ಬೆಂಗಳೂರು : ಭಾರತ ದೇಶವು G20 ಆದ್ಯಕ್ಷ ಸ್ಥಾನವನ್ನು ಅಲಂಕರಿಸುವ ನಿಮಿತ್ತ ಭಾರತದ 100 ಪ್ರಾಚೀನ ಸ್ಥಳಗಳನ್ನು ಡಿಸೆಂಬರ್ 1 ರಿಂದ 7 ರ ವರಗೆ ಅಲಂಕರಿಸುವ ಆಯೋಜನೆ ಹಮ್ಮಿಕೊಳ್ಳಲಾಗಿದೆ.

ಅದರಲ್ಲಿ ಕರ್ನಾಟಕದಿಂದ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಟಿಪ್ಪು ಸುಲ್ತಾನ್ ಪ್ಯಾಲೇಸ್ ಸೇರಿದಂತೆ ರಾಜ್ಯದ ಒಟ್ಟು ಎಂಟು ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ರಾಜ್ಯದ ಚಿಕ್ಕಬಳ್ಳಾಪುರದಲ್ಲಿರುವ ನಂದಿ ಭೋಗಾನಂದೀಶ್ವೇರ ದೇಗುಲ, ಬಳ್ಳಾರಿ ಹಂಪಿಯಲ್ಲಿರುವ ಜೈನ ದೇವಾಲಯಗಳ ಸಮೂಹ, ಬಳ್ಳಾರಿ ಹಂಪಿಯಲ್ಲಿರುವ ಏಕಶಿಲಾ ದೇಗುಲ, ಬಳ್ಳಾರಿ ಹಂಪಿಯಲ್ಲಿರುವ ವಿರೂಪಾಕ್ಷ ದೇಗುಲ, ಹಂಪಿಯಲ್ಲಿರುವ ಸಾಸಿವೆಕಾಳು ಗಣೇಶ ದೇಗುಲ, ಬಾಗಲಕೋಟೆಯಸಲ್ಲಿರುವ ಪಟ್ಟದಕಲ್ಲು, ಟಿಪ್ಪು ಸುಲ್ತಾನ್ ಪ್ಯಾಲೇಸ್ ಬೆಂಗಳೂರು ಹಾಗೂ ವಿಜಯಪುರದಲ್ಲಿರುವ ಗೋಲ್ ಗುಂಬಜ್ ಗಳನ್ನು ಆಯ್ಕೆ ಮಾಡಲಾಗಿದೆ.


ಟಿಪ್ಪು ಸುಲ್ತಾನ್ ಪ್ಯಾಲೇಸ್ ಅನ್ನು ಆಯ್ಕೆ ಮಾಡಿರುವ ಕೇಂದ್ರದ ಕ್ರಮವನ್ನು ಹಿಂದೂ ಜನಜಾಗೃತಿ ಸಮಿತಿ ತೀವ್ರವಾಗಿ ವಿರೋಧಿಸಿದ್ದು, ಒಬ್ಬ ಮತಾಂಧನ ಪ್ಯಾಲೇಸ್ ಆಯ್ಕೆ ಮಾಡುವ ಬದಲು ರಾಜ್ಯದಲ್ಲಿರುವ ಬೇರೆ ಐತಿಹಾಸಕಿ ಸ್ಥಳಗಳನ್ನು ಆಯ್ಕೆ ಮಾಡಬಹುದಿತ್ತು ಎಂದು ಹೇಳಿದೆ.
ಟಿಪ್ಪು ಸುಲ್ತಾನ್ ಪ್ಯಾಲೇಸ್ ಬದಲಾಗಿ ಮೈಸೂರು ಮಹಾರಾಜರ ಪ್ಯಾಲೇಸ್ ಅತ್ಯಂತ ಮಹತ್ವದಿದೆ. ವರ್ಷಕ್ಕೆ 40 ಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ & ಕೊಟ್ಯಾಂತರ ರೂಪಾಯಿ ಆದಾಯ ತರುತ್ತಿದೆ. ಅದನ್ನು ನಿರ್ಲಕ್ಷ್ಯ ಮಾಡಿ, ವರ್ಷಕ್ಕೆ 40,000 ಜನರು ಭೇಟಿ ಮಾಡದ ಕ್ರೂರಿ ಟಿಪ್ಪು ಸುಲ್ತಾನ ಪ್ಯಾಲೇಸ್ ಆಯ್ಕೆ ಮಾಡಿರುವುದು ಖಂಡನೀಯ ಎಂದು ಹೇಳಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಹೇಳಿದ್ದಾರೆ.
