ಬೆಂಗಳೂರು : ರಾಜ್ಯಾದ್ಯಂತ ಭರ್ಜರಿಯಾಗಿ ಬಿಡುಗಡೆಯಾದ ಕನ್ನಡ ಚಿತ್ರರಂಗದ ಮೇರು ನಟ ಪುನೀತ್ ರಾಜ್‍ಕುಮಾರ್ ಅವರು ನಟಿಸಿರುವ ಗಂಧದ ಗುಡಿ ಡಾಕ್ಯುಮೆಂಟರಿ ಚಿತ್ರದಲ್ಲಿ ಬರುವ “ಹೆಂಡ್ತಿ ಮಕ್ಳನ್ನು ಬಿಟ್ ಬಂದಿದ್ದೀನಿ, ಸೇಫ್ ಆಗಿ ಮನೆಗೆ ಹೋಗ್ತೀನಾ?” ಅನ್ನುವ ಡೈಲಾಗ್ ಪ್ರೇಕ್ಷಕರನ್ನು ಭಾವುಕರನ್ನಾಗಿಸಿದೆ.
ರಾಜ್ಯದ 200 ಕ್ಕಿಂತ ಹೆಚ್ಚಿನ ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆ ಆಗಿದೆ. ಯಾವುದೇ ಮೇಕಪ್ ಇಲ್ಲದೇ, ಅತಿಯಾದ ಡೈಲಾಗ್ ಗಳಿಲ್ಲದೇ ಸರಳವಾಗಿ ಹಾಗೂ ಸಹಜವಾಗಿ ನಟಿಸಿದ್ದಾರೆ. ಕಾಡಿನ ಮಧ್ಯೆ ಹೋದಾಗ, ವಿಷ ಸರ್ಪಗಳನ್ನು ಕಾಣುತ್ತಾರೆ. ಹುಲಿ, ಚಿರತೆಗಳನ್ನು ನೋಡುತ್ತಾರೆ. ಈ ಸಂದರ್ಭದಲ್ಲಿ ಅವರಾಡುವ ಮಾತುಗಳು ಪುನೀತ್ ಇಲ್ಲದಿರುವ ನೆನಪನ್ನು ಮರು ನೆನಪಿಸುತ್ತದೆ.
ಕಾಡಿನಲ್ಲಿ ಹಾವುಗಳನ್ನು ಕಾಣುತ್ತಾ ನಾನೀಗ ಹೆಂಡ್ತಿ ಮಕ್ಕಳನ್ನು ಮನೇಲಿ ಬಿಟ್ಟು ಬಂದಿದ್ದೀನಿ. ಸೇಫ್ ಆಗಿ ಮನೆ ಸೇರ್ತೀನಿ ತಾನೆ? ಅನ್ನುತ್ತಾರೆ. ಈ ದೃಶ್ಯ ನೋಡುಗರ ಮನದಲ್ಲಿ ಭಾವುಕತೆಯನ್ನು ತರಿಸುತ್ತದೆ. ಅಂದು ಸೇಫ್ ಆಗಿ ಬಂದವರು, ಇಂದು ನಮ್ಮೊಂದಿಗೆ ಇಲ್ಲ ಅನ್ನುವುದು ನೋವಿನ ಸಂಗತಿಯಾಗಿದೆ.

ಡಾಕ್ಯುಮೆಂಟರಿ ಮಾದರಿಯ ಈ ಚಿತ್ರ ನಿಜಕ್ಕೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಪುನೀತ್ ರಾಜ್‍ಕುಮಾರ್ ಗಂಧದ ಗುಡಿ ಹೆಸರಿನಲ್ಲಿ ಡಾಕ್ಯುಮೆಂಟರಿ ಮಾಡಿದ್ದಾರೆ. ಕುತೂಹಲಕ್ಕಿಂತ ಅನುಮಾನಿಸಿದವರೆ ಹೆಚ್ಚು. ಓಟಿಟಿ ಮೂಲಕ ಜಗತ್ತಿನ ಸಿನಿಮಾಗಳು ನಮ್ಮುಂದಿರುವಾಗ, ಡಿಸ್ಕವರಿ ಚಾನೆಲ್ ಗಳು ನಮ್ಮ ಬೆರಳ ತುದಿಯಲ್ಲೇ ನಲಿಯುತ್ತಿರುವಾಗ, ಅದಕ್ಕಿಂತ ಅಪ್ಪು ಇನ್ನೇನು ಮಾಡುವುದಕ್ಕೆ ಸಾಧ್ಯ? ಅಂತ ಅನಿಸಿದ್ದೂ ಇದೆ. ಪುನೀತ್ ಡ್ಯಾನ್ಸ್, ಡೈಲಾಗ್, ನಟನೆ, ನಗುವನ್ನು ಬೆಳ್ಳಿ ಪರದೆಯಲ್ಲಿ ನೋಡಿ, ಕಣ್ತುಂಬಿಕೊಂಡಿದ್ದಾರೆ.
