ಬೆಂಗಳೂರು : ದೀಪಾವಳಿ ಹಬ್ಬದ ಉಡುಗೊರೆಯಾಗಿ ಸಿಹಿ ಹಂಚುವುದು ವಾಡಿಕೆ.ಆದರೆ ಈ ಭಾರಿ ಮುಖ್ಯಮಂತ್ರಿ ಕಚೇರಿಯಿಂದ ದೀಪಾವಳಿ ಉಡುಗೊರೆಯಾಗಿ ಸಿಹಿಯ ಜೊತೆಗೆ ಹಿರಿಯ,ಮುಖ್ಯವರದಿಗಾರರಿಗೆ ತಲಾ 2.5 ಲಕ್ಷ ರೂ ಹಾಗೂ ಅದಕ್ಕಿಂತ ಮೇಲಿನ ಸ್ತರದ ಸಂಪಾದಕರಿಗೆ 5 ಲಕ್ಷ, ಸುದ್ದಿ ಸಂಸ್ಥೆ ಮಾಲೀಕರಿಗೆ ಲಕ್ಷಾಂತರ ರೂ ನಗದು ಕೊಡುಗೆ ನೀಡಿದ್ದಾರೆಂಬ ಆರೋಪಗಳು ಮಾಧ್ಯಮ ವಲಯದಲ್ಲಿ ಕೇಳಿ ಬಂದಿದೆ.
ಹಬ್ಬಗಳ ಸಂದರ್ಭದಲ್ಲಿ ರಾಜಕಾರಣಿಗಳು ಪತ್ರಕರ್ತರಿಗೆ ಸಿಹಿ ಹಾಗೂ ಡ್ರೈಪ್ರೂಟ್ಸ್ ಗಳ ಗಿಫ್ಟ್ ನೀಡುವುದು ವಾಡಿಕೆಯಾಗಿತ್ತು.ಅದು ಬೆಳಕಿನ ಹಬ್ಬ ಹಾಗೂ ಹಿಂದು ವರ್ಷದ ಮೊದಲ ಹಬ್ಬ ಯುಗಾದಿಗೆ ಸಿಹಿಯ ಜೊತೆಗೆ ಡ್ರೈಪ್ರೂಟ್ಸ್ ನೀಡುತ್ತಿದ್ದರು.ಆದರೆ ಇದೇ ಮೊದಲ ಲಕ್ಷ ಲಕ್ಷ ನಗದು ಹಣವನ್ನು ಸಿಎಂ ಕಚೇರಿಯ ಸಿಬ್ಬಂದಿ ಗಳಿಂದಲೆ ವಿತರಣೆ ಮಾಡಲಾಗಿದೆ.
ಗಿಫ್ಟ್ ಪ್ಯಾಕ್ ನಲ್ಲಿ ಲಕ್ಷ ಲಕ್ಷ ನಗದು ಹಣ : ದೀಪಾವಳಿ ಗಿಫ್ಟ್ ಪ್ಯಾಕ್ ನಲ್ಲಿ ನಾನಾ ರೀತಿಯ ಸಿಹಿ ತಿಂಡಿಗಳ ಜೊತೆಗೆ ಆಯ್ದ ಕೆಲವು ಹಿರಿಯ ಪತ್ರ ಕರ್ತರು,ಮುಖ್ಯವರದಿಗಾರರು, ಸೆಲೆಕ್ಟೆಡ್ ರಾಜಕೀಯ ಮುಖ್ಯಸ್ಥರು,ವಿವಿಧ ವಿಭಾಗಗಳ ಮುಖ್ಯಸ್ಥರಿಗೆ ಮಾತ್ರ 2.5 ಲಕ್ಷ ನಗದನ್ನು ಕೊಡುಗೆಯಾಗಿ ನೀಡಿದ್ದಾರೆ.ಅಂತೆಯೇ ಕೆಲವು ಸುದ್ದಿ ಸಂಸ್ಥೆಗಳ ಸಂಪಾದಕರು,ಮಾಲೀಕರಿಗೂ ಹೆಚ್ಚಿನ ನಗದು ಹಣವನ್ನು ಕೊಡುಗೆ ರೂಪದಲ್ಲಿ ನೀಡಿರುವ ಬಗ್ಗೆಯೂ ಗುಸುಗುಸು ಕೇಳಿ ಬಂದಿದೆ.

