಕೆ ನಾವು ಕೇರ್ ಮಾಡಿಲ್ಲ. ಸಮಸ್ಯೆ ಇರುವುದು ಅದಲ್ಲ. ಬಿಗ್ ಬಾಸ್ ಮನೆಯಲ್ಲಿ ಅನೇಕರು ಕ್ಲೋಸ್ ಆಗಿದ್ದರು. ಆದರೆ, ಅವಾಗ ಹೀಗೆಲ್ಲಾ ಯಾರೂ ಮಾಡಿರಲಿಲ್ಲ. ನೀವು ಮಾಡಿದೀರಾ ಅಂದಿದ್ದಕ್ಕೆ ಹೇಳ್ತಿರೋದು. ಅರ್ಥ ನೀವೇ ಮಾಡ್ಕೊಬೇಕಿದೆ ಎಂದು ಸುದೀಪ್ ಹೇಳಿದ್ದಾರೆ.

ಈ ಸಂದರ್ಭದಲ್ಲಿ ತುಂಬಾ ಭಾವುಕರಾದ ರೂಪೇಶ್, ಸರ್ ನಮ್‌ತಾಯಿಯಾಣೆಗೂ ನಾವೇನು ಕೆಟ್ಟ ಉದ್ದೇಶ ಇಟ್ಕೊಂಡಿರಲಿಲ್ಲ. ನಾನು ಮನೆಯಿಂದ ವಾಕ್ ಔಟ್ ಆಗಿಬಿಡ್ತೇನೆ ಬೇಕಾದರೆ. ಈ ಮನೆಯಲ್ಲಿ ಯಾರ ಮೇಲೆನೂ ತಪ್ಪು ಉದ್ದೇಶ ಇಟ್ಕೊಂಡಿಲ್ಲ. ನನ್ನ ತಾಯಿಗಿಂತ ದೊಡ್ಡ ದೇವರಿಲ್ಲ. ಎಲ್ಲರನ್ನೂ ಹಾಗೇ ಕಾಣ್ತೀನಿ. ನಿಮಗೆ ನಾನು ಆತರ ಕಾಣಿಸಿದ್ರೆ ಇವತ್ತೇ ಔಟ್ ಆಗೋಕೆ ರೆಡಿಯಿದ್ದೀನಿ. ನನ್ನ ತಾಯಿ ಆಣೆಗೂ ಇಲ್ಲಿರೋರಲ್ಲಿ ಯಾರ ಮೇಲೂ ನನಗೆ ಆ ತರಹದ ಭಾವನೆ ಇಲ್ಲ. ಅದ್ಯಾಕೆ ಹಾಗೆ ಕಾಣ್ತು ಅಂತ ನನಗೆ ಗೊತ್ತಿಲ್ಲ. ಕಂಡಿದೆ ಅಂದ್ರೆ ಅದಕ್ಕೆ ನನ್ನದೇ ತಪ್ಪು. ವಾಕ್ ಆಫ್ ಆಗೋದಕ್ಕೂ ರೆಡಿ ಇದ್ದೀನಿ ಎಂದು ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
#biggboss house #sanya #rupeesh #crying #kichcha sudeep #instruction #aryavedhan guruji