ಜಗತ್ತು ಸುಂದರವನ್ನೇ ಬಯಸುತ್ತೆ. ಎಲ್ಲವೂ ನೀಟ್ ಹ್ಯಾಂಡ್ ಕ್ಲೀನ್ ಇರಬೇಕು, ಫ್ರೆಶ್ ಆಗಿ ಕಾಣ್ಬೇಕು. ಒಟ್ನಲ್ಲಿ ತುಂಬಾನೇ ಚೆನ್ನಾಗಿ ಕಾಣ್ಬೇಕು ಅನ್ನೋ ಆಸೆ. ಸೋಷಿಯಲ್ ಮೀಡಿಯಾ ಬಂದ ಮೇಲಂತೂ ಇದು ಇನ್ನಷ್ಟು ಹೆಚ್ಚಾಗಿದೆ.
ಈ ವಿಷಯದಲ್ಲಿ ಹೆಣ್ಮಕ್ಳನ್ನ ಕೇಳ್ಬೇಕಾ..? ಎಲ್ಲರಿಗೂ ಮಾಡಲ್ ಗಳ ರೀತಿಯೇ ಕಾಣ್ಬೇಕು ಅನ್ನೋ ಆಸೆ. ಆದ್ರೆ ಚೆನ್ನಾಗಿ ಕಾಣ್ಬೇಕು ಎಂದು ಬ್ಯೂಟಿ ಪಾರ್ಲರ್ ಗಳಿಗೆ ಹೋಗೋ ಮಹಿಳೆಯರು ಅನೇಕ ಚರ್ಮ ಸಮಸ್ಯೆಗಳಿಗೆ ತುತ್ತಾಗ್ತಿದ್ದಾರೆ ಅಂದ್ರೆ ನೀವ್ ನಂಬಲೇಬೇಕು.

ಇನ್ ಸ್ಟೆಂಟ್ ಆಗಿ ಬ್ಯೂಟಿ ಬೇಕು, ಕಡಿಮೆ ಖರ್ಚಾಗಬೇಕು. ಹತ್ತಿರದಲ್ಲಿ ಸಿಗ್ಬೇಕು.. ಸುಲಭವಾಗಿ ಕೈಗೆಟುವ ಹಾಗಿರ್ಬೇಕು ಎಂದು ಇತ್ತೀಚೆಗೆ ಭಾರೀ ಪ್ರಮಾಣದಲ್ಲಿ ಪಾರ್ಲರ್ ಗಳ ಮೊರೆ ಹೋಗ್ತಿದ್ದಾರಂತೆ. ಇಂಡಿಯನ್ ಇಂಡಸ್ಟ್ರಿ ಕಾಸ್ಮೊಲಾಜಿಸ್ಟ್ ಗಳ ಪ್ರಕಾರ 2024 ರ ವೇಳೆಗೆ ಭಾರತ ಕಾಸ್ಮೆಟಿಕ್ ವಿಚಾರದಲ್ಲಿ 1 ಬಿಲಿಯನ್ ಡಾಲರ್ ಗಳಿಕೆ ಮಾಡುತ್ತದೆ ಎನ್ನಲಾಗಿದೆ.
ಚಂದ ಕಾಣೋದು ಈಗ ತುಂಬಾನೇ ಇಂಪಾರ್ಟೆಂಟ್ ವಿಚಾರವಾಗಿ ಹೋಗಿದೆ. ಬೇಗಾನೇ ಸೋಷಿಯಲ್ ಮೀಡಿಯಾದಲ್ಲಿ ಲೈಕ್ ಗಿಟ್ಟಿಸಿಕೊಳ್ಳಬೇಕು.. ನಾನೇ ಚಂದವಾಗಿ ಕಾಣ್ಬೇಕು ಎಂಬ ಆಸೆಯಿಂದ ಬೇಗ ಬೇಗ ರಿಸೆಲ್ಟ್ ಬರ್ಬೇಕು ಎಂದು ಸಿಕ್ಕಾಪಟ್ಟೆ ಕಾಸ್ಮೆಟಿಕ್ ಬಳಕೆಯಿಂದ ಅನೇಕ ಮಹಿಳೆಯರು ದೀರ್ಘಾವಧಿ ಸಮಸ್ಯೆಯಿಂದ ಬಳಲ್ತಿದ್ದಾರೆ ಎಂದು ವೈದ್ಯೆ ಫಾತಿಮಾ ಕಳವಳ ವ್ಯಕ್ತಪಡಿಸಿದ್ದಾರೆ.
ಮ್ಯಾಜಿಕ್ ಬ್ಯುಟಿ ಬೇಕು ಎಂದು ಪಾರ್ಲರ್ ಗೆ ಹೋಗೋ ಮಹಿಳೆಯರು ಅಷ್ಟೇ ದಾವಂತದಿಂದ ಆಸ್ಪತ್ರೆ ಕಡೆಗೂ ಮುಖ ಮಾಡ್ತಿದ್ದಾರಂತೆ.. ಅದಕ್ಕೆ ಮುಖ್ಯ ಕಾರಣ ನಕಲಿ ಪಾರ್ಲರ್ ಗಳ ಹಾವಳಿ. ಪ್ರೊಫೇಷನಲ್ ಗಳ ಕೊರತೆ ಇದ್ದು, ಚರ್ಮಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡದೇ ಇರೋದೇ ಸಮಸ್ಯೆಗೆ ಕಾರಣ ಎನ್ನಲಾಗ್ತಿದೆ.