ಸಚಿವರಿಂದ ಸ್ಕಾಚ್ ವಿಸ್ಕಿ,ಚಿನ್ನದ ಕಾಯಿನ್ ಗಿಫ್ಟ್ : ಮುಖ್ಯಮಂತ್ರಿ ಕಚೇರಿಯಿಂದ ಆಯ್ದವರಿಗೆ ಗಿಫ್ಟ್ ಕೊಟ್ಟು ಎಡವಟ್ಟು ಮಾಡಿಕೊಂಡಿದ್ದು ಒಂದೆಡೆ.ಮತ್ತೊಂದೆಡೆ ಸಚಿವರೊಬ್ಬರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸಿಹಿಯ ಜೊತೆಗೆ ಸ್ಕಾಚ್ ವಿಸ್ಕಿ(Scotch whisky –ವಿದೇಶಿ ಆಮದು ಮದ್ಯ)ವನ್ನು ಗಿಫ್ಟ್ ಪ್ಯಾಕಿನಲ್ಲಿಟ್ಟು ಜೋಪಾ ನವಾಗಿ ಕಚೇರಿಗಳಿಗೆ ತೆರಳಿ ವಿತರಣೆ ಮಾಡಿದ್ದಾರೆ.ಅಲ್ಲದೆ ತಮ್ಮ ವಿರುದ್ಧದ ಸುದ್ದಿಗಳನ್ನು ಸಾಧ್ಯವಾದಷ್ಟು ತಡೆಯಿರಿ,ಅಥವಾ ತೀವ್ರತೆ ಕಡಿಮೆ ಮಾಡುವಂತೆಯೂ ದುಂಬಾಲು ಬಿದ್ದಿದ್ದಾರೆ.
ಚಿನ್ನದ ಕಾಯಿನ್ ಗಿಫ್ಟ್ : ಇನ್ನು ಸ್ಕಾಚ್ ವಿಸ್ಕಿ ಗಿಫ್ಟ್ ಜೊತೆಗೆ ಸಚಿವರೊಬ್ಬರು ಆಯ್ದ ಸುದ್ದಿಸಂಸ್ಥೆಗಳ ಮಾಲೀಕರಿಗೆ,ಸಂಪಾದಕರಿಗೆ ಚಿನ್ನದ ಕಾಯಿನ್ ಗಿಫ್ಟ್ ಕೊಟ್ಟಿರುವ ಬಗ್ಗೆಯೂ ಮಾಧ್ಯಮಗಳಲ್ಲಿ ಭಾರೀ ಚೆರ್ಚೆಗೆ ನಡೆಯುತ್ತಿದೆ.ಸಚಿವರ ಮಾಧ್ಯಮ ಸಂಚಾಲಕರು ಖುದ್ದಾಗಿ ಸಂಪದಾಕರು,ಮಾಲೀಕರನ್ನು ಭೇಟಿಯಾಗಿ ಕಪ್ಪ ಕಾಣಿಕೆಗಳನ್ನು ಸಲ್ಲಿಸಿ ಸಚಿವರ ಪರವಾಗಿ ತುತ್ತೂರಿ ಊದಿ ಬಂದಿದ್ದಾರೆ.
ವರದಿಗಾರರಿಗೆ(ಪತ್ರಕರ್ತರಿಗೆ)ಎಣ್ಣೆ ಪಾರ್ಟಿ ಆಯೋಜನೆ : ಇನ್ನು ಸುದ್ದಿ ಸಂಸ್ಥೆಗಳ ಸಂಪಾದಕರು, ಮಾಲೀಕರಿಗೆ ಗಿಫ್ಟ್,ಕೊಡುಗೆ ಕೊಟ್ಟ ಸಚಿವರು ದಿನ ನಿತ್ಯ ತಮ್ಮ ಇಲಾಖೆ ಬೀಟ್ ಹಾಗೂ ತಮ್ಮನ್ನು ಫಾಲೋಅಪ್ ಮಾಡುವ ವರದಿಗಾರನ್ನು ಕಡೆಗಣಿಸಿಲ್ಲ.ಅವರನ್ನು ಪರಿಗಣಿಸಿ ಇಂದು ಕಿರಿಯ ವರದಿಗಾರರು ಹಾಗೂ ಇತರಿಗೆ ಖಾಸಗಿ ಹೋಟೆಲಿನಲ್ಲಿಂದು ಭರ್ಜರಿ ಎಣ್ಣೆ ಪಾರ್ಟಿ ಆಯೋಜಿಸಿದ್ದಾರೆ.
