ಆಸ್ಟ್ರೇಲಿಯಾ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸತತ ಎರಡು ಗೆಲುವಿನೊಂದಿಗೆ ಮುನ್ನುಗ್ಗುತ್ತಿರುವ ಟೀಂ ಇಂಡಿಯಾ, ಇದೀಗ ಸೆಮಿಫೈನಲ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದೆ.
ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ದೊರೆತ ಅದ್ಭುತ ಗೆಲುವಿನ ಬೆನ್ನಲ್ಲೇ ನೆದರ್ಲೆಂಡ್ಸ್ ಸವಾಲು ಎದುರಿಸಿದ ರೋಹಿತ್ ಶರ್ಮ ಪಡೆ, 56 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಆ ಮೂಲಕ ಸೂಪರ್-12 ಹಂತದಲ್ಲಿ ಆಡಿರುವ ಎರಡು ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಭಾರತ, 4 ಪಾಯಿಂಟ್ಸ್ ಪಡೆದಿದ್ದು, +1.425 ನೆಟ್ ರನ್ ರೇಟ್‌ನೊಂದಿಗೆ ಗ್ರೂಪ್-2ನಲ್ಲಿ ಅಗ್ರಸ್ಥಾನಯಾಗಿದೆ.

ನೆದರ್ಲೆಂಡ್ ವಿರುದ್ಧ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ಭಾರತದ ಪರ ನಾಯಕ ರೋಹಿತ್ ಶರ್ಮಾ 53 ರನ್ (39 ಎಸೆತ, 4ಬೌಂಡರಿ, 3 ಸಿಕ್ಸರ್) ವಿರಾಟ್ ಕೊಹ್ಲಿ ಅಜೇಯ 62 ರನ್ (44 ಎಸೆತ, 3 ಬೌಂಡರಿ 2 ಸಿಕ್ಸರ್), ಸೂರ್ಯ ಕುಮಾರ್ ಅಜೇಯ 51 ರನ್ ( 25 ಎಸೆತ, 7 ಬೌಂಡರಿ, 1 ಸಿಕ್ಸರ್) ಸಿಡಿಸಿದರು. ಪರಿಣಾಮ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 179 ರನ್ ಕೆಲೆಹಾಕಿತು.
ಈ ಸವಾಲು ಬೆನ್ನತ್ತಿದ ನೆದರ್ಲೆಂಡ್ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 123 ರನ್‌ಗಳಿಸಲಷ್ಟೇ ಶಕ್ತವಾಯಿತು. ಬ್ಯಾಟಿಂಗ್‌ನಂತೆ ಬೌಲಿಂಗ್‌ನಲ್ಲೂ ಮಿಂಚಿದ ಭಾರತದ ಪರ ಭುವನೇಶ್ವರ್ 9ಕ್ಕೆ 2, ಅಕ್ಸರ್ ಪಟೇಲ್ 18ಕ್ಕೆ 2, ಆರ್ಷದೀಪ್ 37ಕ್ಕೆ 2 ವಿಕೆಟ್ ಪಡೆದರು.
ಇದರೊಂದಿಗೆ ಸೂಪರ್-12ನಲ್ಲಿ ಸತತ ಎರಡು ಗೆಲುವು ಸಾಧಿಸಿರುವ ಭಾರತ, ಅ.30ರಂದು ಪರ್ತ್‌ನಲ್ಲಿ ನಡೆಯಲಿರುವ ತನ್ನ ಮುಂದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನ ಎದುರಿಸಲಿದೆ.
ಗ್ರೂಪ್‌ನಲ್ಲಿ ಬಲಿಷ್ಠ ತಂಡವಾಗಿ ಕಾಣಿಸಿರುವ ಸೌತ್ ಆಫ್ರಿಕಾ ವಿರುದ್ಧದ ಪಂದ್ಯವನ್ನ ಗೆದ್ದಲ್ಲಿ ಟೀಂ ಇಂಡಿಯಾದ ಸೆಮೀಸ್ ಹಾದಿ ಇನ್ನಷ್ಟು ಸುಗಮವಾಗಲಿದೆ. ಇದಾದ ಬಳಿಕ ಭಾರತ ನವೆಂಬರ್ 2ರಂದು ಬಾಂಗ್ಲಾದೇಶ ಹಾಗೂ ನವೆಂಬರ್ 6ರಂದು ನಡೆಯುವ ಪಂದ್ಯದಲ್ಲಿ ಜಿಂಬಾವ್ವೆ ತಂಡವನ್ನ ಎದುರಿಸಲಿದೆ.

ಟೀಂ ಇಂಡಿಯಾ ಮುಂದಿನ ಮೂರು ಪಂದ್ಯಗಳಲ್ಲಿ ಗೆದ್ದಲ್ಲಿ ಸುಲಭವಾಗಿ ಸೆಮೀಸ್ ಪ್ರವೇಶಿಸಲಿದೆ. ಒಂದೊಮ್ಮೆ ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಸೋತಿದ್ದೇ ಆದಲ್ಲಿ, ಸೆಮೀಸ್ ಪ್ರವೇಶಿಸಲು ಭಾರತ ಸ್ವಲ್ಪಮಟ್ಟಿನ ಸಂಕಷ್ಟ ಎದುರಿಸಬೇಕಾಗುತ್ತದೆ. ಈಗಾಗಲೇ ನೆದರ್ಲೆಂಡ್ ವಿರುದ್ಧ ಗೆದ್ದಿರುವ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದ ವಿರುದ್ಧ 1 ರನ್‌ಗಳ ರೋಚಕ ಗೆಲುವು ಕಂಡಿರುವ ಜಿಂಬಾವ್ವೆ ಕೂಡ ಟೀಂ ಇಂಡಿಯಾಕ್ಕೆ ಸಮಬಲದ ಪ್ರತಿಸ್ಪರ್ಧೆ ನೀಡುವ ಸಾಧ್ಯತೆ ಇದೆ.
#team india #perth #t20 cricket world cup #pakistan #netherlands #south africa #semi finals