DHANANJAYA, RISHAB SHETTY: ಡಾಲಿ ಬೆಂಬಲಕ್ಕೆ ನಿಲ್ಲದ ರಿಷಬ್ : ನೆಟ್ಟಿಗರಿಂದ ಟ್ರೋಲ್

ಹಲವು ಭಾಷೆಗಳಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇದು ಹಲವಾರು ವಿವಾದಕ್ಕೆ ಗುರಿಯಾಗಿತ್ತು. ಅದರ ನಡುವೆ ಡಾಲಿ ಧನಂಜಯ ನಟಿಸಿರುವ ಹೆಡ್ ಬುಷ್ ಸಿನಿಮಾ ವಿವಾದಕ್ಕೀಡಾಗಿದ್ದು, ಚಿತ್ರರಂಗದ ಅನೇಕರು ಡಾಲಿ ಪರವಾಗಿ ಬ್ಯಾಟಿಂಗ್ ಬೀಸಿದ್ದಾರೆ. ಆದರೆ, ರಿಷಬ್ ಶೆಟ್ಟಿ ಯಾವುದೇ ಪ್ರತಿಕ್ರಿಯೆ ನೀಡದೇ ಮೌನವಾಗಿರುವ ಬಗ್ಗೆ ಡಾಲಿ ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದೆ‌.

ಕಾಂತಾರ ಸಿನಿಮಾ ಬಿಡುಗಡೆಯಾದ ನಂತರ ಭೂತಾರಾದರೆ, ಕೋಲ ಮತ್ತಿತರ ಸಂಗತಿಗಳ ಕುರಿತು ಪರ ಮತ್ತು ವಿರೋಧ ಚರ್ಚೆ ನಡೆಯಿತು. ಅಲ್ಲದೆ, ಈ ವಿವಾದವು ರಾಜಕೀಯಕ್ಕೆ ತಿರುಗಿತು. ಈ ಸಂದರ್ಭದಲ್ಲಿ ಸಿನಿಮಾ ಕುರಿತು ಹಾಗೂ ರಿಷಬ್ ಶೆಟ್ಟಿ ಪರ ನಟರು, ವಿದ್ವಾಂಸರು, ಸಾಹಿತಿಗಳು ಸೇರಿ ಅನೇಕರು ಧ್ವನಿ ಎತ್ತಿದರು. ಅದೇ ತರ ಡಾಲಿ ಧನಂಜಯ ನಟಿಸಿರುವ ಹೆಡ್ ಬುಷ್ ಸಿನಿಮಾ ಈಗ ವಿವಾದಕ್ಕೀಡಾಗಿದೆ‌.

https://twitter.com/s_a_n_j_u_U/status/1585611556666023937?s=20&t=JlIL8FgvVRi4197jbXo47Q

ಸಾಕಷ್ಟು ಜನ ಧನಂಜಯ್ ಪರ ಬೆಂಬಲವಾಗಿ ನಿಂತಿದ್ದಾರೆ. ಚಿತ್ರರಂಗದ ಕೆಲ ತಾರೆಯರು ಧನಂಜಯ್ ಪರ ಬ್ಯಾಟ್ ಬೀಸಿದ್ದಾರೆ. ಆದರೆ ರಿಷಬ್ ಶೆಟ್ಟಿ ಯಾಕೆ ಮಾತನಾಡುತ್ತಿಲ್ಲ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಡ್‌ಬುಷ್‌ ಚಿತ್ರದಲ್ಲಿನ ವೀರಗಾಸೆ ಹಾಗೂ ವೀರಭದ್ರ ಸ್ವಾಮೀಜಿ ಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಧನಂಜಯ್ ವಿರುದ್ಧವೂ ಆಪಾದನೆ ಮಾಡಲಾಗುತ್ತಿದೆ. ಆದರೆ ಸಾಕಷ್ಟು ಜನ ಸಿನಿಮಾ ನೋಡಿ ಆಕ್ಷೇಪ ವ್ಯಕ್ತಪಡಿಸುವಂತಹ ಯಾವುದೇ ಅಂಶ ಚಿತ್ರದಲ್ಲಿ ಇಲ್ಲ. ಸಿನಿಮಾವನ್ನು ಸಿನಿಮಾ ಆಗಿ ನೋಡಿ. ಸುಖಾ ಸುಮ್ಮನೆ ಅದಕ್ಕೆ ಬೇರೆ ಬಣ್ಣ ಬಳಿಯಬೇಡಿ ಎಂದು ಹೇಳುತ್ತಾ ಬಂದಿದ್ದಾರೆ.

