BJP MLA DISQUALIFIED: ಬಿಜೆಪಿ ಶಾಸಕ ಅನರ್ಹ: ಮುಜಾಫರ್ ನಗರ ಗಲಭೆಯಲ್ಲಿ ಭಾಗಿ ಎರಡು ವರ್ಷ ಜೈಲು

ಲಖನೌ: 2013ರಲ್ಲಿ ಉತ್ತರಪ್ರದೇಶದ ಮುಜಾಫರ್ ನಗರದ ಗಲಭೆಯಲ್ಲಿ ಭಾಗಿಯಾಗಿದ್ದ ಆರೋಪದಡಿ ಖತೌಲಿ ಕ್ಷೇತ್ರದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರಿಗೆ ಜನಪ್ರತಿನಿಧಿ ನ್ಯಾಯಾಲಯವು ಅಕ್ಟೋಬರ್ 11ರಿಂದ ಜಾರಿಗೆ ಬರುವಂತೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶ ವಿಧಾನಸಭಾ ಕಾರ್ಯದರ್ಶಿ ಅವರು ಅಧಿಸೂಚನೆಯನ್ನು ಇಂದು ಹೊರಡಿಸಿದ್ದು. ಖತೌಲಿ ವಿಧಾನಸಭಾ ಕ್ಷೇತ್ರ ತೆರವಾಗಿರುವುದಾಗಿ ತಿಳಿಸಿದ್ದಾರೆ.

ದ್ವೇಷ ಭಾಷಣದ ಹಿನ್ನೆಲೆಯಲ್ಲಿ ಎಸ್ ಪಿ ಶಾಸಕ ಅಜಂ ಖಾನ್ ಗೆ ಇತ್ತೀಚೆಗೆ ಮೂರು ವರ್ಷಗಳ ಕಾಲ ನ್ಯಾಯಾಲಯ ಶಿಕ್ಷೆ ವಿಧಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಪ್ರತಿನಿಧಿಸುತ್ತಿದ್ದ ರಾಮ್ ಪುರ ಕ್ಷೇತ್ರ ತೆರವಾಗಿರುವುದಾಗಿ ವಿಧಾನಸಭೆ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದರು.

#bjp #mla #disqualified #khathowli assembly constituency #vikram saine #sp #azam khan #rampur constituency

More News

You cannot copy content of this page