ಬೀದರ್ : ಬಿಜೆಪಿ ಮುಖಂಡ ಮಲ್ಲೇಶ್ ಪತ್ನಿಯ ರಸ್ತೆಯಲ್ಲಿ ರಂಪಾಟ ಮಾಡಿದ್ದು, ಸಿಎಂ ಜೊತೆ ಪತಿ ಇರುವ ಬ್ಯಾನರ್ ಅನ್ನು ಹರಿದು ಹಾಕಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೀದರ್ ನಗರದ ಮೈಲೂರು ಕ್ರಾಸ್ ಬಳಿ ರಸ್ತೆಯ ಪಕ್ಕದಲ್ಲಿ ಹಾಕಿದ್ದ ಬ್ಯಾನರ್ ಹರಿದು ಹಾಕಿದ್ದು, ಪೊಲೀಸರ ಮನವಿ ಮೇರೆಗೆ ಆಕೆಯನ್ನು ಪೊಲೀಸ್ ಸ್ಟೇಷನ್ ಕಡೆಗೆ ಕರೆದೊಯ್ದರು.

ಮಲ್ಲೇಶ್ ಜನ್ಮ ದಿನ ಹಿನ್ನೆಲೆಯಲ್ಲಿ ರಸ್ತೆಯ ಪಕ್ಕದಲ್ಲಿ ಬ್ಯಾನರ್ ಗಳನ್ನು ಹಾಕಲಾಗಿತ್ತು. ಬಿಜೆಪಿಯ ನಾನಾ ಮುಖಂಡರ ಜತೆಗಿರುವ ಫೋಟೋಗಳು ನಗರದ ಎಲ್ಲೆಡೆ ರಾರಾಜಿಸುತ್ತಿದ್ದವು. ಆದರೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಲ್ಲೇಶ್ ಪತ್ನಿ ಸಾಧನ ರಸ್ತೆಯಲ್ಲಿ ಬ್ಯಾನರ್ ಹರಿದು ರಂಪಾಟ ಮಾಡಿದ್ದಾರೆ.
ಆನೈತಿಕ ಸಂಬಂಧದ ದೂರು ದಾಖಲಿಸಿದ ಪೊಲೀಸರು
ಕಳೆದೆರೆಡು ವರ್ಷಗಳಿಂದ ಮಲ್ಲೇಶ್ ಗಣಪೂರ, ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ಮಲ್ಲೇಶ್ ನ ಪತ್ನಿ ಆರೋಪಿಸಿದ್ದಾರೆ. ಮಹಿಳೆಯ ಜತೆಯಲ್ಲಿದ್ದಾಗ ಹಾದಿ ಬೀದಿ ರಂಪಾಟ ನಡೆದಿದ್ದು, ಪತ್ನಿಯ ಕೈಗೆ ಮಲ್ಲೇಶ್ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರಂತೆ. ಈ ಕುರಿತು ಕಳೆದ ನಾಲ್ಕು ತಿಂಗಳ ಹಿಂದೆ ಪತಿಯ ಅನೈತಿಕ ಸಂಬಂಧದ ಬಗ್ಗೆ ಠಾಣೆಗೆ ದೂರು ನೀಡದ್ದರೂ, ಪೊಲೀಸರು ಎಫ್.ಐ.ಆರ್ ದಾಖಲಿಸಲಿಲ್ಲ. ಈ ಹಿನ್ನೆಲೆ ಇಂದು ಸಾವಿರ ಮೀಟರ್ ಉದ್ದದ ಕನ್ನಡ ಬಾವುಟ ಮೆರವಣಿಗೆ ವೇಳೆ ರಂಪಾಟ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಬಿಜೆಪಿ ಮುಖಂಡ ಮಲ್ಲೇಶನ ವಿರುದ್ಧ ರೊಚ್ಚಿಗೆದ್ದ ಆಕೆಯ ಪತ್ನಿಯನ್ನು ಸ ಮಾಧಾನ ಮಾಡಲು ಬಂದಿದ್ದ ಪೊಲೀಸರೊಂದಿಗೆ ಆಕೆ ಮಾತಿನ ಚಕಮಕಿ ನಡೆಸಿದ್ದಾರೆ. ಮಹಿಳೆಯನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.

ನಂತರ ಬಿಜೆಪಿ ಮುಖಂಡ ಸೂರ್ಯಕಾಂತ್ ನಾಗಮಾರಪಳ್ಳಿ ಹಾಗೂ ಶಿವಶರಣಪ್ಪ ವಾಲಿ ಮುಂದೆ ನ್ಯಾಯಕ್ಕಾಗಿ ಮಹಿಳೆ ಕಣ್ಣೀರು ಹಾಕಿದ್ದಾರೆ.
ಮುಖಂಡರ ಜತೆ ಫೋಟೋ
ಬೀದರ್ ಜಿಲ್ಲೆಯಲ್ಲಿ ಮಲ್ಲೇಶ್ ಬಿಜೆಪಿ ಕಾರ್ಯಕರ್ತ, ಈತ ಅತೀ ದೊಡ್ಡ ಮುಖಂಡನಂತೆ ಪ್ರತಿಯೊಬ್ಬರ ಜತೆ ಫೋಟೋ ತೆಗೆದು ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡುತ್ತಿದ್ದ. ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಸೇರಿದಂತೆ ಅನೇಕ ಎಲ್ಲಾ ಮುಖಂಡರೊಂದಿಗೆ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡಿದ್ದಾರೆ.

ಇದನ್ನೇ ಬಂಡವಾಳ ಮಾಡಿಕೊಂಡು ಪತ್ನಿ ತನ್ನ ವಿರುದ್ಧ ನೀಡಿರುವ ದೂರನ್ನು ಪೊಲೀಸರು ದಾಖಲಿಸದಂತೆ ಒತ್ತಡ ಹೇರಿದ್ದಾರೆ ಎಂದು ಆತನ ಪತ್ನಿಯ ಆರೋಪವಾಗಿದೆ. ಆದ್ದರಿಂದ ಮಲ್ಲೇಶ್ ನ ಜನ್ಮದಿನದ ಹಿನ್ನೆಲೆಯಲ್ಲಿಯೂ ಕೂಡ ಆತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೊಂದಿಗಿರುವ ಫೋಟೋವನ್ನು ಬ್ಯಾನರ್ ಗೆ ಬಳಸಿದ್ದಾನೆ.


#mallesh ganapoora #bjp leader #wife #illegal relationship