ಆನೆ, ಹುಲಿ, ಕರಡಿ, ಚಿರತೆ, ಕಪ್ಪೆ, ಹಾವು, ಚೇಳು, ಜಿಂಕೆ, ಪಾತರಗಿತ್ತಿ, ಮೀನು, ಮೊಸಳೆ ಎಂತಹ ಅದ್ಭುತ ಪಾತ್ರಗಳು ಗಳು ಕಾಣಿಸಿಕೊಂಡಿವೆ. ಎಲ್ಲವಕ್ಕೂ ನಟನೆ ಕಲಿಸಿದವರಾರು, ಹಾಡು ಹೇಳಿಕೊಟ್ಟವರು ಯಾರು? ಅವು ಏಕೆ ಹಾಗೆ ಜೀವಿಸುತ್ತವೆ? ಎಂಬ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋಗಿದ್ದಾರೆ.
ಸಿನಿಮಾ ನೋಡಿದ ಮೇಲೆ ಸುಧಾಮೂರ್ತಿ ಪ್ರತಿಕ್ರಿಯೆ ನೀಡಿದ್ದು, ಇದುವರೆಗೆ ಕನ್ನಡದಲ್ಲಿ ಅನೇಕ ಸಿನಿಮಾ ಗಳು ಬಂದಿವೆ. ಆದರೆ, ಇಂತಹ ಒಂದು ಸಿನಿಮಾ ಬಂದಿಲ್ಲ. ಇದನ್ನು ನೋಡಿ ನನಗೆ ಗರ್ವ ಅನಿಸಿತು. ಇದಕ್ಕೆ ನಾನು ಫುಲ್ ಮಾರ್ಕ್ಸ್ ಗಳು ನೀಡ್ತೀನಿ ಅಂತ ಎಂದಿದ್ದಾರೆ.
ಯುವಜನರು ಈ ಸಿನಿಮಾ ನೋಡಬೇಕು. ಅದರಲ್ಲಿ ಅವರು ತಿಳಿದುಕೊಳ್ಳಲು ಹಲವಾರು ಅಂಶಗಳು ಇವೆ. ಅದರಲ್ಲೂ ನನ್ನ ಉತ್ತರ ಕರ್ನಾಟಕದ ಬಗ್ಗೆ ತೋರಿಸಿದಾಗ ಮತ್ತು ಮಾತನಾಡಿದಾಗ ನಾನು ಭಾವುಕಳಾದೆ ಎಂದಿದ್ದಾರೆ.

ರಾಜ್ಯಾದ್ಯಂತ ಬಿಡುಗಡೆ ಆಗಿರುವ ಪುನೀತ್ ರಾಜ್ ಕುಮಾರ್ ಕನಸಿನ ಗಂಧದ ಗುಡಿ ಚಿತ್ರದಲ್ಲಿ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಕೂಡ ಇದ್ದಾರೆ. ಚಿತ್ರ ಶುರುವಾಗುವುದು ಅಶ್ವಿನಿ ಅವರ ಮಾತಿನ ಮೂಲಕ. ಅವರು ಅಪ್ಪುವನ್ನು ಬಣ್ಣಿಸುವ ರೀತಿಯೇ ಸೊಗಸು. ಒಂದಷ್ಟು ಅಚ್ಚರಿ, ಒಂದಷ್ಟು ಭಾವುಕತೆ ಮತ್ತಷ್ಟು ಚಿತ್ರ ನೋಡುವ ಕುತೂಹಲವನ್ನು ಅಶ್ವಿನಿ ಹುಟ್ಟು ಹಾಕುತ್ತಾರೆ. ಆನಂತರ ಪುನೀತ್ ಹೊಸ ಲೋಕಕ್ಕೆ ನೋಡುಗರನ್ನು ಕರೆದುಕೊಂಡು ಹೋಗುತ್ತಾರೆ.
#gandhada gudi #sudha murthy #puneeth rajkumar #ashwini puneet rajkumar #i left wife children in city #return i have to go #dialogue #fans cry #emotional dialogue