ಬೆಳಗಾವಿ; ಡಿ.21:ಮಹಾರಾಷ್ಟ್ರ ವಿಧಾನಸಭೆಯಲ್ಲಿಮುಖ್ಯಮಂತ್ರಿಗೆ ಅಪಮಾನ ವಿಚಾರವನ್ನು ನಾವು ಖಂಡಿಸುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅಧಿವೇಶನದಲ್ಲಿ ಹೇಳಿದರು. ಮಹಾರಾಷ್ಟ್ರ, ಕೇಂದ್ರ ಮತ್ತು ನಮ್ಮ ರಾಜ್ಯದಲ್ಲೂ ಬಿಜೆಪಿ ಸರ್ಕಾರವಿದೆ. ಬಿಜೆಪಿ ಜೊತೆಗೆ ಸೇರಿಕೊಂಡು ಏಕನಾಥ್ ಶಿಂಧೆ ಮಹಾರಾಷ್ಟ್ರದಲ್ಲಿ ಸಿಎಂ ಆಗಿದ್ದಾರೆ. ಅವ್ರು ಬಾಯಿಗೆ ಬಂದಂಗೆ ಮಾತನಾಡಿದ್ರೆ, ನಾವೂ ಕೂಡ ಮಾತನಾಡಬೇಕಾಗುತ್ತದೆ.
ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಶಾಂತಿ ಕಾಪಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಭೆಯಲ್ಲಿ ಹೇಳಿದ್ದಾರೆ. ಮಹಾರಾಷ್ಟ್ರದವರು ಅಮಿತ್ ಶಾ ಮಾತನ್ನ ಗಾಳಿಗೆ ತೂರಿದ್ದಾರೆ. ಅವರ ಮಾತಿಗೆ ಬೆಲೆ ಇಲ್ವಾ? ಎಂದು ಸಿದ್ದರಾಮಯ್ಯ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ ಮತ್ತು ಮಹಾರಾಷ್ಟ್ರದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ಯಪಡಿಸಿದರು. ಗಡಿ ವಿಚಾರ ವಿವಾದವೇ ಅಲ್ಲ. ಮಹಾಜನ್ ವರದಿ ಬಂದು ಎಲ್ಲವೂ ಇತ್ಯರ್ಥವಾಗಿದೆ.

ಮಹಾರಾಷ್ಟ್ರದ ಒತ್ತಾಯದ ಮೇರೆಗೆ ಮಹಾಜನ್ ವರದಿಯಾಗಿರೋದು. ವರದಿ ಕೊಟ್ಟ ಬಳಿಕ ಮಹಾರಾಷ್ಟ್ರ ಸರ್ಕಾರ ಖ್ಯಾತೆ ತೆಗೆದಿದೆ. ಮಹಾರಾಷ್ಟ್ರದವರಗೆ ನ್ಯಾಯಾಲಯ, ಸಮಿತಿ ವರದಿ ಯಾವುದರ ಮೇಲೂ ಗೌರವ ಇಲ್ಲ. ನಾವು ಒಮ್ಮತವಾಗಿ ಖಂಡನೆ ನಿರ್ಣಯ ಪಾಸ್ ಮಾಡ್ತೀವಿ ಎಂದ ಸಿದ್ದು, ನಮ್ಮ ಮುಖ್ಯಮಂತ್ರಿಗಳು, ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತನಾಡಬೇಕು. ಮಹಾರಾಷ್ಟ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಬೇಕು. ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಬೇಕು ಎಂದು ಆಗ್ರಹಿಸಿದರು. ಆದರೆ ಗಡಿ ವಿಚಾರ ಇತ್ಯರ್ಥ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ. ನಮ್ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ವೀಕ್ ಇದ್ದಾರೆ ಎಂದು ಕೇಂದ್ರ ಸರ್ಕಾರ ಮತ್ತು ಸಿಎಂ ವಿರುದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅಸಾಮಾಧಾನ ಹೊರಹಾಕಿದರು.