ಈ ಬಗ್ಗೆ ಸಚಿವರ ಮಾಧ್ಯಮ ಸಲಹೆಗಾರರು(ಸಂಯೋಜನರು) ವರದಿಗಾರರಿಗೆ ದೂರವಾಣಿ ಕರೆ ಮಾಡಿ ಇಂದು ನಡೆಯಲಿರುವ ಎಣ್ಣೆಪಾರ್ಟಿಯಲ್ಲಿ ಭಾಗವಹಿಸಿ.ಸಚಿವರ ಜೊತೆ ಖಾಸಗಿಯಾಗಿ ಚೆರ್ಚೆ ಮಾಡಿ ನಿಮ್ಮ ಡಿಮ್ಯಾಂಡ್ ಗಳನ್ನು ಈಡೇರಿಸಿಕೊಳ್ಳಿ ಎಂದು ನೇರವಾಗಿ ಆಫರ್ ಮಾಡಿದ್ದಾರೆ ಎನ್ನಲಾಗಿದೆ.

ವಿವಿಧ ಇಲಾಖೆ ಸಚಿವರಿಂದಲೂ ಗಿಫ್ಟ್ ಹಂಗಾಮ : ವಿವಿಧ ಇಲಾಖೆಗಳ ಸಚಿವರು ದೀಪಾವಳಿ ವಿಶೇಷವೆಂದು ಸಿಹಿಯ ಜೊತೆಗೆ ಡ್ರೈಪ್ರೂಟ್ಸ್ ನ್ನು ಆಯ್ದ ಪತ್ರಕರ್ತರಿಗೆ,ತಮ್ಮ ಫೇವರ್ ಇರುವವರಿಗೆ,ಸ್ವಜಾತಿಯವರಿಗೆ,ತಮ್ಮನ್ನೇ ಓಲೈಸುವವರಿಗೆ ಹಂಚಿಕೆ ಮಾಡಿದ್ದಾರೆ.
ಕೆಲವು ಇಲಾಖೆ ಸಚಿವರು ತಮ್ಮ ಸಮುದಾಯದ ಪತ್ರಕರ್ತರಿಗೆ,ತಮ್ಮ ಪರವಾಗಿರುವವರಿಗೆ ಇನ್ನೂ ತಮ್ಮನ್ನು ವೈಭವೀಕರಿಸುವವರಿಗೆ,ತಮ್ಮನ್ನು ಸಮಸ್ಯೆಗಳು,ಆರೋಪಗಳು ಬಂದಾಗ ಡಿಫೆಂಡ್ ಮಾಡಿಕೊಳ್ಳುವವರಿಗೆ ಗಿಫ್ಟ್ ಜೊತೆಗೆ ಬೆಳ್ಳಿ,ಚಿನ್ನ,ನಗದನ್ನು ಕೊಡುವ ಮೂಲಕ ಋಣ ಸಂದಾಯ ಮಾಡಿಕೊಂಡಿದ್ದಾರೆಂಬ ವದಂತಿಗಳಿವೆ.
