ನವದೆಹಲಿ ಡಿ.2. : ತನ್ನ ಪ್ರೇಯಸಿಯನ್ನೇ 35 ತುಂಡುಗಳನ್ನಾಗಿ ಕೊಲೆ ಮಾಡಿದ ಆರೋಪದಡಿ ಬಂಧಿಯಾಗಿರುವ ಆರೋಪಿ ಅಫ್ತಾಬ್ ಅಮೀನ್ ಅನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಸಂದರ್ಭದಲ್ಲಿ, ಶ್ರದ್ಧಾ ನನ್ನಿಂದ ದೂರವಾಗಿ ಬಿಡುತ್ತಾರೆ ಎಂಬ ಭಯದಲ್ಲಿ ಹತ್ಯೆಯನ್ನು ನಾನೇ ಮಾಡಿಬಿಟ್ಟಿದ್ದೇನೆ ಎಂಬ ಸಂಗತಿಯನ್ನು ಒಪ್ಪಿಕೊಂಡಿದ್ದಾನೆ. ಈ ಹಿಂದೆ ಎರಡು ಬಾರಿ ಪಾಲಿಗ್ರಾಪ್ ಪರೀಕ್ಷೆ ನಡೆಸಲಾಯಿತು. ಆ ವೇಳೆಯೂ ತಪ್ಪೊಪ್ಪಿಕೊಂಡಿದ್ದ ಅಫ್ತಾಬ್, ಇಲ್ಲಿಯೂ ತನ್ನ ತಪ್ಪನ್ನ ಒಪ್ಪಿಕೊಂಡಿದ್ದಾನೆ.
ಮುಂಬೈ ಮೂಲದ ಯುವತಿ ಶ್ರದ್ದಾ ವಾಕರ್ ಮತ್ತು ಅಫ್ತಾಬ್ ಅಮೀನ್ ಇಬ್ಬರೂ ಲೀವ್ ಇನ್ ಸಂಬಂಧದಲ್ಲಿದ್ದರು. ಅದು ವಿನಾಕಾರಣದಿಂದ ಬಿರುಕು ಮೂಡಿದ್ದರಿಂದ ಆಕೆಯನ್ನು ಈತ ಕೊಲೆ ಮಾಡಿದ್ದಾಗಿ
ಮಂಪರು ಪರೀಕ್ಷೆ ವೇಳೆ ತಿಳಿಸಿದ್ದಾನೆ.

ಗುರುವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 03 ಗಂಟೆವರೆಗೂ ಆಫ್ತಾಬ್ ನನ್ನು ಮಂಪರು ಪರೀಕ್ಷೆಗೆ ಒಳಪಡಿಸಲಾಯಿತು. ಈ ಸಂದರ್ಭದಲ್ಲಿ ಶ್ರದ್ಧಾ ಹತ್ಯೆಗೆ ಸಂಬಂಧಿಸಿದಂತೆ ಹಲವಾರು ಪ್ರಶ್ನೆಗಳನ್ನು ಕೇಳಿದ್ದು, ಎಲ್ಲದಕ್ಕೂ ಉತ್ತರ ನೀಡಿದ್ದಾನೆ. ಶ್ರದ್ಧಾ ಮತ್ತು ನನ್ನ ಮಧ್ಯ ಹಣಕಾಸಿಗೆ ಸಂಬಂಧಿಸಿದ ವಿಷಯಗಳ ಕುರಿತು ಗಲಾಟೆಯಿತ್ತು. ದೆಹಲಿಗೆ ಬಂದಮೇಲೆ ಅವಳು ನನ್ನಿಂದ ಶಾಶ್ವತವಾಗಿ ದೂರ ಇರುವೆ ಅಂತೆಲ್ಲಾ ಹೇಳ್ತಿದ್ದರು. ಆಕೆಯ ಮಾತುಗಳು ನನಗೂ ನೋವು ತರಿಸಿದ್ದವು. ಅದೇ ಸಂದರ್ಭದಲ್ಲಿ ಡ್ರಗ್ಸ್ ಸೇವಿಸಿ ನಶೆಯಲ್ಲಿದ್ದ ನಾನು ಅವರನ್ನು ಕೊಲೆ ಮಾಡಿಬಿಟ್ಟೆ ಎಂದು ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಇದೇ ವೇಳೆ ಆಕೆಯನ್ನು ಹತ್ಯೆ ಮಾಡಲು ಬಳಸಿದ್ದ ಆಯುಧ, ಫೋನ್, ಬಟ್ಟೆಗಳನ್ನು ಹತ್ಯೆಯ ನಂತರ ಏನು ಮಾಡಿದೆ ಎಂಬುದನ್ನು ಸಹ ಹಂಚಿಕೊಂಡಿದ್ದಾನೆ ಎನ್ನಲಾಗಿದೆ. ಈ ಮಂಪರು ಪರೀಕ್ಷೆಯಲ್ಲಿ ಶ್ರದ್ಧಾ ಅವರ ತಲೆಯನ್ನು ಎಲ್ಲಿ ಬಿಸಾಡಿದ ಎಂಬುದರ ಬಗ್ಗೆ ಉತ್ತರ ನೀಡಿಲ್ಲ. ಈ ಬಗ್ಗೆ ಕೇಳಿದ ವೇಳೆ ಎಲ್ಲಿ ಎಂಬುದನ್ನು ಗುರುತಿಸುವಲ್ಲಿ ಅಫ್ತಾಬ್ ವಿಫಲನಾದ ಎಂದು ಪರೀಕ್ಷೆ ಮೂಲಗಳು ಹೇಳಿವೆ. ಮಂಪರು ಪರೀಕ್ಷೆ ವೇಳೆ ನೀಡಿದ ಬಹುತೇಕ ಮಾಹಿತಿ ಭೌತಿಕ ಸಾಕ್ಷ್ಯಗಳೊಂದಿಗೆ ಸಾಮ್ಯತೆ ಹೊಂದುತ್ತಿದ್ದು, ಮತ್ತಷ್ಟು ಮಾಹಿತಿಯನ್ನು ಪರಿಶೀಲಿಸಬೇಕಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.