JARKIHOLI HINDU STATEMENT CONTROVERSY: ಹಿಂದು ಹೇಳಿಕೆಗೆ ಸ್ಪಷ್ಟನೆ ನೀಡಿದ ಜಾರಕಿಹೊಳಿ: ತಪ್ಪಿದ್ರೆ ಚರ್ಚೆ ಮಾಡಿ: ತಪ್ಪಾಗಿ ಚರ್ಚೆ ಮುಂದುವರೆಸಿದರೆ ಮಾನಹಾನಿ ಕ್ರಮದ ಎಚ್ಚರಿಕೆ

ಬೆಳಗಾವಿ: ಹಿಂದು ಎಂಬುದು ಜೀವನ ಪದ್ಧತಿ ಅಷ್ಟೇ.. ಇದನ್ನು ಅಂದು ಪ್ರಧಾನಮಂತ್ರಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನಲ್ಲೂ ಹೇಳಲಾಗಿದೆ. ನನಗೆ ಯಾರನ್ನೂ ಅಪಮಾನ ಮಾಡುವ ಉದ್ದೇಶ ಇಲ್ಲ. ಜಾತಿ, ಧರ್ಮದಿಂದ ನಾನು ದೂರ ಇರೋ ವ್ಯಕ್ತಿ, ಈ ರೀತಿ ನಮ್ಮ ಮೇಲೆ ಅಪರಾಧ ಮಾಡಿರೋ ರೀತಿಯಲ್ಲಿ ಬಿಂಬಿಸಬೇಡಿ. ನನ್ನ ಭಾಷಣ ಇನ್ನೂ ಹತ್ತು ಸಲ ನೋಡಿ. ತಪ್ಪಿದ್ರೆ ಚರ್ಚೆ ಮುಂದುವರೆಸಿ. ತಪ್ಪಾಗಿ ಇದೇ ರೀತಿ ಚರ್ಚೆ ಮುಂದುವರೆಸಿದರೆ ಮಾನಹಾನಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಎಚ್ಚರಿಕೆ ನೀಡಿದ್ದಾರೆ.

