ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವಂತಹ ಬಾಲಿವುಡ್ ನಟಿ ಜಾಕ್ವಲಿನ್ ಫರ್ಬಾಂಡೀಸ್ ಗೆಳೆಯ, ವಂಚಕ ಸುಕೇಶ್ ಚಂದ್ರಶೇಖರ್ ಬರೆದಿರುವಂತಹ ಪತ್ರ ಇದೀಗ ದಿಲ್ಲಿಯ ರಾಜಧಾನಿಯಲ್ಲಿ ಬಿರುಗಾಳಿ ಎಬ್ಬಿಸಿದೆ.
ತಿಹಾರ್ ಜೈಲಿನಿಂದ ಸುಕೇಶ್ ಮಾಂಡೋಲಿ ಜೈಲಿಗೆ ಶಿಫ್ಟ್ ಆದ ಮೇಲೆ ಬರೆದ ಪತ್ರವೊಂದು ಇದೀಗ ವಿವಾದ ಎಬ್ಬಿಸಿದೆ. ಜೈಲಿನಲ್ಲಿ ನಡೆಯಬೇಕಿದ್ದ ಗುಸು ಗುಸು ಚರ್ಚೆಗಳು ಅಧಿಕಾರ ಕೇಂದ್ರ ದಿಲ್ಲಿಯ ರಾಜಭವನಕ್ಕೆ ವರ್ಗಾವಣೆಗೊಂಡಿದೆ. ಗುಜರಾತ್ ಚುನಾವಣೆ ನಡೆಯುವ ಮುನ್ನವೇ ಎಎಪಿಗೆ ಭ್ರಷ್ಟಾಚಾರದ ಕೂಸು ಹುಟ್ಟಿದಂತಾಗಿದೆ.

ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾಗೆ ಚಂದ್ರಶೇಖರ್ ಸ್ಪೋಟಕ ಪತ್ರ ಬರೆಯಲಾಗಿದೆ. ಇದರಿಂದಾಗಿ ಬಿಜೆಪಿ ಮತ್ತು ಎಎಪಿ ನಡುವೆ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿದೆ. ಅದರಲ್ಲಿ ಅವರು ತಿಹಾರ್ ಜೈಲಿನಲ್ಲಿ ನನಗೆ ತೀವ್ರ ಹಿಂಸೆ ನೀಡಿದ್ದಾರೆ. ಅಲ್ಲದೇ, ಅಲ್ಲಿ ನೆಮ್ಮದಿಯಿಂದ ಬದುಕೋಕೆ ಹಣವನ್ನು ಕೇಳಿದ್ದರು. ಜೈಲಿನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಬಗ್ಗೆ ತನಿಖೆಯಾಗಲಿ, ಸರ್ಕಾರದ ಬಣ್ಣ ಬಯಲಾಗಲಿ ಅಂತೆಲ್ಲಾ ಬರೆದಿದ್ದಾರೆ. ಜೈಲಿನಲ್ಲಿ ನನಗೆ ತೀವ್ರವಾಗಿ ಜೀವ ಬೆದರಿಕೆ ಬಂದಿದ್ದರಿಂದ ನಾನು ಬೇರೆ ಜೈಲಿಗೆ ವರ್ಗಾವಣೆ ಮಾಡಿಸಿಕೊಂಡಿದ್ದೇನೆ ಅಂತೆಲ್ಲಾ ವಂಚಕ ಚಂದ್ರಶೇಖರ್ ಹೇಳಿದ್ದಾರೆ.

ಚಂದ್ರಶೇಖರ್ ಬರೆದ ಪತ್ರ ದಿಲ್ಲಿಯ ರಾಜಭವನ ತಲುಪಿದ ಕೂಡಲೇ ಅದನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಗೆ ವರ್ಗಾವಣೆ ಮಾಡಿರುವ ರಾಜ್ಯಪಾಲರು ಶೀಘ್ರ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ವಿಷಯ ಬಹಿರಂಗ ವಾದ ಕೂಡಲೇ ಬಿಜೆಪಿ ವಕ್ತಾರ ಸಂಬಿತ್ ಪಾತ್ರ ಎಎಪಿ ವಿರುದ್ಧ ವಾಗ್ದಾಳಿ ಶುರು ಮಾಡಿದ್ದು, ಜೈಲಲ್ಲಿರುವ ಎಎಪಿ ಸಚಿವ ಹಾಗೂ ವಂಚಕ ಇಬ್ರೂ ಬೆಸ್ಟ್ ಪ್ರೆಂಡ್ಸ್ ಅಂತ ಟೀಕಿಸಿದ್ದಾರೆ.

ಇಷ್ಟೆಲ್ಲಾ ನಡೆಯುತ್ತಿದ್ದರೂ ಕೂಲ್ ಆಗಿರುವ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಇದು ಬಿಜೆಪಿ ಮಾಡಿರುವ ಗಿಮಿಕ್ ಎಂದು ಜರಿದಿದ್ದಾರೆ. ಅಲ್ಲದೆ, ಪಂಜಾಬ್ ಚುನಾವಣೆ ಸಂದರ್ಭದಲ್ಲಿ ಸಹ ಇದೇ ತರ ಸುಳ್ಳುಗಳನ್ನು ಹೇಳಿಕೊಂಡೇ ಬಿಜೆಪಿ ಸೋತಿದೆ ಎಂದು ಟೀಕಿಸಿದ್ದಾರೆ.