ಬೆಂಗಳೂರು : ಡಿ.2 : ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಯ ಖ್ಯಾತ ನಟ ಸಿದ್ದಾರ್ಥ್ ಮತ್ತು ಅದಿತಿ ಅವರ ನಡುವಿನ ಲವ್ ಟ್ರ್ಯಾಕ್ ಬಾರಿ ಸದ್ದು ಮಾಡುತ್ತಿದ್ದು, ಇದೀಗ ಇವರ ಲವ್ ಮ್ಯಾಟರ್ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಸೃಷ್ಟಿಸಿದೆ.
ಬಣ್ಣದ ಲೋಕದಲ್ಲಿ ಹಲವು ನಟ, ನಟಿಯರ ನಡುವಿನ ಪ್ರೇಮ ವಿಚಾರಗಳು ಚರ್ಚೆಯಾಗುತ್ತಲೇ ಇರ್ತವೆ. ಅಲ್ಲದೇ, ಇತ್ತೀಚಿಗೆ ಸಮಂತಾ ಮತ್ತು ನಾಗಚೈತನ್ಯ ಅವರ ಡಿವೋರ್ಸ್ ಕೇಸ್ ಬಗ್ಗೆ ವ್ಯಾಪಕ ಚರ್ಚೆಗಳು ನಡೆದವು. ಇಂತಹ ಚರ್ಚೆಗಳು ಹುಟ್ಟಿಕೊಂಡಾಗಲೆಲ್ಲಾ ಕೆಲವರು ಪ್ರತಿಕ್ರಿಯಿಸುತ್ತಾರೆ. ಇನ್ನು ಕೆಲವರು ನಮ್ಮ ನಡುವೆ ಅಂಥದ್ದೇನೂ ಇಲ್ಲ. ನಾವಿಬ್ಬರು ಸ್ನೇಹಿತರಷ್ಟೇ ಎನ್ನುವರು ಇದ್ದಾರೆ.

ಇತ್ತ ಟಾಲಿವುಡ್ ನಟಿ ಅದಿತಿ ರಾವ್ ನಟ ಸಿದ್ಧಾರ್ಥ್ ಜೊತೆ ಕಾಣಿಸಿಕೊಂಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ, ಇವರಿಬ್ಬರ ನಡುವೆ ಪ್ರೇಮ ಬೆಳೆದಿದೆ ಎಂಬ ಸುದ್ದಿ ಹರಡಿದೆ. ಮುಂಬೈನ ಹಲವು ರೆಸ್ಟೋರೆಂಟ್‌ಗಳಲ್ಲಿ ಒಟ್ಟಿಗೆ ಇರುವ ಫೋಟೋಗಳು ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿವೆ. ಅಲ್ಲದೇ, ಇವರಿಬ್ಬರ ಲವ್ ಟ್ರ್ಯಾಕ್ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

ಸಿದ್ಧಾರ್ಥ್ ಮತ್ತು ಅದಿತಿ ರಾವ್ ಇಬ್ಬರೂ 4-5 ತಿಂಗಳಿನಿಂದ ಜೊತೆಯಲ್ಲಿ ವಾಸ ಮಾಡುತ್ತಿದ್ದು, ಮುಂಬಯಿ ಹೋಟೆಲ್ ನಿಂದ ಹೊರ ಬರುವ ಸಂದರ್ಭದಲ್ಲಿ ಮಾಧ್ಯಮದವರಿಗೆ ಎದುರಾಗಿದ್ದಾರೆ. ಈ ಸಂದರ್ಭದಲ್ಲಿ ಸಿದ್ದಾರ್ಥ್ ಸ್ವಲ್ಪ ಅಸಹನೆ ವ್ಯಕ್ತಪಡಿಸಿದ್ದರು ಎನ್ನಲಾಗಿದೆ.

ಅದಿತಿ ಮತ್ತು ಸಿದ್ದಾರ್ಥ್ ಸಿನಿಮಾವೊಂದರಲ್ಲಿ ಪ್ರೇಮಿಗಳಾಗಿ ಆಕ್ಟ್ ಮಾಡಿದ್ದರು. ಅದರಲ್ಲಿ ಇವರಿಬ್ಬರ ನಟನೆ ಎಲ್ಲರನ್ನೂ ಆಕರ್ಷಿತರನ್ನಾಗಿ ಮಾಡಿತ್ತು. ಅದಾದ ಮೇಲೆ ಇವರಿಬ್ಬರ ನಡುವೆ ಪ್ರೇಮ ಬೆಳೆದಿದೆ ಎನ್ನಲಾಗಿದೆ. ಅಲ್ಲದೆ, ಇತ್ತೀಚಿಗೆ ಅಷ್ಟೇ ಸಿದ್ದಾರ್ಥ್ ಅದಿತಿಯ ಹುಟ್ಟುಹಬ್ಬಕ್ಕೆ ‘ನನ್ನ ಹೃದಯದ ರಾಜಕುಮಾರಿಗೆ ಹುಟ್ಟುಹಬ್ಬದ ಶುಭಾಶಯಗಳು’ ಅಂತ ವಿಶ್ ಮಾಡಿ ಆಕೆ ಬರ್ತ್ ಡೇ ಆಚರಿಸಿಕೊಳ್ಳುತ್ತಿರುವ ಫೋಟೋ ಹಾಕಿ ನಿನ್ನೆಲ್ಲಾ ಕನಸುಗಳು ನನಸಾಗಬೇಕು ಎಂದು ನಾನು ಬಯಸುತ್ತೇನೆ ಅಂತ ಶುಭಕೋರಿದ್ದಾರೆ. ಇವೆಲ್ಲವೂ ಸಹ ಇವರಿಬ್ಬರ ನಡುವೆ ಪ್ರೇಮ ಹಬ್ಬಿದೆ ಎಂಬುದನ್ನು ತೋರಿಸುವ ಕುರುಹುಗಳು ಆಗಿವೆ.