ನವದೆಹಲಿ; ಡಿ.28: ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ನೀರಸ ಪ್ರದರ್ಶನ ನೀಡಿದ್ದ ಟೀಂ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ಪಟ್ಟಿಯಲ್ಲಿ 14ನೇ ಸ್ಥಾನಕ್ಕೆ ಕುಸಿದಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಎರಡು ಪಂದ್ಯಗಳಲ್ಲಿ ಫಾರ್ಮ್ ವೈಫಲ್ಯಕ್ಕೆ ಸಿಲುಕಿದ ವಿರಾಟ್ ಕೊಹ್ಲಿ, ನಾಲ್ಕು ಇನ್ನಿಂಗ್ಸ್‌ಗಳಲ್ಲಿ ಕೇವಲ 45 ರನ್ ಕಲೆಹಾಕಲಷ್ಟೇ ಶಕ್ತವಾಗಿದ್ದರು. ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಗುರುತಿಸಿಕೊಂಡಿರುವ ಕಿಂಗ್ ಕೊಹ್ಲಿ, ಬಾಂಗ್ಲಾ ಸ್ಪಿನ್ನರ್‌ಗಳ ಎದುರು ರನ್‌ಗಳಿಸಲಾಗದೆ ಪರದಾಡಿದರು. ಅಲ್ಲದೇ 2022ರಲ್ಲಿ ನಿರೀಕ್ಷಿತ ಆಟವಾಡುವಲ್ಲಿ ಸಹ ವಿಫವಾದ ಕೊಹ್ಲಿ, 2022ರಲ್ಲಿ ಆಡಿದ 6 ಟೆಸ್ಟ್‌ನಲ್ಲಿ 25ಕ್ಕೂ ಕಡಿಮೆ ಸರಾಸರಿಯಲ್ಲಿ 265 ರನ್‌ಗಳಿಸಲಷ್ಟೇ ಶಕ್ತರಾದರು.

ಇನ್ನು ಪ್ರಸಕ್ತ ವರ್ಷದಲ್ಲಿ ಭರ್ಜರಿ ಫಾರ್ಮ್‌ನಲ್ಲಿದ್ದ ಶ್ರೇಯಸ್ ಅಯ್ಯರ್, ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿದ್ದಾರೆ. ಬಾಂಗ್ಲಾದೇಶ ವಿರುದ್ಧದ 2 ಟೆಸ್ಟ್‌ಗಳಲ್ಲಿ ಭಾರತದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯಾಗಿದ್ದ ಶ್ರೇಯಸ್, 2 ಪಂದ್ಯಗಳಲ್ಲಿ 202 ರನ್‌ಗಳಿಸಿದ್ದರು. ಹೀಗಾಗಿ 16ನೇ ಸ್ಥಾನದಿಂದ ಶ್ರೇಯಸ್ ಅಯ್ಯರ್ 10ನೇ ಸ್ಥಾನಕ್ಕೇರಿದ್ದಾರೆ. ಇನ್ನು ಭಾರತದ ಪರ ರಿಷಬ್ ಪಂತ್ 6ನೇ ಸ್ಥಾನದಲ್ಲಿ ಹಾಗೂ ರೋಹಿತ್ ಶರ್ಮ 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಆಸ್ಟ್ರೇಲಿಯಾದ ಮಾರ್ನಸ್ ಲಬುಸ್ಚೆಗ್ನೆ ನಂ.1 ಸ್ಥಾನದಲ್ಲಿದ್ದರೆ.
ಐಸಿಸಿ ಟೆಸ್ಟ್ ಬ್ಯಾಟಿಂಗ್ ರ‍್ಯಾಂಕಿಂಗ್
- ಮಾರ್ನಸ್ ಲಬುಸ್ಚೆಗ್ನೆ
- ಬಾಬರ್ ಆಜ಼ಂ
- ಸ್ಟೀವ್ ಸ್ಮಿತ್
- ಟ್ರಾವಿಸ್ ಹೆಡ್
- ಜೋ ರೂಟ್
- ರಿಷಬ್ ಪಂತ್
- ಕೇನ್ ವಿಲಿಯಮ್ಸನ್
- ದಿಮುತ್ ಕರುಣಾರತ್ನೆ
- ರೋಹಿತ್ ಶರ್ಮ
- ಉಸ್ಮಾನ್ ಖವಾಜ