ಇದರಿಂದ ಲಾಂಗ್ ಟರ್ಮ್ ಸ್ಕಿನ್ ಡ್ಯಾಮೇಜ್, ಮುಖಕ್ಕೆ ಬ್ಲೀಚ್ ಮಾಡುವ ಜೊತೆಗೆ ಸ್ಟಿರಾಯ್ಡ್ ಕೊಡಲಾಗ್ತಿರುವುದರಿಂದ ಮುಖದ ಚರ್ಮ ತೆಳ್ಳಗಾಗ್ತಿದೆ. ಚರ್ಮದ ಅಲರ್ಜಿ.. ಏಕಾಏಕಿ ಮುಖದ ಮೇಲೆ ಕಪ್ಪು ಕಲೆ ಶುರುವಾಗೋದು, ಗುಳ್ಳೆ ಕಾಣಿಸಿಕೊಳ್ಳುವುದು, ಮುಖದ ಮೇಲೆ ತೀರ ಕೂದಲುಗಳ ಬೆಳವಣಿಗೆ, ಕೆಮಿಕಲ್ ಹೇರ್ ಟ್ರೀಟ್ಮೆಂಟ್ ನಿಂದ ಕೂದಲು ಬುಡ ಸಮೇತ ಉದುರುವುದು ಸೇರಿದಂತೆ ಅನೇಕ ಸಮಸ್ಯೆ ದಾಖಲಾಗ್ತಿದೆಯಂತೆ.

ನ್ಯೂಟ್ರಿಷಿಯನ್ಸ್ ಡೆಫಿಷಿಯನ್ಸಿ, ಹಾರ್ಮೋನ್ ಇಂಬ್ಯಾಲೆನ್ಸ್ ಉಂಟಾದ ಸಂದರ್ಭದಲ್ಲಿ ಚರ್ಮದ, ದೇಹದ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಅದನ್ನ ಕ್ರೀಮ್ ಹಂಚುವುದರಿಂದ ಹೋಗಲಾಡಿಸಲಾಗಲ್ಲ. ಹೀಗಾಗಿ ದೇಹಕ್ಕೆ ಏನ್ ಸಮಸ್ಯೆ ಆಗ್ತಿದೆ.. ಎಂಬುದನ್ನ ಮೊದಲು ಅರ್ಥ ಮಾಡ್ಕೊಂಡು ಟ್ರೀಟ್ಮೆಂಟ್ ತೆಗೆದುಕೊಂಡರೆ ಒಳ್ಳೆ ರಿಸಲ್ಟ್ ಸಿಗುತ್ತೆ ಅಂತಾರೆ ವೈದ್ಯರು.
#SPA #BEAUTY SALOON #SKIN DECEASE #BECAREFUL #LOCAL COSMOTICS #NUTRISION #BRANDED COSMOTICS