ಮಂಡ್ಯ : ಅಪ್ಪುವಿನ ಕೊನೆಯ ಚಿತ್ರ ಗಂಧದಗುಡಿ ಇಂದು ಬಿಡುಗಡೆಯಾದ ಹಿನ್ನೆಲೆಯಲ್ಲಿ ಮಂಡ್ಯದಲ್ಲಿನ ಶ್ರೀ ನಿಮಿಷಾಂಭ ದೇಗುಲಕ್ಕೆ ಪುನೀತ್ ರಾಜ್ ಕುಮಾರ್ ಅವರ ಪತ್ನಿ ಅಶ್ವಿನಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಪೂಜೆ ಸಲ್ಲಿಕೆ ಸಂದರ್ಭದಲ್ಲಿ ಗಂಧದ ಗುಡಿ ಚಿತ್ರದ ನಿರ್ದೇಶಕ ಅಮೋಘವರ್ಷ ಅವರು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರಿಗೆ ಸಾಥ್ ನೀಡಿದರು. ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಗಂಜಾಮ್ ನಲ್ಲಿರುವ ಶ್ರೀ ನಿಮಿಷಾಂಭ ದೇಗುಲದಲ್ಲಿ ಪೂಜೆ ಸಲ್ಲಿಸಿದರು.
ಪೂಜೆ ನಂತರ ಚಿತ್ರದ ನಿರ್ದೇಶಕ ಅಮೋಘವರ್ಷ ಮಾತನಾಡಿದ, ‘ಗಂಧದಗುಡಿ ಅಭಿಮಾನಿಗಳ ಸಿನಿಮಾ’, ಅಪ್ಪು ಅಂದ್ರೆ ಪ್ರೀತಿ, ಇನ್ನು ಅಭಿಮಾನಿಗಳ ಹೃದಯದಲ್ಲೇ ಅಪ್ಪು ಕಾಣಬಹುದು ಎಂದು ತಿಳಿಸಿದ್ದಾರೆ.

ಅಭಿಮಾನಿಗಳು ಚಿತ್ರ ನೋಡಿ ಖುಷಿಪಟ್ಟರೆ ನಮಗೆ ಅದೇ ಸಂತೋಷ ಎಂದು ನಿರ್ದೇಶಕ ಅಮೋಘವರ್ಷ ತಿಳಿಸಿದ್ದಾರಲ್ಲದೆ, ಅಪ್ಪು ಅವರು ನಮಗೆ ಬಿಟ್ಟು ಹೋಗಿರುವ ಕಥೆ ಹಾಗೆಯೇ ಅಪ್ಪು ಅವರು ಹೇಳಿದ್ದನ್ನ ನಾವು ಜೀವನದಲ್ಲಿ ಅಳವಡಿಸಿಕೊಂಡರೇ ನಮ್ಮಲ್ಲೆ ಅಪ್ಪು ಸರ್ ನಾ ಕಾಣಬಹುದು ಎಂದು ಹೇಳಿದರು.

ಅಪ್ಪು ಅವರ ಜೊತೆ ಶೂಟಿಂಗ್ ಸಮಯದಲ್ಲಿ ಕಾಲ ಕಳೆದಿದ್ದೇನೆ, ಅಪ್ಪು ಅವರನ್ನ ತುಂಬಾ ಮಿಸ್ ಮಾಡುಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
#gandhada gudi film #special pooja #sri Nimishambha temple #amoghaversha #fans movie #film released today