ಹಿಂದು ಪದದ ವಿವಾದದ ಹಿನ್ನಲೆಯಲ್ಲಿ ಬೆಳಗಾವಿಯಲ್ಲಿ ತಮ್ಮ ಹೇಳಿಕೆಗೆ ಸ್ಪಷ್ಟನೆ ಬಿಡುಗಡೆ ಮಾಡಿರುವ ಸತೀಶ್ ಜಾರಕಿಹೊಳಿ, ನಿಪ್ಪಾಣಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿಂದು ಶಬ್ಧದ ಬಗ್ಗೆ ಮಾತನಾಡಿದ್ದೇನೆ. ಈ ಬಗ್ಗೆ ರಾಜ್ಯ, ರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿದೆ. ನಾನು ಭಾಷಣದಲ್ಲಿ ಹೇಳಿದ್ದು ಹಿಂದು ಶಬ್ದ ಪರ್ಷಿಯನ್ ನಿಂದ ಬಂದಿದ್ದು ಎಂದು ಹೇಳಿರುವುದು ನಿಜ. ಅದಕ್ಕೆ ನೂರಾರು ದಾಖಲೆ ಇವೆ. ಈ ಬಗ್ಗೆ ಚರ್ಚೆ ಆಗಬೇಕು ಎಂದು ನಾನು ಹೇಳಿದ್ದೇನೆ ಎಂದು ಮತ್ತೊಮ್ಮೆ ಹೇಳಿದ್ದಾರೆ.
ಹಿಂದು ಶಬ್ದ ಬಗ್ಗೆ ನಿಂದನೆ ಕೆಲವು ಶಬ್ದಗಳು ದಾಖಲೆಯಲ್ಲಿ ಸಿಗುತ್ತೆ. ಈ ಬಗ್ಗೆ ಕೋಟ್ ಮಾಡಿ‌ ಹೇಳಿದ್ದೇನೆ. ಇದು ಸತೀಶ್ ಜಾರಕಿಹೊಳಿ ವೈಯಕ್ತಿಕ ಹೇಳಿಕೆ ಅಲ್ಲ. ‌ಮಾಧ್ಯಮದಲ್ಲಿ ಚರ್ಚೆ ಹಿನ್ನೆಲೆಯಲ್ಲಿ ಸ್ಪಷ್ಟನೇ ನೀಡುವುದು ನಮ್ಮ‌ ಕರ್ತವ್ಯ. ಜಾತಿ, ಧರ್ಮ ಮೀರಿ ಕೆಲಸ ಮಾಡುವ ಉದ್ದೇಶ ನನ್ನದು. ಆದರೆ ನನ್ನ ಹೇಳಿಕೆಯನ್ನು ತಪ್ಪಾಗಿ ಬಿಂಬಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನನ್ನ ಹೇಳಿಕೆಯನ್ನು ಮಾಧ್ಯಮಗಳು ಉಕ್ರೇನ್, ರಷ್ಯಾ ಯುದ್ಧ ಮಾದರಿಯಲ್ಲಿ ವಿಶ್ಲೇಷಣೆ ಮಾಡುತ್ತಿವೆ. ಈ ಸಮಯವನ್ನ ಬೇರೆ ವಿಷಯಕ್ಕೆ ಕೊಟ್ಟಿದ್ದರೆ ಒಳ್ಳೆಯದಾಗುತ್ತಿದೆ. ಮಾಧ್ಯಮಗಳು ಅನೇಕ ಸುಳ್ಳುಗಳನ್ನು ವಿಜೃಂಭಣೆ ಮಾಡಿವೆ. ಹಿಂದು ಧರ್ಮದ ವಿಚಾರ ಬಂದಾಗ ವಿಶೇಷ ಸ್ಥಾನಮಾನ. ಹಿಂದು ಕಾರ್ಯಕರ್ತರ ಹತ್ಯೆಯಾದಾಗ ವಿಶೇಷ ಸ್ಥಾನಮಾನ. ಅದೇ ದಲಿತ ಮೃತಪಟ್ಟರೆ ಯಾವುದೇ ಸುದ್ದಿ ಇಲ್ಲ. ದಯವಿಟ್ಟು ನೈಜವಾದ ಸುದ್ದಿ ತೋರಿಸುವ ಪ್ರಯತ್ನ ಮಾಡಿ ಎಂದು ಮನವಿ ಮಾಡಿದರು.
ಏನಿದು ವಿವಾದ..?
ನಿಪ್ಪಾಣಿಯಲ್ಲಿ ನಡೆದ ಬುದ್ಧ ಅಂಬೇಡ್ಕರ್ ಸಮಾವೇಶದಲ್ಲಿ ಮಾತನಾಡಿದ್ದ ಶಾಸಕ ಸತೀಶ್ ಜಾರಕಿಹೊಳಿ, ಹಿಂದೂ ಎಂಬ ಪದ ಮೂಲತಃ ಭಾರತದ್ದಲ್ಲ, ಅದು ಪರ್ಷಿಯನ್ ಭಾಷೆಯಿಂದ ಬಂದ ಪದ. ಅಸಲಿಗೆ ಹಿಂದೂ ಎಂಬ ಪದಕ್ಕೆ ಪರ್ಷಿಯಾ ಭಾಷೆಯಲ್ಲಿ ಅಶ್ಲೀಲವಾದ ಅರ್ಥಗಳಿವೆ. ಅದನ್ನು ನೀವು ಕೇಳಿದ್ರೆ ನಾಚಿಕೆ ಪಡುತ್ತೀರಿ. ಬೇಕಾದರೆ ಯಾರಾದರೂ ಗೂಗಲ್‌ನಲ್ಲಿ ಸರ್ಚ್ ಮಾಡಿ ನೋಡಬಹುದು ಎಂಬ ಹೇಳಿಕೆ ರಾಜಕೀಯ ವಲಯದಲ್ಲಿ ಕಿಡಿ ಹಚ್ಚಿತ್ತು.

#bjp #hindu word #parshian #bad meaning #satish jarkiholi #mla #yamakanamaradi #google hindu

More News

You cannot copy content of this page