ಆಸ್ಟ್ರೇಲಿಯಾ: T20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ಎದುರು ಗೆಲ್ಲುವ ಮೂಲಕ ಭಾರತವು ಶುಭಾರಂಭ ಪಡೆದುಕೊಂಡಿದೆ. ಈ ಆಟದಲ್ಲಿ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಆರ್ದಿಕ್ ಪಾಂಡ್ಯ ಇಬ್ಬರ ನಿರ್ವಹಣೆಯಿಂದ ಗೆಲ್ಲಲು ಸಾಧ್ಯವಾಯಿತು ಎನ್ನುವುದು ಸತ್ಯ. ಇದೇ ಸಂದರ್ಭದಲ್ಲಿ ಮಾತನಾಡಿರುವ ಹಾರ್ದಿಕ್ ಪಾಂಡ್ಯ, ತಂಡದ ಎಲ್ಲರೂ ಆಟವನ್ನು ಗೆಲ್ಲಿಸುವ ಕಡೆಗೆ ಆಡಿದರು. ಅದರಲ್ಲಿಯೂ 19 ನೇ ಓವರ್ ನಲ್ಲಿ ವಿರಾಟ್ ಕೊಯ್ಲಿ ಹೊಡೆದ ಆ ಎರಡು ಸಿಕ್ಸರ್ ಗಳು ಇಡೀ ಆಟವನ್ನು ಶಾಂತಗೊಳಿಸಿತು. ಗೆಲ್ಲುವ ಭರವಸೆಯನ್ನು ಹೆಚ್ಚು ಮಾಡಿತು. ಆ ಎರಡು ಸಿಕ್ಸರ್ ಗಳು ಆಟ ಗೆಲ್ಲಲು ಮುಖ್ಯವಾಯಿತು ಎಂದು ಶ್ಲಾಘಿಸಿದ್ದಾರೆ.
ಕೊಯ್ಲಿ ಬ್ಯಾಟ್ ನಿಂದ ಸಿಡಿದ ಸಿಕ್ಸರ್ ವಿಶೇಷವಾದದ್ದು
ನಾನು ಅನೇಕ ಸಲ ಸಿಕ್ಸರ್ ಬಾರಿಸಿದ್ದೇನೆ. ಆದರೆ, ಇಂದು ಕೊಯ್ಲಿ ಬ್ಯಾಟ್ ನಿಂದ ಸಿಡಿದ ಸಿಕ್ಸರ್ ವಿಶೇಷವಾದದ್ದು. ಕೊಯ್ಲಿಯಿಂದ ಮಾತ್ರ ಇಂತಹ ಸಿಕ್ಸರ್ ಬಾರಿಸಲು ಸಾಧ್ಯವಾಗುತ್ತದೆ. ಅವರ ಆಟವೇ ಒಂದು ವಿಶಿಷ್ಟ. ಹೀಗಾಗಿ, ಅವರಿಗೆ ಎಲ್ಲೆಡೆ ಹೆಚ್ಚು ಅಭಿಮಾನಿಗಳಿದ್ದಾರೆ. ಬೇರೆ ಬೇರೆ ಕಡೆಯಿಂದ ಅವರ ಆಟ ನೋಡಲು ಬರ್ತಾರೆ. ಅದು ಕೊಯ್ಲಿಯ ವಿಶೇಷತೆಗೆ ಹಿಡಿದ ಕನ್ನಡ ಎಂದೆಲ್ಲಾ ಬಣ್ಣಿಸಿದ್ದಾರೆ.

ಭಾನುವಾರ ಆರಂಭವಾದ ಟೂರ್ನಿಯಲ್ಲಿ ಭಾರತ ತಂಡವನ್ನು ಗೆಲ್ಲಿಸಬೇಕಂತ ನಾವೆಲ್ಲರೂ ಶ್ರಮ ಪಟ್ಟಿದ್ದೇವೆ. ಅದರಲ್ಲಿ ಅಸಾಧಾರಣ ಹೊಡೆತ ಹೊಡೆದಿದ್ದರೆ ಈ ಮ್ಯಾಚ್ ಗೆ ಇಷ್ಟೊಂದು ಇಂಪಾರ್ಟೆಂಟ್ ಆಗ್ತಾ ಇರಲಿಲ್ಲ. ಇಡೀ ತಂಡ ಇನ್ನೊಂದು ತಂಡದ ಎದುರು ಹೋರಾಡಿ ಗೆದ್ದಿದೆ. ಅದಕ್ಕಾಗಿ ಈ ಟೂರ್ನಿಯು ಮುಖ್ಯ ಎನಿಸಿದೆ ಎಂದು ಅವರು ಪಾಂಡ್ಯ ಹೇಳಿದ್ದಾರೆ.
ವಿಶ್ವಕಪ್ ಟೂರ್ನಿ ಆರಂಭದಲ್ಲೇ ಬ್ಯಾಟಿಂಗ್ ಪಡೆದುಕೊಂಡ ಪಾಕಿಸ್ತಾನವು ಉತ್ತಮ ಆಟ ಆಡಿತು. ಅನಂತರ ಬ್ಯಾಟಿಂಗ್ ಪಡೆದ ಭಾರತದ ಆಟಗಾರರು ಆರಂಭದಿಂದಲೂ ಉತ್ತಮ ಪ್ರತಿಕ್ರಿಯೆ ತೋರುತ್ತಿದ್ದರು. ಆದರೆ, ಅಷ್ಟು ವೇಗವಾಗಿ ಸಾಗಲು ಸಾಧ್ಯವಾಗಲಿಲ್ಲ.

ಆ ಬಳಿಕ ಬಂಡ ವಿರಾಟ್ ಕೊಯ್ಲಿ ಮತ್ತು ಹಾರ್ದಿಕ್ ಪಾಂಡ್ಯ ತಂಡವನ್ನು ಯಶಸ್ವಿನ ಗುರಿಯ ಕಡೆಗೆ ಕರೆದೊಯ್ದರು. ಇಡೀ ಆಟವು ಎಲ್ಲರನ್ನೂ ಆಕರ್ಷಿತು. ಒಂದೊಂದು ಕ್ಷಣವೂ ರೋಚಕವಾಗುತ್ತಲೇ ಹೋಯಿತು. ಕೊನೆ ಕ್ಷಣದಲ್ಲಿ ಕೈ ತಪ್ಪಬೇಕಾಗಿದ್ದ ಆಟವನ್ನು ಕೊನೆ ಬಾಲ್ ನಲ್ಲಿ ರನ್ ಬಾರಿಸಿ ಆಟವನ್ನು ಗೆಲ್ಲಿಸಿದರು.
#HARDICK PANDYA @VIRAT KOHLI #T-20 CRICKET #BEST GAME