GANDHADA GUDI RELEASED: ರಾಜ್ಯದೆಲ್ಲೆಡೆ ಬಿಡುಗಡೆಯಾದ ಅಪ್ಪುವಿನ ಗಂಧದ ಗುಡಿ ಚಿತ್ರ: ಚಿತ್ರಮಂದಿರದ ಮುಂದೆ ಅಭಿಮಾನಿಗಳ ಹರ್ಷೋದ್ಘಾರ

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗದಲ್ಲಿ ಅಪ್ಪು ಅಭಿಮಾನಿಗಳ ಹರ್ಷೋದ್ಘಾರ, ಡ್ಯಾನ್ಸ್, ಸಂತಸ. ಅನೇಕರು ಸಿಹಿ ರಂಚಿ ಸಂಭ್ರಮಿಸಿದರೆ, ಇನ್ನು ಹಲವರು ಸಿನಿಮಾ ನೋಡಿ ಸಂಭ್ರಮ ಪಟ್ಟರು.
ಇಂದು ಅಪ್ಪು ಅಭಿನಯದ ಕೊನೆಯ ಚಿತ್ರ ಗಂಧದ ಗುಡಿ ರಿಲೀಸ್. ಬೆಳಗ್ಗಿನಿಂದಲೇ ಅನೇಕ ಚಿತ್ರಮಂದಿರಗಳಲ್ಲಿ ನೂಕು ನುಗ್ಗಲು, ಬೆಳಗ್ಗಿನ 5.30 ಗಂಟೆಯ ಶೋ ನೋಡಲು ಬಂದ ಸಾವಿರಾರು ಸಂಖ್ಯೆಯ ಅಭಿಮಾನಿಗಳು, ಪರಮಾತ್ಮನ ದರ್ಶನ ಪಡೆದು ಕಣ್ತುಂಬಿಕೊಂಡು ‘ಪುನೀತ’ರಾದ ಅಪ್ಪು ಫ್ಯಾನ್ಸ್.

ಅಪ್ಪು ಅಪ್ಪು, ಅಪ್ಪು ಅಮರ್ ಹೇ ಎಂಬ ಜೈಕಾರ ಕೂಗಿದ ಅಭಿ’ಮಾನಿಗಳು, ಸಂಭ್ರಮಿಸಿದರಲ್ಲದೆ, ಗಂಧದ ಗುಡಿ ಸಿನಿಮಾ ಶತದಿನೋತ್ಸವ ಆಚರಿಸಲಿ ಎಂದು ಕೇಕ್ ಕಟ್ ಮಾಡಿ ಶುಭ ಹಾರೈಸಿದರು.
ಗಂಧದಗುಡಿ ಅಪ್ಪು ಅವ್ರ ಕೊನೆಯ ಚಿತ್ರ ಅಲ್ಲ: ಶಿವರಾಜ್ ಕುಮಾರ್
ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದ ಬಳಿ ಬೆಳಗ್ಗೆನೇ ಬಂದಿದ್ದ ಶಿವರಾಜ್ ಕುಮಾರ್, ನಾನು ಇಂದು ಸಂಜೆ ಸಿನಿಮಾ ನೋಡುತ್ತೇನೆ. ಗಂಧದಗುಡಿ ಅಪ್ಪು ಅವರ ಕೊನೆಯ ಚಿತ್ರವಲ್ಲ, ಇದು ಆರಂಭ, ಅಪ್ಪು ಯಾವಾಗಲೂ ನಮ್ಮ ಜೊತೆ ಇರುತ್ತಾರೆ ಎಂದು ತಿಳಿಸಿದರು.

ಪ್ರಕೃತಿಯ ಬಗ್ಗೆ ಗಂಧದಗುಡಿಯಲ್ಲಿ ಅಪ್ಪಾಜಿ ಅತ್ಯುತ್ತಮ ಸಂದೇಶ ಸಾರಿದ್ದಾರೆ. ಅದರಿಂದ ಅದೆಷ್ಟೋ ಜನ ಪ್ರೇರಣೆಯಾಗಿದ್ದರು. ನನ್ನ ಅದೃಷ್ಟ ನಾನು ಗಂಧದಗುಡಿ ಪಾರ್ಟ್ ೨ ಮಾಡಿದ್ದೆ, ಇಂದು ಅತಿವೃಷ್ಠಿ ಆಗುತ್ತಿದೆ, ಪ್ರಕೃತಿಯಲ್ಲಿ ಏರೇಪೇರು ಆಗುತ್ತಿದೆ, ಕಾಡಿನ ಮಹತ್ವದ ಬಗ್ಗೆ ಅಪ್ಪು ತಿಳಿಸಿದ್ದಾರೆ ಎಂದು ವಿವರಿಸಿದರು.

ಅಭಿಮಾನಿಗಳು ಅಪ್ಪುವನ್ನ ನೋಡಲು ಚಿತ್ರಮಂದಿರಕ್ಕೆ ಬರಬೇಕು, ಅವರಿಗೆ ಈ ಮೂಲಕ ಗೌರವ ಸಲ್ಲಿಸೋಣ ಎಂದು ಶಿವರಾಜ್ ಕುಮಾರ್ ಕರೆನೀಡಿದರು.

#gadhada gudi film released #appu gadhada gudi #puneeth rajkumar #fans celebrated like festival #appu amar he #shivarajkumar #wish

More News

You cannot copy content of this page