ಬೆಂಗಳೂರು ; ಡಿ.21 : ಬಿಗ್ ಬಾಸ್ ಸೀಸನ್ 9 ಆರಂಭವಾಗಿ ಮೂರು ತಿಂಗಳು ಕಳೆದಿದ್ದು, ಇದೀಗ ಮನೆಗೆ ಬೇರೆಯವರು ಗೆಸ್ಟ್ ಗಳಾಗಿ ಎಂಟ್ರಿಯಾಗ್ತಿದ್ದಾರೆ. ಅದೇ ತರ ಕಾಮಿಡಿ ಆ್ಯಕ್ಟರ್ ಮಂಜು ಪಾವಗಡ ದೊಡ್ಮನೆ ಗೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಟೈಟಲ್ ತನ್ನದಾಗಿಸಿಕೊಂಡಿರುವ ಮಂಜು ಪಾವಗಡ ಆಗಮನವು ಮನೆ ಮಂದಿಗೆಲ್ಲಾ ಜೋಶ್ ಹೆಚ್ಚಿಸಿದೆ.
ಮಂಜು ಪಾವಗಡ ದೊಡ್ಮನೆಗೆ ಎಂಟ್ರಿಯಾದ ಹಿನ್ನೆಲೆಯಲ್ಲಿ ಮನೆ ಮಂದಿಯಲ್ಲಿ ಇದ್ದ ಜೋಶ್ ಅನ್ನು ತಡೆಯಲಾಗುತ್ತಿಲ್ಲ. ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಮನೆಯಲ್ಲಿ ಹೆಸರು ಮಾಡಿರುವ ಸ್ಪರ್ಧಿ ಅಮೂಲ್ಯ ಮಂಜು ಎದುರಿಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಐ ಲವ್ಯೂ ಮಂಜು ಅಂತ ಹೇಳುತ್ತಲೇ ರಾಕೇಶ್ ಅಡಿಗಗೆ ಒಂದು ತರಹದ ಶಾಕ್ ನೀಡಿದ್ದ.

ದೊಡ್ಮನೆ ಯ ಸೀಸನ್ 9 ರಲ್ಲಿ ಲವ್ ಬರ್ಡ್ಸ್ ತರ ರಾಕೇಶ್ ಮತ್ತು ಅಮೂಲ್ಯ ಇರ್ತಾ ಇದ್ರು. ಅವರಿಬ್ಬರೂ ಲವರ್ಸ್ ತರ ವರ್ತನೆ ಮಾಡ್ತಿದ್ರು. ಅಲ್ಲದೇ, ಅಮೂಲ್ಯ ಹೆಚ್ಚು ಸಮಯವನ್ನು ರಾಕೇಶ್ ಜೊತೆಗೆ ಕಳೆಯುತ್ತಿದ್ದರು. ಇಂತಹ ಸಂದರ್ಭದಲ್ಲಿ ಅಮೂಲ್ಯ ಮಂಜು ಗೆ ಲವ್ ಪ್ರಪೋಸ್ ಮಾಡಿದ್ದ ದೃಶ್ಯವನ್ನು ರಾಕೇಶ್ ಅರಗಿಸಿಕೊಳ್ಳಲು ಕಷ್ಟವಾಯಿತು. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ರಾಕೇಶ್ ಕಾಮೆಂಟ್ ಮಾಡಿದ್ದು, ಈ ದೃಶ್ಯ ನೋಡ್ತಿದ್ದರೆ, ನನಗೆ ಹಾವು ಕಚ್ಚಿದಂತೆ ಫೀಲ್ ಆಗುತ್ತಿದೆ’ ಎಂದು ಪ್ರತಿಕ್ರಿಯಿಸುತ್ತಾರೆ.

ಕನ್ನಡ ಬಿಗ್ ಬಾಸ್ ಸೀಸನ್ 8’ರಲ್ಲಿ ಮಂಜು ಸಾಕಷ್ಟು ಗಮನ ಸೆಳೆದಿದ್ದರು. ಅವರ ಆಟದ ವಿಧಾನ ಹಲವಾರು ಜನರಿಗೆ ಸಖತ್ ಎಂಜಾಯ್ಮೆಂಟ್ ಕೊಟ್ಟಿದ್ದರೆ, ಅನೇಕರು ಬೇಸರ ಸಹ ವ್ಯಕ್ತಪಡಿಸಿದ್ದಾರೆ. ಕಳೆದ ಸೀಸನ್ ನಲ್ಲಿ ಮಂಜು ಅವರ ಕಾಮಿಡಿ ಪಂಚ್ ಕೂಡ ಹೈಲೈಟ್ ಆಗಿತ್ತು. ಈ ಸೀಸನ್ನಲ್ಲಿ ಹಳೆಯ ಸ್ಪರ್ಧಿಗಳಿಗೆ ಅವಕಾಶ ಇದೆ ಎಂದಾಗ ಮಂಜು ಅವರನ್ನು ಮತ್ತೆ ಕರೆಸಿ ಎನ್ನುವ ಬೇಡಿಕೆ ಅನೇಕರಿಂದ ಬಂದಿತ್ತು. ಆದರೆ, ಅದು ಸಾಧ್ಯವಾಗಿಲ್ಲವಾದರೂ, ಇದೀಗ ಒಂದು ಟಾಸ್ಕ್ ಗಾಗಿ ಬಿಗ್ ಬಾಸ್ ಮನೆಗೆ ಎಂಟ್ರಿಯಾಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಅವರು ಎಷ್ಟು ಸಮಯ ಇರ್ತಾರೆ, ಅಷ್ಟೊತ್ತು ನೋಡುಗರಿಗೆ ಮನರಂಜನೆ ದುಪ್ಪಟ್ಟಾಗಲಿದೆ. ಇದೀಗ ದೊಡ್ಮನೆಯಲ್ಲಿ ಎಂಟು ಆಟಗಾರರಿದ್ದಾರೆ. ಅಮೂಲ್ಯ ಗೌಡ, ಆರ್ಯವರ್ದನ್ ಗುರೂಜಿ, ರಾಕೇಶ್ ಅಡಿಗ, ರೂಪೇಶ್ ರಾಜಣ್ಣ, ಅರುಣ್ ಸಾಗರ್, ರೂಪೇಶ್ ಶೆಟ್ಟಿ, ದಿವ್ಯಾ ಉರುಡುಗ ಹಾಗೂ ದೀಪಿಕಾ ದಾಸ್ ಆಟ ಮುಂದುವರಿಸಿದ್ದಾರೆ. ಮತ್ತೊಂದು ವಿಶೇಷ ಅಂದರೆ ಈ ವಾರ ಎಲ್ಲರೂ ನಾಮಿನೇಟ್ ಆದ್ದರಿಂದ ಎಲ್ಲರೂ ಉತ್ತಮ ರೀತಿಯಲ್ಲಿ ಆಟವಾಡಬೇಕಾಗಿದೆ.