ಟಾಲಿವುಡ್ ನಲ್ಲಿ ಅಭಿನಯಿಸಿ ಜನಮನ ಗೆದ್ದ ನಟ ವಿಜಯ್ ದೇವರಕೊಂಡ ಬಹುಭಾಷ ನಟಿ ಮೇಲೆ ಕ್ರಶ್ ಆಗಿದ್ದ ಘಟನೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಹಾಕಿದೆ.
ಸಮಂತಾ ಅಭಿನಯಿಸಿರುವ ಯಶೋಧ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು. ಅದನ್ನು ವಿಜಯ್ ತನ್ನ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಅದರ ಡಿಸ್ಕ್ರಿಪ್ಷನ್ ನಲ್ಲಿ ಬರೆದುಕೊಂಡಿರುವ ಅವರು, ಕಾಲೇಜ್ ದಿನಗಳಲ್ಲಿ ಸಮಂತಾ ಅವರ ಸಿನಿಮಾಗಳನ್ನು ನೋಡುತ್ತಿದ್ದೆ, ದೊಡ್ಡ ಪರದೆ ಮೇಲೆ ಅವರನ್ನು ನೋಡಿ ಪ್ರೀತಿಯಲ್ಲಿ ಬಿದ್ದೆ. ಇವತ್ತಿಗೆ ಆಕೆ ಏನು ಆಗಿದ್ದಾರೆ, ಸಂಪೂರ್ಣವಾಗಿ ಮೆಚ್ಚಿ ಮತ್ತು ಆರಾಧಿಸುವೆ. ಖುಷಿಯಿಂದ ಟ್ರೈಲರ್ ಹಂಚಿಕೊಳ್ಳುತ್ತಿರುವೆ ವೀಕ್ಷಿಸಿ ಎಂದು ಬರೆದುಕೊಂಡಿದ್ದಾರೆ.
Was in love with her, when as a college kid I saw her on the big screen for the first time. Today I admire and adore her for everything she is ❤️
— Vijay Deverakonda (@TheDeverakonda) October 27, 2022
So very happy to share with you all @Samanthaprabhu2's new film #YashodaTrailer ▶️ https://t.co/uT9gyBAj62
In theatres 11-11-2022 pic.twitter.com/KcYMnvj8sf
ತೆಲುಗು ಮತ್ತು ತಮಿಳು ಭಾಷೆಯಲ್ಲಿ ಚಿತ್ರೀಕರಣ ಪೂರ್ಣಗೊಂಡ ಯಶೋಧ ಸಿನಿಮಾ, ಅನ್ಯಭಾಷೆಗಳಾದ ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇದನ್ನು ಕೃಷ್ಣ ಪ್ರಸಾದ್ ನಿರ್ಮಾಣ ಮಾಡಿದ್ದು, ಪ್ರಚಾರಕ್ಕೆ ಸಹಾಯ ಮಾಡುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಹೇಳಿದ್ದಾರೆ. ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಪಡೆದಿರುವ ಸಿನಿಮಾ ಯಶಸ್ವಿಯಾಗಿ ಮುನ್ನಡೆಯುವ ಸಾಧ್ಯತೆ ಇದೆ. ವಿಜಯ್ ದೇವರಕೊಂಡ, ಸೂರ್ಯ, ರಕ್ಷಿತ್ ಶೆಟ್ಟಿ, ದುಲ್ಕರ್ ಸಲ್ಮಾನ್ ಮತ್ತು ವರುಣ್ ಧವನ್ ಟ್ರೈಲರ್ ರಿಲೀಸ್ ಮಾಡಿದ್ದಾರೆ.

ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಯೂಟ್ಯೂಬ್‌ನಲ್ಲಿ ಸಖತ್ ವೈರಲ್ ಆಗಿತ್ತು. ಸಮಂತಾ ಅಭಿನಯ ಮತ್ತು ಮಣಿಶ್ರಮ ಬಿಜಿಎಮ್‌ನ ಸಿನಿ ರಸಿಕರು ಮೆಚ್ಚಿಕೊಂಡಿದ್ದಾರೆ. ಟ್ರೈಲರ್‌ನಲ್ಲಿ ಚಿತ್ರದ ಕಥೆಯನ್ನು ರಿವೀಲ್ ಮಾಡಿದ್ದರೂ ಸಿನಿಮಾ ನೋಡಲು ಅಭಿಮಾನಿಗಳು ಹಿಂದೇಟು ಹಾಕುವುದಿಲ್ಲ. ಶ್ರೀದೇವಿ ಮೂವಿಸ್ ಮೂಲಕ ಪ್ರಚಾರ ಶುರು ಮಾಡಿದ್ದು ನವೆಂಬರ್ 11ರಂದು 5 ಭಾಷೆಯಲ್ಲಿ ರಿಲೀಸ್ ಆಗುತ್ತದೆ ಎನ್ನಲಾಗಿದೆ.
ಯಶೋಧ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಹಿಂದಿ ಜೊತೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ವಿಶೇಷ ಎಂದರೆ ಸಮಂತಾ ಈ ಸಿನಿಮಾದಲ್ಲಿ ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವೈದ್ಯರು ಸಮಂತಾಗೆ ಗರ್ಭಿಣಿ ಎಂದು ಹೇಳುವ ಮೂಲಕ ಪ್ರಾರಂಭವಾಗುವ ಟೀಸರ್ ಭಾರಿ ಕುತೂಹಲ ಸೃಷ್ಟಿಮಾಡಿದೆ.
ಆರೋಗ್ಯ ಕಾಪಾಡಿಕೊಳ್ಳಲು ಸಲಹೆ
ವೈದ್ಯರು ಸಮಂತಾಗೆ ಸರಿಯಾಗಿ ನೋಡ್ಕಳ್ಳಿ ಎಂದು ಸಲಹೆಯಿಟ್ಟಿದ್ದಾರೆ. ಆದರೂ ಸಹ ಹೈ ಆಕ್ಷನ್ ಸ್ಟಂಟ್ ಗಳನ್ನು ಮಾಡುವುದು, ಓಡುವುದು, ವೈಟ್ ಎತ್ತುವುದು ಸೇರಿದಂತೆ ಸಿಕ್ಕಾಪಟ್ಟೆ ಸ್ಟಂಟ್ ಗಳನ್ನು ಮಾಡುವ ಮೂಲಕ ಸಮಂತಾ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಯಶೋಧ ಸಿನಿಮಾ ಜೊತೆಗೆ ಬೇರೆ ಬೇರೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಶಾಕುಂತಲಂ, ಖುಷಿ ಸೇರಿದಂತೆ ಇನ್ನು ಅನೇಕ ಸಿನಿಮಾಗಳಲ್ಲಿ ಹೆಜ್ಜೆ ಹಾಕಿರುವ ಸಮಂತಾ ಸಖತ್ ಬ್ಯುಸಿಯಾಗಿದ್ದಾರೆ. ವಿಜಯ್ ದೇವಕೊಂಡ ಜೊತೆ ಖುಷಿ ಸಿನಿಮಾ ಮಾಡಿದ್ರೆ ಶಾಕುಂತಂ ನಲ್ಲಿ ಶಾಂಕುಂತಲೆ ಪಾತ್ರ ಮಾಡಿದ್ದಾರೆ. ಇನ್ನು ಹಿಂದಿಯಲ್ಲಿ ಮತ್ತೊಂದು ವೆಬ್ ಸರಣಿ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಇನ್ನು ಸಮಂತಾ ಇನ್ನು ಅಧಿಕೃತವಾಗಿ ಹೇಳಿಕೆ ನೀಡಿಲ್ಲ.
#VIJAY DEVERAKONDA #SAMANTHA #YASHODHA FILM #MULTI LANGUAGE #SHAKUNTHALA #KHUSHI WEB SERIES #PAN INDIA FILM