Search

Varaha Rupam Song Banned : ‘ಕಾಂತಾರ’ ವರಹಾ ರೂಪಂ ಹಾಡು ನಿರ್ಬಂಧ ತೀರ್ಪು ಪರನಿಂತ ಕೇರಳ ಹೈಕೋರ್ಟ್

ಹಲವಾರು ಭಾಷೆಗಳಲ್ಲಿ ಸದ್ದು ಮಾಡಿದ ಕಾಂತಾರ ಸಿನಿಮಾ ಬಗ್ಗೆ ಬಗೆ ಬಗೆಯ ಟೀಕೆಗಳು, ಆರೋಪಗಳು ಎದುರಾಗಿದ್ದವು. ಅದರ ನಡುವೆಯೇ ಕೇರಳ ಹೈಕೋರ್ಟ್ ವರಹಾ ರೂಪಂ ಹಾಡನ್ನು ಬಳಸದಂತೆ ನಿರ್ಬಂಧಿಸಿದ ಜಿಲ್ಲಾ ನ್ಯಾಯಾಲಯವನ್ನು ಎತ್ತಿಹಿಡಿದಿದೆ. ಮತ್ತೊಂದು ಕಡೆ ಚಿತ್ರತಂಡವು ತುಳು ಭಾಷೆಯಲ್ಲಿ ಸಿನಿಮಾ ಡಬ್ಬಿಂಗ್ ಮಾಡಿ ವಿದೇಶದಲ್ಲಿ ರಿಲೀಸ್ ಮಾಡಲು ಸಿದ್ಧತೆ ನಡೆಸುತ್ತಿದೆ.

ದೇಶದಾದ್ಯಂತ ಸಂಚಲನ ಮೂಡಿಸಿದ ಕಾಂತಾರ ಸಿನಿಮಾದ ವರಹಾ ರೂಪಂ ಹಾಡು ಸಹ ಸಖತ್ ವೈರಲ್ ಆಗಿತ್ತು. ಇದರ ನಡುವೆ ಕೇರಳದ ತೈಕ್ಕುಡ್ಡಂ ಬ್ರಿಡ್ಜ್ ತಂಡ ಮಾಡಿದ್ದ ‘ನವರಸಂ’ ಆಲ್ಬಂ ಸಾಂಗ್ ನಿಂದ ಹಾಡು ಕಾಫಿ ಮಾಡಲಾಗಿದೆ ಎಂದು ಅಪಾದಿಸಿದ್ದರು. ಈ ಸಂಬಂಧ ಆ ತಂಡವು ಕೇರಳದ ಜಿಲ್ಲಾ ನ್ಯಾಯಾಲಯದಲ್ಲಿ ಕೇಸ್ ದಾಖಲಿಸಿತ್ತು. ಇದನ್ನು ವಿಚಾರಣೆ ನಡೆಸಿದ ಕೋರ್ಟ್ ಹಾಡನ್ನು ಬಳಕೆ ಮಾಡಬಾರದು ಅಂತ ತೀರ್ಪು ನೀಡಿತು.

ನ್ಯಾಯಾಲಯವು ನೀಡಿದ ತೀರ್ಪನ್ನು ಗೌರವಿಸಿ ಹೊಂಬಾಳೆ ಫಿಲ್ಮ್ಸ್ ಸಿನಿಮಾ ಅನ್ನು ಒಟಿಟಿಗೆ ಬಿಡುಗಡೆ ಮಾಡಿದ ವೇಳೆಯಲ್ಲಿ ಹಾಡನ್ನು ತೆಗೆಯಲಾಗಿತ್ತು. ಆದರೆ, ಅದರ ನಡುವೆಯೂ ಚಿತ್ರತಂಡವು ಜಿಲ್ಲಾ ನ್ಯಾಯಾಲಯ ನೀಡಿದ ತೀರ್ಪಿನ ವಿರುದ್ಧ ತಡೆಯಾಜ್ಞೆ ಕೋರಿ ಕೇರಳ ಹೈಕೋರ್ಟ್ ಮೊರೆ ಹೋಗಿತ್ತು. ಆದರೆ, ಕೇರಳ ಹೈಕೋರ್ಟ್ ಇದು ನಯವಾಗಿ ತಿರಸ್ಕರಿಸಿದೆ.
ಕೆಳ ಹಂತದಲ್ಲಿನ ಅಧೀನ ನ್ಯಾಯಾಲಯಗಳು ನೀಡುವ ತೀರ್ಪುಗಳನ್ನು ವಿಮರ್ಶೆ ಮಾಡುವುದು, ಮರು ತೀರ್ಪು ನೀಡುವುದು ಸರಿಯಾದುದಲ್ಲ. ಅಂತಹ ಕ್ರಮಗಳ ಮೂಲಕ ಅಧೀನ ನ್ಯಾಯಾಲಯಗಳ ಕಾರ್ಯವ್ಯಾಪ್ತಿಯನ್ನು ಮೊಟಕುಗೊಳಿಸಿದಂತಾಗುತ್ತದೆ. ಆ ಮೂಲಕ ತಳ ಹಂತದ ನ್ಯಾಯಾಲಯಗಳು ತಮ್ಮತನವನ್ನು ಕಳೆದುಕೊಂಡು ಬಿಡುತ್ತದೆ ಎಂದು ಉಲ್ಲೇಖಿಸಿ ಕೇರಳ ಹೈಕೋರ್ಟ್ ಹೊಂಬಾಳೆ ಫಿಲ್ಮ್ಸ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತ ಅರ್ಜಿಯನ್ನು ತಳ್ಳಿ ಹಾಕಿದೆ.