ಇತ್ತೀಚಿಗೆ ಪ್ರೀ ರಿಲೀಸ್ ಕಾರ್ಯಕ್ರಮ ಮಾಡಿದ ವೇಳೆಯಲ್ಲಿ ಬಡವರ ಮಕ್ಳು ಬೆಳೀಬೇಕ್ ಕಣ್ರಯ್ಯಾ ಎಂದು ಧನಂಜಯ್ ಹೇಳಿದ್ದರು. ಅದೇ ಹೇಳಿಕೆಯನ್ನು ಬಳಸಿಕೊಂಡು ಡಾಲಿ ಪರ ಸೋಶಿಯಲ್ ಮೀಡಿಯಾ ದಲ್ಲಿ ಟ್ರೆಂಡ್ ಮಾಡಲಾಗಿತ್ತು.
ಸೋಶಿಯಲ್ ಮೀಡಿಯಾ ದಲ್ಲಿ ರಿಷಬ್ ಶೆಟ್ಟಿ ಯನ್ನು ತರಾಟೆಗೆ ತೆಗೆದುಕೊಂಡಿರುವ ನೆಟ್ಟಿಗರು, ಯಾಕೆ ಶೆಟ್ರೆ ಭಯನಾ? ಅಂತ ಟ್ರೋಲ್ ಮಾಡುತ್ತಿದ್ದಾರೆ.
ಅಲ್ಲದೆ, ರಿಷಬ್ ಶೆಟ್ಟಿಗೆ ಅಭದ್ರತೆ ಕಾಡುತ್ತಿದೆ‌. ಸಿನಿಮಾ ನೋಡಿ ಮಾತನಾಡದೇ ಇದ್ದರೂ ಪರವಾಗಿಲ್ಲ. ಕೊನೆ ಪಕ್ಷ ಈ ವಿವಾದದ ವಿಚಾರದಲ್ಲಿ ಒಂದು ಪೋಸ್ಟ್ ಮಾಡಿ ಬೆಂಬಲಕ್ಕೆ ನಿಲ್ಲಬಹುದಲ್ಲ ಎಂದು ಪ್ರಶ್ನಿಸಿದ್ದಾರೆ.

ಚಿತ್ರರಂಗ ಅಂದಮೇಲೆ ನಮ್ಮ ಮನೆಯಿದ್ದಂಗೆ‌. ಇಲ್ಲಿ ಒಬ್ಬರಿಗೆ ಕಷ್ಟ ಬಂದಿದೆ ಅಂದರೆ ಅವರ ಜೊತೆಗೆ ನಿಲ್ಲಬೇಕು. ಕಾಂತಾರ ಚಿತ್ರ ನೋಡಿ ಧನಂಜಯ ನಿಮ್ಮ ಅಭಿಮಾನಿಯಾದೆ ಎಂದು ಸಿನಿಮಾ ಮೆಚ್ಚಿ ಬರೆದುಕೊಂಡಿದ್ದರು. ನೀವು ಅವರ ಸಿನಿಮಾ ಹೆಡ್ ಬುಷ್ ವಿವಾದಕ್ಕೆ ಸಿಲುಕಿದಾಗ ಯಾಕೇ ನಿಮ್ಮ ಮೌನ ಅಂತ ಪ್ರಶ್ನಿಸಿದ್ದಾರೆ.

More News

You cannot copy content of this page