ಬೆಂಗಳೂರು:ಜ.27: ಸಣ್ಣದೊಂದು ಗ್ಯಾಪ್ ತೆಗೆದುಕೊಂಡು ಒಂದೊಳ್ಳೆ ಸಿನಿಮಾ ಕಥೆಯ ನಿರೀಕ್ಷೆಯಲ್ಲಿದ್ದ ನಟ ಕೋಮಲ್ ರೋಲೆಕ್ಸ್ ಕೋಮಲ್ ಆಗಿ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ.. ರೋಲೆಕ್ಸ್ ಅಂದ್ರೆ ಬ್ರ್ಯಾಂಡ್.. ಆ ಬ್ರ್ಯಾಂಡ್ ಹೇಗೆ ಕ್ರಿಯೇಟ್ ಆಯ್ತು.. ಆ ಸಂದರ್ಭದಲ್ಲಿ ಎದುರಾದ ಟ್ವಿಸ್ಟ್ ಹ್ಯಾಂಡ್ ಟರ್ನ್ ಕಥೆಯ ಎಳೆಯನ್ನು ಬಿಡಿಸಲು ಕೋಮಲ್ ಸಜ್ಜಾಗಿದ್ದಾರೆ. ಕೋಮಲ್ ನಟನೆಯ ‘ರೋಲೆಕ್ಸ್ ಕೋಮಲ್’ ಸಿನಿಮಾ ಇಂದು ಮುಹೂರ್ತ ಆಚರಿಸಿಕೊಂಡಿದ್ದು, ನಾಳೆಯಿಂದ ಚಿತ್ರೀಕರಣ ಆರಂಭವಾಗಲಿದೆ.

ಸಿನಿಮಾ ಬಗ್ಗೆ ಮಾಹಿತಿ ನೀಡಿದ ನಿರ್ದೇಶಕ ಶ್ರೀನಿವಾಸ್ ಮಂಡ್ಯ, ನಾಳೆಯಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು ಸುತ್ತಾಮುತ್ತ ಚಿತ್ರೀಕರಣ ನಡೆಯಲಿದೆ. ಕೋಮಲ್ ಸರ್ ಈ ಹಿಂದಿನ ತಮ್ಮ ಸಿನಿಮಾಗಳಿಗಿಂತ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಪಾತ್ರ ವಿಭಿನ್ನವಾಗಿದೆ. ವಿಭಿನ್ನವಾಗಿ ಸಿನಿಮಾವನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇನೆ. ರಂಗಾಯಣ ರಘು, ಶೋಭರಾಜ್, ಅಪೂರ್ವ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ ಎಂದು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಮಾತನಾಡಿದ ನಟ ಕೋಮಲ್, ನಾಳೆಯಿಂದ ಚಿತ್ರೀಕರಣ ಆರಂಭವಾಗುತ್ತೆ. ರೋಲೆಕ್ಸ್ ಅನ್ನೋದು ಒಂದು ಬ್ರ್ಯಾಂಡ್.. ಆ ಬ್ರ್ಯಾಂಡ್ ಹೇಗೆ ಕ್ರಿಯೇಟ್ ಆಗುತ್ತೆ ಅನ್ನೋದೇ ಈ ಚಿತ್ರದ ಎಳೆ. ತುಂಬಾ ಎಂಟಟೈನ್ಮೆಂಟ್ ಆಗಿದೆ ಸಿನಿಮಾ. ಸಾಕಷ್ಟು ಟ್ವಿಸ್ಟ್ ಅಂಡ್ ಟರ್ನ್ ಇದೆ. ಗರಗಸ ನಂತರ ಈ ತರದೊಂದು ಪ್ರಯೋಗ ಮಾಡುತ್ತಿದ್ದೇನೆ. ಪರ್ಫಾಮೆನ್ಸ್ ಗೆ ಸಾಕಷ್ಟು ಅವಕಾಶ ಇದೆ. ಹಾಡುಗಳು ಈಗಾಗಲೇ ರೆಕಾರ್ಡ್ ಆಗಿದೆ. ಆಲ್ಬಂ ಹಿಟ್ ಆಗೋ ಎಲ್ಲಾ ಸೂಚನೆ ಕೂಡ ಇದೆ ಎಂದು ತಿಳಿಸಿದರು.

ಸೋನಾಲ್ ಮೊಂಟೆರೋ ಮಾತನಾಡಿ, ಇಡೀ ಸಿನಿಮಾದಲ್ಲಿ ನಾನು ಕೋಮಲ್ ಸರ್ ಕ್ಯಾರಿ ಆಗ್ತೀವಿ. ನಾಳೆಯಿಂದ ಚಿತ್ರೀಕರಣ ಆರಂಭವಾಗುತ್ತೆ. ನನ್ನ ಭಾಗದ ಚಿತ್ರೀಕರಣ 25ದಿನ ನಡೆಯಲಿದೆ. ಸದ್ಯ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯುತ್ತದೆ. ಶುಗರ್ ಫ್ಯಾಕ್ಟರಿ ಬಿಡುಗಡೆಗೆ ರೆಡಿಯಾಗಿದೆ. ಮಿ. ನಟ್ವರ್ ಲಾಲ್, ಬುದ್ದಿವಂತ 2, ಗರಡಿ, ಮಹಾದೇವ, ತಲ್ವರ್ ಪೇಟೆ, ಸರೋಜಿನಿ ನಾಯ್ಡು ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದರು.
ಇನ್ನು ಸೆಪ್ಟೆಂಬರ್ ನಲ್ಲಿ ಸಿನಿಮಾ ಬಿಡುಗಡೆ ಮಾಡಲು ಪ್ಲ್ಯಾನ್ ಮಾಡಿಕೊಂಡಿದ್ದು, ರಾಕೇಶ್ ಸಿ ತಿಲಕ್ ಕ್ಯಾಮೆರಾ ವರ್ಕ್, ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ, ಅರವಿಂದ್ ರಾಜ್ ಸಂಕಲನ ಚಿತ್ರಕ್ಕಿದೆ.