ಕಾಂತಾರ ಸಿನಿಮಾ ದಲ್ಲಿ ‘ವರಾಹ ರೂಪಂ’ ಹಾಡನ್ನು ಬಳಸದಂತೆ ಕೇರಳದ ಪಾಲಕ್ಕಾಡ್ ಹಾಗೂ ಕೋಚಿಕ್ಕೊಡ್ ನ್ಯಾಯಾಲಯ ಹೊರಡಿಸಿರುವ ಆದೇಶದ ಮೇಲೆ ವೈಯುಕ್ತಿಕವಾಗಿ ವ್ಯಕ್ತಿಗಳು ಸಲ್ಲಿಸಿರುವ ಮನವಿಯನ್ನು ಪರಿಗಣಿಸಿ ವಿಚಾರಣೆ ನಡೆಸಲಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.

ತುಳು ಭಾಷೆಗೆ ಕಾಂತಾರ ಡಬ್ : ಈಗಾಗಲೇ ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡುತ್ತಿರುವ ಸಿನಿಮಾ ಕಾಂತಾರ. ಇದು ಒಟಿಟಿಗೆ ಬಿಡುಗಡೆ ಸಹ ಆಗುತ್ತಿದೆ. ಅದರ ಬೆನ್ನಲ್ಲೇ ತುಳು ಭಾಷೆಗೆ ತರ್ಜುಮೆ ಆಗುತ್ತಿದೆ.

ತುಳುನಾಡಿದ ಸಂಸ್ಕೃತಿ ಹಾಗೂ ದೈವರಾದನೆ, ಭೂತಾರಾಧನೆ ಸೇರಿದಂತೆ ಹಲವು ಆಯಾಮಗಳಲ್ಲಿ ತೆಗೆದಿರುವ ಸಿನಿಮಾ ಕಾಂತಾರ. ಅದನ್ನು ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡಲಷ್ಟೇ ಯೋಚಿಸಿದ್ದ ಚಿತ್ರತಂಡಕ್ಕೆ ಭಾರಿ ಬೆಂಬಲ ಸಿಕ್ಕಿದ ಹಿನ್ನೆಲೆಯಲ್ಲಿ ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಲಾಯಿತು. ಆ ವೇಳೆ ತುಳುಗೂ ಡಬ್ ಮಾಡುವಂತೆ ಒತ್ತಡಗಳು ಕೇಳಿ ಬಂದವು. ಈ ಹಿನ್ನೆಲೆಯಲ್ಲಿ ತುಳು ಭಾಷೆಗೆ ಡಬ್ ಆಗಿ ರಿಲೀಸ್‌ ಮಾಡಲು ಚಿತ್ರತಂಡ ರೆಡಿಯಾಗಿದ್ದು, ಅದರ ಟ್ರೇಲರ್ ನ್ನು ಬಿಡುಗಡೆ ಮಾಡಲಾಗಿದೆ. ನವೆಂಬರ್ 25 ರಂದು ಸಿನಿಮಾ ಅನ್ನು ವಿದೇಶದಲ್ಲಿ ಬಿಡುಗಡೆ ಮಾಡಲಿದ್ದಾರೆ. ಇಲ್ಲಿ ಎಲ್ಲರೂ ಕನ್ನಡದಲ್ಲಿ ಸಿನಿಮಾ ನೋಡಿರುವ ಹಿನ್ನೆಲೆಯಲ್ಲಿ ಸ್ವಲ್ಪ ತಡವಾಗಿ ಡಿಸೆಂಬರ್ 2 ಕ್ಕೆ ರಾಜ್ಯದಲ್ಲಿ ಬಿಡುಗಡೆ ಮಾಡಲಿದ್ದಾರೆ ಎನ್ನಲಾಗಿದೆ.

More News

You cannot copy content of this page