ಬೆಂಗಳೂರು: ದೆಹಲಿ ಮಾದರಿ ಸುಸಜ್ಜಿತ ಕನ್ನಡ ಶಾಲೆಗಳನ್ನು ಕರ್ನಾಟಕ ರಾಜ್ಯದಲ್ಲೂ ಮಾಡಬೇಕೆಂದು ಆಗ್ರಹಿಸಿರುವ ಆಮ್ ಆದ್ಮಿ ಪಕ್ಷ, ಧಮ್ ತಾಕತ್ತು ಇದ್ರೆ ಎಎಪಿ ದೆಹಲಿಯಲ್ಲಿ ಮಾಡಿರುವ ಶಾಲೆಗಳನ್ನು ನೋಡಿ ಎಂದು ರಾಜ್ಯ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಗೆ ಸವಾಲು ಹಾಕಿದೆ.
ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರಿಗೆ ಬನ್ನಿ ನಮ್ಮ ರಾಜ್ಯಾಧ್ಯಕ್ಷರೇ ನಿಮಗೆ ಶಾಲೆಗಳನ್ನು ತೋರಿಸಲಿದ್ದರೆ. ದಯಮಾಡಿ ದೆಹಲಿಯ ರೀತಿಯ ಕನ್ನಡ ಶಾಲೆಗಳನ್ನು ಇಲ್ಲಿಯೂ ಮಾಡಿ ಎಂದು ಮನವಿ ಮಾಡಿರುವುದರ ಜತೆಗೆ ಎಎಸಿ ಟ್ವೀಟ್ ಅನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಟ್ಯಾಗ್ ಮಾಡಿದೆ.

ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಪ್ರತಿನಿಧಿಸುವ ವಿಧಾನಸಭಾ ಕ್ಷೇತ್ರದ ತಿಪಟೂರು ತಾಲ್ಲೂಕಿನಲ್ಲಿ ಸರ್ಕಾರಿ ಮಾದರಿ ಶಾಲೆಹಳಲ್ಲಿ ಮೂಲ ಭೂತ ಸೌಕರ್ಯಗಳಿಲ್ಲದೆ ಸೂರಗುತ್ತಿದೆ. ವಿದ್ಯಾರ್ಥಿಗಳು ಮಳೆಯಲ್ಲಿಯೇ ನೆನೆಯುತ್ತಾ ಆತಂಕದಲ್ಲಿಯೇ ನೆಲದ ಮೇಲೆ ಕುಳಿತು ಪಾಠ ಕೇಳು ದುಸ್ಥಿತಿ ಇದೆ ಎಂದು ಎಎಪಿ ಆರೋಪಿಸಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಅವರ ಕಚೇರಿಯ ಮಾಹಿತಿಯ ಪ್ರಕಾರ ತಿಪಟೂರು ತಾಲೂಕಿನಲ್ಲಿ ಒಟ್ಟು 159 ಕಿರಿಯ ಪ್ರಾಥಮಿಕ ಶಾಲೆ, 100 ಹಿರಿಯ ಪ್ರಾಥಮಿಕ ಶಾಲೆ ಮತ್ತು 16 ಸರ್ಕಾರಿ ಪ್ರೌಢಶಾಲೆಗಳಿವೆ. ಇವುಗಳಲ್ಲಿ ಒಟ್ಟು 100ಕ್ಕೂ ಹೆಟ್ಟು ಶಾಲೆಗಳನ್ನು ದುರಸ್ಥಿ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಎಎಪಿ ಮಾಡಿರುವ ಟ್ವೀಟ್ಗೆ ಎಎಪಿ ರಾಜ್ಯ ಅಧ್ಯಕ್ಷರಾದ ಪ್ರಥ್ವಿ ರೆಡ್ಡಿ ಕೂಡ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಬಡಮಕ್ಕಳಿಗೇಕೆ ಮೋಸ ಮಾಡುತ್ತೀರಿ ಎಂದು ಕೇಳುತ್ತೇವೆ. ಕನ್ನಡ ಶಾಲೆಗಳ ಮೇಲೆ @BJP4KARNATAKA ಸರ್ಕಾರಕ್ಕೆ ಯಾಕಿಷ್ಟು ಕೋಪ ಎಂದು ಕೇಳುತ್ತೇವೆ ಎಂದು ಪ್ರಶ್ನಿಸಿದ್ದಾರೆ.
#AAP #EDUCATION MINISTER #B C NAGESH #PRATHVI REDDY #BJP4KARNARTAKA #GOVERNMENT SCHOOLS #DELHI SCHOOLS #POOR PEOPLE