KGF ದಾಖಲೆ ಮುರಿದ ಕಾಂತಾರ: ಒಂದು ಕೋಟಿ ವೀಕ್ಷಕರ ಸಂಖ್ಯೆ ದಾಟಿದ ಸಿನಿಮಾ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಅನೇಕ ಚಿತ್ರಗಳು ಹೊರಬಂದಿವೆ. ಕೋಟ್ಯಾಂತರ ಹಣ ವ್ಯಯಿಸಿ ನಿರ್ಮಾಣ ಮಾಡಿ ನಿರ್ಮಿಸಿದ ಸಿನಿಮಾ ಕೆಲವೊಂದು ಕ್ಲಿಕ್ ಆದ್ರೆ ಮತ್ತಷ್ಟು ಪ್ಲಾಪ್ ಆಗಿವೆ. ಆದರೆ, ಇದೀಗ ಹೊಂಬಾಳೆ ಪಿಲಮ್ಸ್ ನಿರ್ಮಾಣ ಮಾಡಿರುವ ಕಾಂತಾರ ಚಿತ್ರವು ಭರ್ಜರಿ ಜನ ಮೆಚ್ಚುಗೆ ಗಳಿಸಿದ್ದು, ಲಕ್ಷಾಂತರ ಜನ ವೀಕ್ಷಿಸಿದ್ದಾರೆ. ಅಲ್ಲದೆ, ಈ ಸಿನಿಮಾ ಸುಮಾರು 200 ಕೋಟಿ ಗಳಿಸಿದ್ದು, ಇದು ಕೆಜಿಎಫ್ ನಿರ್ಮಿಸಿದ ದಾಖಲೆಯನ್ನು ಮೀರಿದೆ.

ಕರ್ನಾಟಕದ ಐತಿಹಾಸಿಕ ಹಿನ್ನೆಲೆ, ನಾಡಿದ ಭೂತಾರಾದನೆ, ದೈವಾರಾದನೆ, ತುಳು ಸಂಸ್ಕೃತಿ ಸೇರಿದಂತೆ ವಿಭಿನ್ನ ಶೈಲಿಯಲ್ಲಿ ಈ ಚಿತ್ರವು ನಿರ್ಮಾಣ ಆಗಿದೆ. ಅದಕ್ಕಾಗಿ ಸಿನಿಮಾ ಅನ್ಯ ಭಾಷೆಗಳಲ್ಲಿಯೂ ಬಿಡುಗಡೆ ಆಗಿದೆ. ಸತತವಾಗಿ ಯಶಸ್ವಿ ಚಿತ್ರಗಳನ್ನು ದೇಶದ ಚಲನಚಿತ್ರರಂಗಕ್ಕೆ ಕೊಡುಗೆಯಾಗಿ ನೀಡಿ ಮೆಚ್ಚುಗೆ ಗಳಿಸಿದೆ. ದೇಶ-ವಿದೇಶಗಳಲ್ಲಿ ಜನಮೆಚ್ಚುಗೆ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ.

ಹೊಂಬಾಳೆ ಬ್ಯಾನರ್ ನಲ್ಲಿ ನಿರ್ಮಿಸಿದ ಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ನೋಡಿದ ಚಿತ್ರ ಇದಾಗಿದ್ದು, ಕೇವಲ 25 ದಿನಗಳು ಕರ್ನಾಟಕದಲ್ಲಿ ಪ್ರದರ್ಶನಗೊಂಡಿದ್ದು, 77 ಲಕ್ಷ ಮಂದಿ ನೋಡಿದ್ದಾರೆ. ಈ ಹಿಂದೆ 2017 ರಲ್ಲಿ ಬಿಡುಗಡೆಯಾದ ಪುನೀತ್ ರಾಜ್ ಕುಮಾರ್ ನಟಿಸಿದ್ದ ರಾಜಕುಮಾರ ಚಲನಚಿತ್ರ ಹಿಟ್ ಆಗಿತ್ತು. ಇದನ್ನು 65 ಲಕ್ಷ ಜನರು ನೋಡಿದ್ದರು.
ಇನ್ನು 2018 ರಲ್ಲಿ ಯಶ್ ನಟಿಸಿರುವ ಕೆಜಿಎಫ್ 1 ಚಿತ್ರ ಬಿಡುಗಡೆಯಾಯಿತು. ಇದು ಇಡೀ ದೇಶದಾದ್ಯಂತ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿತ್ತು. ಈ ಚಿತ್ರವನ್ನು ಈವರೆಗೆ ಕರ್ನಾಟಕದಲ್ಲಿ 75 ಲಕ್ಷ ಜನರು ವೀಕ್ಷಿಸಿದ್ದರು. ಉಳಿದಂತೆ 2022 ರಲ್ಲಿ ಕೆಜಿಎಫ್ 2 ರಿಲೀಸ್ ಆಯಿತು. ಅದು ಸಹ ಎಲ್ಲೆಡೆ ಭರ್ಜರಿ ಬಿಡುಗಡೆ ಗೊಂಡು ದೇಶ ವಿದೇಶಗಳಲ್ಲಿ ಸದ್ದು ಮಾಡಿತು. ಅಲ್ಲದೇ, ಇಡೀ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಮಾಡಿತ್ತು. ಅದರ ನಂತರ ಈಗ ಕಾಂತಾರ ಸದ್ದು ಮಾಡುತ್ತಿದೆ.

ರಿಷಬ್ ಶೆಟ್ಟಿಯೇ ನಿರ್ದೇಶನ ಮಾಡಿ, ನಟಿಸಿರುವಂತಹ ಕಾಂತಾರ ಸಿನಿಮಾ ಕೆಜಿಎಫ್ ‌2 ದಾಖಲೆಗಳನ್ನು ಬ್ರೇಕ್ ಮಾಡಿದೆ. ಇದುವರೆಗೂ ಹೊಂಬಾಳೆ ಫಿಲಮ್ಸ್ ನಿರ್ಮಿಸಿರುವ ಚಲನಚಿತ್ರಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಹೆಚ್ಚು ಜನ ವೀಕ್ಷಿಸಿದ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರು ಮಾಹಿತಿ ಹಂಚಿಕೊಂಡಿದ್ದಾರೆ.

ಒಟ್ಟಾರೆ ಇದುವರೆಗಿನ ಎಲ್ಲಾ ಹಿಂದಿನ ದಾಖಲೆಗಳನ್ನು ಇಪ್ಪತ್ತೈದು ದಿನಗಳಲ್ಲಿಯೇ ಬ್ರೇಕ್ ಮಾಡಿ ಮುನ್ನುಗ್ಗುತ್ತಿದೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ. ಅಲ್ಲದೆ, ಇದು ಹೀಗೆ ಮುಂದುವರಿಯಲಿದ್ದು, ಮುಂದಿನ ವಾರಕ್ಕೆ ಇನ್ನಷ್ಟು ಪ್ರೇಕ್ಷಕರು ಸಿ‌ನಿಮಾ‌ ನೋಡಲಿದ್ದು, ಒಂದು ಕೋಟಿ ವೀಕ್ಷಕರ ಸಂಖ್ಯೆ ದಾಟಲಿದೆ ಎಂದು ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ತಿಳಿಸಿದ್ದಾರೆ.

#Kantara #DivineBlockbusterKantara #Hombalefilms #KantaraFilm

#shetty_rishab #VKiragandur #hombalefilms

More News

You cannot copy content of this page