ಇದರಲ್ಲಿ ಸಚಿವರ ಮಾಧ್ಯಮ ಸಲಹೆಗಾರರು,ಸಂಚಾಲಕರು ಎಲ್ಲರ ಹೆಸರಿನಲ್ಲಿಯೂ ಗಿಫ್ಟ್ ಕೊಡಲಾಗಿದೆ ಎಂದು ಭರ್ಜರಿ ಹಣ ಮಾಡಿಕೊಂಡಿರುವುದು ಇದೆ.ಅರ್ಧ ಕೆಜಿ ಸ್ವೀಟ್ ಕೊಟ್ಟು ಒಂದೊಂದು ಕೆಜಿ ಸಿಹಿ ಅದರ ಜೊತೆಗೆ ಇನ್ನೂ ಏನೇನೋ ಕೊಟ್ಟಿದ್ದೇವೆಂದು ಭರ್ಜರಿ ಬಿಲ್ ಮಾಡಿರುವುದು ಹಲವಾರು ಉದಾಹರಣೆಗಳು ಇವೆ.
ಮುಖ್ಯಮಂತ್ರಿ,ಸಚಿವರ ಕಚೇರಿಯಿಂದ ಬಂದ ಗಿಫ್ಟ್ ಗಳನ್ನು ಕೆಲವು ಪತ್ರಕರ್ತರು ನಗದು ಗಿಫ್ಟ್ ನ್ನು ಹಿಂತಿರುಗಿಸಿದ್ದಾರೆ.ಸಿಗದವರು ನಮಗೆ ಸಿಗಲಿಲ್ಲವೆಂದ ಅಸೂಯ ಯಿಂದ ಅವರಿಗೆ ಅಷ್ಟು ಬಂದಿದೆ ಯಂತೆ,ಇವರಿಗೆ ಇಷ್ಟು ಕೊಟ್ಟಿದ್ದಾರೆಂತೆ ಎಂಬ ವದಂತಿಗಳಿಗೆ ರಕ್ಕೆಪುಕ್ಕ ಕಟ್ಟಿ ಹಾರಿ ಬಿಟ್ಟಿದ್ದಾರೆ.ಇದು ಕೆಲವರಿಗೆ ಪೀಕಲಾಟ ತರಿಸಿದೆ.ಇನ್ನು ಕೆಲವರಿಗೆ ಸಿಕ್ಕ ಚಾನ್ಸನ್ನು ಕಳೆದುಕೊಳ್ಳದೆ ಸಾಕಷ್ಟು ಅಪಪ್ರ ಚಾರಕ್ಕೂ ಇದನ್ನು ಸರಕಾಗಿ ಬಳಸಿಕೊಳ್ಳುತ್ತಿದ್ದಾರೆ.

ಪತ್ರಿಕೋದ್ಯಮದಲ್ಲಿ ನೈತಿಕತೆಯನ್ನು ಕಾಪಾಡಿಕೊಳ್ಳುವುದು ಅನಿವಾರ್ಯತೆ ಎದುರಾಗಿದೆ.ಆದರೆ ಓಲೈಕೆ,ಸ್ವಜನ ಪಕ್ಷಪಾತ,ಆರೋಪಗಳಿಂದ ರಕ್ಷಣೆಗಾಗಿ,ಮುಂಬರುವ ಚುನಾವಣೆ ದೃಷ್ಠಿಯಲ್ಲಿ ಸುದ್ದಿ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುವುದು ಸರ್ಕಾರಕ್ಕೆ ,ಸಚಿವರಿಗೆ ಶೋಭ ತರುವುದಿಲ್ಲ.ಅಂತೆಯೇ ವರದಿಗಾರರು ಸಹ ನೈತಿಕತೆಯ ಗಡಿಯನ್ನು ಮೀರುವುದು ತರವಲ್ಲ.
ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸ್ಪಷ್ಟನೆ : ಮಾಧ್ಯಮವರಿಗೆ ಗಿಫ್ಟ್ ರೂಪದಲ್ಲಿಹಣ ನೀಡಿರುವ ಬಗ್ಗೆ ಸುದ್ದಿ ಮಾದ್ಯಮಗಳಲ್ಲಿ ಬಂದ ವರದಿಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಲ್ಲಗಳೆದಿದ್ದಾರೆ. ಸಾಮಾಜಿಕ ಜಾಲ ತಾಣಗಳಲ್ಲಿ,ಸುದ್ದಿಗಳಿಗೆ ನಾನು ಉತ್ತರಿಸುವ ಅಗತ್ಯವಿಲ್ಲವೆಂದು ತಿಳಿಸಿದ್ದಾರೆ.