ನಮ್ಮ ಪ್ರಕೃತಿ ವಿಸ್ಮಯಗಳಲ್ಲಿ ಒಂದಾಗಿರುವ ಸೂರ್ಯಗ್ರಹಣ, ಚಂದ್ರ ಗ್ರಹಣಗಳು ಬಂದಾಗ ಎಲ್ಲರಿಗೂ ಅದರಲ್ಲಿನ ವಿಸ್ಮಯ ನೋಡಲು ಬಹಳ ಕಾತುರದಿಂದ ಜನ ಕಾಯ್ತಾ ಇರ್ತಾರೆ. ಅಂತಹ ಒಂದು ಕ್ಷಣ ಇಂದು ಸಂಭವಿಸಲಿದೆ.

ನ.8 ಅಂದರೆ ಇಂದು ಮಧ್ಯಾಹ್ನ 2.39 ರಿಂದ ಸಂಜೆ 6.19 ವರೆಗೆ ವಿವಿಧ ಭಾಗಗಳಲ್ಲಿ ವಿವಿಧ ರೀತಿಯಲ್ಲಿ ಪೂರ್ಣ ಚಂದ್ರ ಗ್ರಹಣ ಸಂಭವಿಸಲಿದೆ. ಕೋಲ್ಕತ್ತ, ಕೊಹಿಮಾ, ಅಗರ್ತಲಾ, ಗುವಾಹಟಿಗಳಲ್ಲಿ ಪೂರ್ಣವಾಗಿ ಗೋಚರಿಸಲಿದ್ದು, ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಚಂದ್ರೋದಯದ 5.57ರ ವೇಳೆ ಶೇ 23ರಷ್ಟು ಗ್ರಹಣ ಕಾಣಿಸಲಿದೆ.
ಇಂದು ಮಧ್ಯಾಹ್ನ 2.39 ಕ್ಕೆ ಗ್ರಹಣ ಶುರುವಾಗಲಿದ್ದು, 3.46 ಕ್ಕೆ ಪೂರ್ತಿ ಗ್ರಹಣ ಗೋಚರಿಸುತ್ತದೆ. ಈ ಗ್ರಹಣವು ಸುಮಾರು 4.29 ಕ್ಕೆ ಗರಿಷ್ಠ ಮಟ್ಟದಲ್ಲಿರಲಿದೆ. ಮಧ್ಯಾಹ್ನ ಶುರುವಾಗುವ ಇದು ಸಂಜೆ 5.11 ಕ್ಕೆ ಕೊನೆಯಾಗುತ್ತದೆ. ಇನ್ನೂ 6.19 ಭಾಗಶಃ ಗ್ರಹಣ ಕಾಣಲಾಗುತ್ತದೆ. ದೆಹಲಿಯಲ್ಲಿ ಶೇಕಡ 66ರಷ್ಟು ಹಾಗೂ ಮುಂಬೈನಲ್ಲಿ ಶೇಕಡ 14ರಷ್ಟು ಗ್ರಹಣ ಕಾಣಿಸಲಿದೆ ಎಂದು ಖಗೋಳ ಭೌತಶಾಸ್ತ್ರಜ್ಞ ದೇವಿ ಪ್ರಸಾದ್ ದುವಾರಿ ಮಾಹಿತಿ ನೀಡಿದ್ದಾರೆ.

ಸೂರ್ಯಾಸ್ತ ಸಮಯದ ಆಗಮಿಸುವ ವೇಳೆಯಲ್ಲಿ ಚಂದ್ರೋದಯಕ್ಕೆ ಮೊದಲೇ ಪೂರ್ಣ ಚಂದ್ರಗ್ರಹಣ ಆರಂಭವಾಗುತ್ತದೆ. ಹೀಗಾಗಿ ದೇಶದಲ್ಲಿ ಮೊದಲಿಗೆ ಚಂದ್ರೋದಯ ಆಗುವ ಭಾಗಗಳಲ್ಲಿ ಮಾತ್ರ ಸಂಜೆ ಹೊತ್ತು ಪೂರ್ಣ ಗ್ರಹಣ ಗೋಚರಿಸಲಿದೆ.
ಪ್ರಕೃತಿ ವಿಸ್ಮಯದ ಕುತೂಹಲಕಾರಿ ಅಂಶಗಳನ್ನು ಕಾಣುವ ಸಲುವಾಗಿ ಕಾತುರದಿಂದ ಕಾಯ್ತಿದ್ದಾರೆ. ಇದೇ ವೇಳೆ ಎಚ್ಚರಿಕೆ ನೀಡಿರುವ ವಿಜ್ಞಾನಿಗಳು, ಗ್ರಹಣವನ್ನು ದೀರ್ಘಕಾಲದವರೆಗೆ ವೀಕ್ಷಣೆ ಮಾಡದಿರಲು ಸೂಚಿಸಿದ್ದಾರೆ. ಅನಗತ್ಯ ಕಿರಿಕಿರಿ ಉಂಟುಮಾಡುತ್ತದೆ. ಅಲ್ಲದೆ, ಅನಾರೋಗ್ಯ ಸಮಸ್ಯೆ ತಂದಿಡುವ ಸಾಧ್ಯತೆ ಇದೆ ಎಂದಿದ್ದಾರೆ.