ನವದೆಹಲಿ; ಡಿ.21: ಇತ್ತೀಚಿಗೆ ಅಷ್ಟೇ ಯಶೋಧ ಸಿನಿಮಾದಲ್ಲಿ ನಟಿಸಿದ್ದ ಸಮಂತಾ ಅವರು ಮಯೋಸೈಟಿಸ್ ಎಂಬ ಅಪರೂಪದ ಕಾಯಿಲೆಯಾದ ಬಳಲುತ್ತಿದ್ದು, ರೆಸ್ಟ್ ನಲ್ಲಿರು ಹಿನ್ನೆಲೆಯಲ್ಲಿ ಸಿನಿಮಾ ರಂಗದಿಂದನೇ ದೂರ ಉಳಿಯಲಿದ್ದಾರೆ ಹಾಗೂ ವಿಜಯ್ ದೇವರಕೊಂಡ ನಟಿಸುತ್ತಿರುವ ಖುಷಿ ಸಿನಿಮಾದಿಂದಲೂ ಕೈಬಿಡಲಾಗಿದೆ ಎನ್ನಲಾಗಿತ್ತು. ಆದರೆ, ಈ ಬಗ್ಗೆ ಚಿತ್ರತಂಡವು ಸ್ಪಷ್ಟನೆ ನೀಡಿದ್ದು, ಸಂಕ್ರಾಂತಿ ನಂತರ ಚಿತ್ರೀಕರಣ ಮರು ಆರಂಭ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ನನ್ನ ಬದುಕಿನಲ್ಲಿ ಮಾನಸಿಕವಾಗಿ, ದೈಹಿಕವಾಗಿ ಒಳ್ಳೆಯ ಹಾಗೂ ಕೆಟ್ಟ ದಿನಗಳು ಎರಡೂ ಇದ್ದವು. ಇದನ್ನು ನನ್ನಿಂದ ನಿರ್ವಹಿಸಲು ಸಾಧ್ಯವೇ ಇಲ್ಲ ಎಂಬಂತಹ ಪರಿಸ್ಥಿತಿಗಳೂ ಕೂಡ ಕಳೆದು ಹೋಗಿವೆ. ಈಗ ಈ ಸಮಸ್ಯೆಯಿಂದ ಬೇಗನೇ ಚೇತರಿಸಿಕೊಳ್ಳುತ್ತೇನೆ ಎಂದು ಅನಿಸುತ್ತದೆ. ನಾನು ನಿಮ್ಮನ್ನು ಪ್ರೀತಿಸುತ್ತೇನೆ.. ಈ ಕಠಿಣ ಸಮಯ ಕೂಡ ಕಳೆದು ಹೋಗುತ್ತದೆ ಎಂದು ಇತ್ತೀಚೆಗೆ ನಟಿ ಸಮಂತಾ ಹೇಳಿದ್ದರು.

ಅದರ ಮಧ್ಯೆಯೇ ಹಲವಾರು ಪ್ರಾಜೆಕ್ಟ್ ಹಾಗೂ ಸಿನಿಮಾಗಳಿಂದ ಸಮಂತಾ ಅವರನ್ನು ಕೈ ಬಿಡಲಾಗಿದೆ ಎಂಬ ಸುದ್ದಿಗಳು ಹರಡಿದ್ದವು. ಇದರ ಜೊತೆಗೆ ವಿಜಯ್ ದೇವರಕೊಂಡ ನಟಿಸುತ್ತಿರುವ ಖುಷಿ ಸಿನಿಮಾದಲ್ಲಿ ಸಮಂತಾ ನಾಯಕಿಯಾಗಿ ನಟಿಸುತ್ತಿದ್ದರು. ಆದರೆ, ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಕೈ ಬಿಡಲಾಗಿದೆ ಎಂಬ ಸುದ್ದಿ ಸಹ ಹರಡಿತ್ತು. ಆದರೆ, ಸಮಂತಾ ಜೊತೆಗೆ ಈ ಸಿನಿಮಾ ಎರಡು ಹಂತದಲ್ಲಿ ಚಿತ್ರೀಕರಣ ನಡೆದಿದೆ. ಹೀಗಾಗಿ, ಚಿತ್ರತಂಡವು ಈ ಬಗ್ಗೆ ಸ್ಪಷ್ಟನೆ ನೀಡಿದೆ.

ಅಪರೂಪದ ಕಾಯಿಲೆಯಿಂದ ಬಳಲಿದ ಸಮಂತಾ ಸಧ್ಯಕ್ಕೆ ರೆಸ್ಟ್ ನಲ್ಲಿ ಇದ್ದಾರೆ. ಆದ್ದರಿಂದ ಸಿನಿಮಾ ಚಿತ್ರೀಕರಣ ಮಾಡಲು ಸಾಧ್ಯವಾಗಿಲ್ಲ. ಆರೋಗ್ಯದ ಪರಿಸ್ಥಿತಿ ಹದಗೆಟ್ಟಿದ್ದರಿಂದ ವಿಶ್ರಾಂತಿ ಬೇಕು ಅಂದಿದ್ದಾರೆ. ಹೀಗಾಗಿ, ಅವರು ಮುಂದಿನ ವರ್ಷದ ಸಂಕ್ರಾಂತಿ ಹಬ್ಬ ಮುಗಿದ ಮೇಲೆ ಚಿತ್ರೀಕರಣ ಆರಂಭಿಸಲಾಗುತ್ತದೆ ಎಂದು ಖುಷಿ ಚಿತ್ರತಂಡ ಹೇಳಿದೆ.
ಸಮಂತಾ ಅವರು ಖುಷಿ ಸಿನಿಮಾದಿಂದ ಹೊರ ನಡೆದಿದ್ದಾರೆ ಎನ್ನುವುದು ಸುಳ್ಳು ಸುದ್ದಿ. ಅವರಿಗೆ ಈ ಕಾಯಿಲೆ ಬಗ್ಗೆ ಆರಂಭದ ಹಂತದಲ್ಲೇ ಸುಳಿವು ಸಿಕ್ಕಿದ್ದರಿಂದ ಉತ್ತಮ ಚಿಕಿತ್ಸೆ ಪಡೆಯಲು ಸಾಧ್ಯವಾಯಿತು. ಹೆಚ್ಚುವರಿ ಚಿಕಿತ್ಸೆ ಪಡೆಯಲು ವಿದೇಶಕ್ಕೆ ಸಹ ಹೋಗಿದ್ದಾರೆ. ಇದೊಂದು ಅಪಾಯಕಾರಿ ಸಮಸ್ಯೆಯಾದರೂ, ಅದಕ್ಕೆ ಸೂಕ್ತ ಚಿಕಿತ್ಸೆ ಇದೆ ಎಂದು ಸ್ವತಃ ಅವರೇ ಬರೆದುಕೊಂಡಿದ್ದರು.