ಒಂದು ಮೊಟ್ಟೆ ಕಥೆ ಸಿನಿಮಾ ಮೂಲಕ ಪ್ರೇಕ್ಷಕರನ್ನು ನಕ್ಕು ನಲಿಸಿದ್ದ ರಾಜ್ ಬಿ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ಆಗುವತ್ತ ಹೆಜ್ಜೆ ಇಟ್ಟಿದ್ದಾರೆ. ಮೋಹಕ ತಾರೆ ರಮ್ಯ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ನಿರ್ದೇಶಿಸುತ್ತಾ, ನಾಯಕ ನಟನಾಗಿದ್ದ ರಾಜ್ ಬಿ ಶೆಟ್ಟಿ ಮಲಯಾಳಂ ಗೆ ಶಿಪ್ಟ್ ಆಗಿದ್ದು, ಅಲ್ಲಿ ಹೊಸ ಸಿನಿಮಾ ಮಾಡಲು ಒಪ್ಪಿಕೊಂಡಿದ್ದಾರೆ.

ರಾಜ್ ಬಿ ಶೆಟ್ಟಿ ಮಲೆಯಾಳಂ ಭಾಷೆಯಲ್ಲಿ ನ ರುಧಿರಂ ಎಂಬ ಸಿನಿಮಾದಲ್ಲಿ ನಟಿಸಲು ಮುಂದಾಗಿದ್ದಾರೆ. ಇದು ಸುಮಾರು ನಾಲ್ಕು ಭಾಷೆಗಳಲ್ಲಿ ನಿರ್ಮಾಣ ಆಗಲಿದೆ ಎನ್ನಲಾಗಿದೆ. ಮೂಲ ಮಲೆಯಾಳಂ ನಲ್ಲಿ ನಿರ್ಮಾಣಗೊಂಡರೂ ಇತರೆ ಭಾಷೆಗಳಿಗೆ ಡಬ್ ಆಗಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಜಿಶೋ ಲೋನ್ ಆಂಟನಿ ನಿರ್ದೇಶಿಸುತ್ತಿರುವ ರುಧಿರಂ ಸಿನಿಮಾದಲ್ಲಿ ನಟಿಸುವ ಮೂಲಕ ರಾಜ್ ಬಿ ಶೆಟ್ಟಿ ಅವರು ಮಲಯಾಳಂ ಸಿನಿಮಾ ರಂಗ ಪ್ರವೇಶ ಮಾಡಿದ್ದಾರೆ. ಇದಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಅಪರ್ಣ ಬಾಲಮುರಳಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ಸಧ್ಯ ಸಿನಿಮಾದ ಪೋಸ್ಟರ್ ಸಹ ಅಧಿಕೃತವಾಗಿ ಬಿಡುಗಡೆಗೊಂಡಿದೆ. ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂನಲ್ಲಿ ನಾಲ್ಕು ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿರುವ ಹಿನ್ನೆಲೆಯಲ್ಲಿ ಪ್ಯಾನ್ ಇಂಡಿಯಾ ಸಿನಿಮಾವಾಗಿ ಘೋಷಿಸಲು ತಂಡ ಮುಂದಾಗಿದ್ದಾರೆ ಎನ್ನಲಾಗಿದೆ