Search

DishTV OTT: ‘ವಾಚೋ’ ಹೆಸರಿನ ಮೂಲಕ ಓಟಿಟಿ ಪ್ಲಾಟ್ ಪಾರ್ಮ್ ಗೆ ಎಂಟ್ರಿ ಕೊಟ್ಟ ಡಿಶ್ ಟಿವಿ..!

ಡಿಟಿಹೆಚ್ ರಂಗದಲ್ಲಿ ಅಗ್ರಸ್ಥಾನ ಪಡೆದುಕೊಂಡಿರುವ ಡಿಶ್ ಟಿವಿ ಈಗ ಓಟಿಟಿ ಪ್ಲ್ಯಾಟ್ ಪಾರ್ಮ್ ಗೆ ಎಂಟ್ರಿ ಕೊಟ್ಟಿದೆ. ಡಿಸ್ನಿ ಹಾಟ್ ಸ್ಟಾರ್, ಜಿ5, ಸೋನಿ ಲಿವ್  ಸೇರಿದಂತೆ ಹಲವು ಓಟಿಟಿ ಪ್ಲ್ಯಾಟ್ ಪಾರ್ಮ್ ಒಗ್ಗೂಡಿಸುವ ಮೂಲಕ ‘ವಾಚೋ’ ಎಂಬ ಹೆಸರಿನ ಓಟಿಟಿಯನ್ನು ಪ್ರಾರಂಭಿಸಿದೆ. ಬೆಂಗಳೂರಿನ ಗೊರಗುಂಟೆ ಪಾಳ್ಯದಲ್ಲಿರುವ ತಾಜ್ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಟಿಹೆಚ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ದುವಾ ‘ವಾಚೋ ಓಟಿಟಿ’ಯನ್ನು ಲಾಂಚ್ ಮಾಡಿದರು.

ಒಂದೇ ಲಾಗ್ ಇನ್ ನಲ್ಲಿ 10 ಓಟಿಟಿ ಪ್ಯ್ಲಾಟ್ ಪಾರ್ಮ್ ಗಳನ್ನು ವೀಕ್ಷಿಸುವ ರೀತಿಯಲ್ಲಿ ಈ ಆಪ್ ಅನ್ನು ರಚಿಸಲಾಗಿದೆ ಎಂದು ತಿಳಿಸಿದರು. ಕೇವಲ ನಗರಗಳಲ್ಲಿ ಮಾತ್ರವಲ್ಲದೆ ಗ್ರಾಮೀಣ ಪ್ರದೇಶಗಳ ಜನರಿಗೂ ಓಟಿಟಿ ಸೇವೆಗಳನ್ನ ತಲುಪಿಸುವ ಉದ್ದೇಶದಿಂದ ‘ವಾಚೋ’ ಆರಂಭಿಸಿದ್ದೇವೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದರು.

‘ವಾಚೋ ಓಟಿಟಿ ಪ್ಲಾನ್ಸ್. ಬಿಡುಗಡೆ ಮಾಡಿದ ನಟ ಪೃಥ್ವಿ ಅಂಬಾರ್..!

ತಾಜ್ ಹೋಟೆಲ್ ನಲ್ಲಿ ನಡೆದ ವಾಚೋ ಓಟಿಟಿ ಪ್ಲಾನ್ಸ್ ಲಾಂಚ್ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ಕನ್ನಡದ ದಿಯಾ ಚಿತ್ರದ ನಟ ಪೃಥ್ವಿ ಅಂಬಾರ್ ಅವರು ‘ವಾಚೋ ಪ್ಲಾನ್ಸ್’ ಅನ್ನು ಬಿಡುಗಡೆ ಮಾಡಿ ಮಾತನಾಡಿದರು. ಬಳಿಕ ಮಾತನಾಡಿದ ಅವರು, ಕೋರೊನಾ ಸಂಕಷ್ಟದ ಸಮಯದಲ್ಲಿ ನಮ್ಮ ಚಿತ್ರ ದಿಯಾ ಬಿಡುಗಡೆಯಾಗಿತ್ತು. ಮಹಾಮಾರಿ ಕೊರೊನಾದಿಂದ ಚಿತ್ರ ವೀಕ್ಷಣೆಗೆ ಜನರು ಚಿತ್ರಮಂದಿರಗಳತ್ತ ಸುಳಿಯಲಿಲ್ಲ. ಚಿತ್ರ ಬಿಡುಗಡೆಯಾಗಿ ಸಂಕಷ್ಟದಲ್ಲಿದ್ದಾಗ  ನನ್ನ ದೀಯಾ ಸಿನಿಮಾ ಯಶಸ್ಸು ಕಾಣಲು ಕಾರಣವಾಗಿದ್ದು ಇದೇ ಓಟಿಟಿ ಪ್ಲಾಟ್ ಪಾರ್ಮ್.. ಎಲ್ಲಾ ಜನರಿಗೆ ಒಂದೇ ಪ್ಲಾಟ್ ಪಾರ್ಮ್ ನಲ್ಲಿಓಟಿಟಿಯನ್ನು ನೋಡುವಂತೆ ಆಗಲು ವಾಟೋ ಓಟಿಟಿ ಆಪ್ ಸಹಕಾರಿಯಾಗಲಿದೆ. ಈ ದಿನ ಅಂತಹ ಓಟಿಟಿ ಆಪ್ ಬಿಡುಗಡೆ ಮಾಡಲು ನಾನು ಮುಖ್ಯಅತಿಥಿಯಾಗಿ ಬಂದಿರುವುದು ನನಗೆ ತುಂಬಾ ಸಂತೋಷ ಉಂಟುಮಾಡಿದೆ ಎಂದು ನಟ ಪೃಥ್ವಿ ಅಂಬಾರ್ ಹರ್ಷ ವ್ಯಕ್ತಪಡಿಸಿದರು.

More News

You cannot copy content of this page