Actress Dia Mirza:ಚೆಕ್ ಮಾಡಿ ರೂಮ್ ಪ್ರವೇಶಿಸಿ: ನಟಿ ದಿಯಾ ಮಿರ್ಜಾ ಸಲಹೆ

ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ದಲ್ಲಿ ಗಣ್ಯ ವ್ಯಕ್ತಿಗಳ, ಪ್ರಮುಖ ವ್ಯಕ್ತಿಗಳ ಪರ್ಸನಲ್ ವಿಡಿಯೋ ಗಳು ರಿಲೀಸ್ ಆಗಿ ಸಾಕಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಇದರ ಬಗ್ಗೆ ಹಲವಾರು ಜನರು ಧ್ವನಿ ಎತ್ತಿದ್ದಾರೆ.
ಕಳೆದ ವಾರದ ಹಿಂದೆ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ವೈಯಕ್ತಿಕ ರೂಂ ನ ವಿಡಿಯೋ ರಿಲೀಸ್ ಆಗಿತ್ತು. ಅದಕ್ಕೆ ಕೊಯ್ಲಿ ಸಹ ಅಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ನಟರು, ಕ್ರಿಕೆಟ್ ಆಟಗಾರರು ಸಹ ಕೊಯ್ಲಿಗೆ ಸಮ್ಮತಿ ಸೂಚಿಸಿ, ಅವರ ಬೆಂಬಲಕ್ಕೆ ನಿಂತಿದ್ದರು.

ಇದೀಗ ಬಾಲಿವುಡ್ ಹಾಟ್ ನಟಿ ಕಮ್ ಮಮ್ಮಿ ದಿಯಾ ಮಿರ್ಜಾ ಸೋಷಿಯಲ್ ಮೀಡಿಯಾದಲ್ಲಿ ಪರ್ಸನಲ್ ಲೈಫ್ ಅಂಡ್ ಪರ್ಸನಲ್ ಸ್ಪೇಸ್‌ ಬಗ್ಗೆ ಧ್ವನಿ ಎತ್ತಿದ್ದಾರೆ.

ತಾವು ಬಾತ್ ರೂಂ ನಲ್ಲಿ ಸ್ನಾನ ಮಾಡುತ್ತಿದ್ದ ವಿಡಿಯೋ ಲೀಕ್ ಆದ ಮೇಲೆ ದಿಯಾ ಮಾನಸಿಕವಾಗಿ ಖಿನ್ನರಾಗಿದ್ರು. ಈ ಬಗ್ಗೆ ಹಲವಾರು ತಿಂಗಳು ಕಾಲ ಚರ್ಚೆಯಲ್ಲಿತ್ತು. ಇದೀಗ ಈ ವಿಷಯದ ಕುರಿತು ಮಾತನಾಡಿದ್ದು, ಪರ್ಸನಲ್ ಲೈಫ್‌ ಬಗ್ಗೆ ಚಿಂತಿಸಿ ಅಂದಿನಿಂದ ಸಾಮಾಜಿಕ ಜಾಲತಾಣದಿಂದ ದೂರು ಉಳಿದು ಬಿಟ್ಟೆ ಎಂದಿದ್ದಾರೆ. ಇದೀಗ ಮತ್ತೆ ಸೋಶಿಯಲ್ ಮೀಡಿಯಾಗೆ ಎಂಟ್ರಿಯಾಗಿರುವ ನಟಿ, ಹೆಣ್ಣು ಮಕ್ಕಳು ಹೇಗೆಲ್ಲಾ ಇಂತಹ ಸಮಸ್ಯೆಗಳಿಂದ ಪಾರಾಗಬಹುದು ಎಂಬುದನ್ನು ಹಂಚಿಕೊಂಡಿದ್ದಾರೆ.

ಈಗೀಗ ನಾನು ತುಂಬಾ ಹುಷಾರಾಗಿ ರೂಂ ಬುಕ್ ಮಾಡುವೆ. ಅಲ್ಲಿನ ಮ್ಯಾನೇಜರ್ ಗೆ ಕರೆ ಮಾಡಿ ಸ್ಥಳದಲ್ಲಿ ಬಂದು ರೂಂ ಬುಕ್ ಮಾಡಿಕೊಳ್ಳುವೆ. ನಾನು ರೂಂ ಪರಿಶೀಲಿಸುವ ಸಂದರ್ಭದಲ್ಲಿ ನಿಮ್ಮ ಟೀಂ ನಮ್ ಜೊತೆಗೆ ಇರ್ಬೇಕಂತ ಕಂಡೀಷನ್ ಹಾಕಿದ್ದೇನೆ. ಅದ್ರ ಜೊತೆಗೆ ರೂಂ ಒಳಗೆ ಎಲ್ಲೆಲ್ಲಿ ಕ್ಯಾಮರಾ ಅಳವಡಿಸಿದ್ದಾರೆ ಅಂತ ಚೆಕ್ ಮಾಡುವ ಟ್ರಿಕ್ ಕಂಡುಕೊಂಡಿದೀನಿ ಎಂದು ತಿಳಿಸಿದ್ದಾರೆ.

More News

You cannot copy content of this page