ತೆಲುಗಿನ ನಟ ವಿಕ್ಟರಿ ವೆಂಕಟೇಶ ರ 75 ನೇ ಸಿನಿಮಾ ಸೈಂದವ್ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿದೆ. ನಿರ್ದೇಶಕ ಶೈಲೇಶ್ ಕೊಲನು, ವಿಕ್ಟರಿ ವೆಂಕಟೇಶ್ ಮೊದಲ ಕಾಂಬಿನೇಶನ್ ನಲ್ಲಿ ಬರ್ತಿರುವ ಪ್ಯಾನ್ ಇಂಡಿಯಾ ಸಿನಿಮಾ ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗುತ್ತಿದೆ. ವಿಕ್ಟರಿ ವೆಂಕಟೇಶ್ ವೃತ್ತಿ ಬದುಕಿನ 75ನೇ ಸಿನಿಮಾವಾಗಿದ್ದು, ‘ಸೈಂದವ್’ ಲುಕ್ ಸಖತ್ ನಿರೀಕ್ಷೆ ಹುಟ್ಟು ಹಾಕಿದೆ.
ಫಸ್ಟ್ ಲುಕ್ ಮೂಲಕ ಕ್ಯೂರಿಯಾಸಿಟಿ ಮೂಡಿಸಿದ್ದ ವಿಕ್ಟರಿ ವೆಂಕಟೇಶ್ 75ನೇ ಸಿನಿಮಾ ಸೈಂದವ್ ಮುಹೂರ್ತ ಇಂದು ನೆರವೇರಿದೆ.

ಹೈದ್ರಾಬಾದ್ ನ ರಾಮನಾಯ್ಡು ಸ್ಟುಡಿಯೋದಲ್ಲಿ ಚಿತ್ರ ಅದ್ದೂರಿಯಾಗಿ ಸೆಟ್ಟೇರಿದೆ. ನಾನಿ, ರಾಣಾ ದಗ್ಗುಭಾಟಿ, ನಾಗ ಚೈತನ್ಯ, ನಿರ್ಮಾಪಕ ಸುರೇಶ್ ಬಾಬು, ದಿಲ್ ರಾಜು, ಕೆ.ರಾಘವೇಂದ್ರ ರಾವ್, ಮೈತ್ರಿ ನವೀನ್, ಸಿರೀಶ್, ವೈರ ಮೋಹನ್ ಚೆರುಕುರಿ, AK ಎಂಟರ್ಟೈನ್ಮೆಂಟ್ಸ್ ಅನಿಲ್ ಸುಂಕರ, ಪೀಪಲ್ಸ್ ಮೀಡಿಯಾ ವಿಶ್ವಪ್ರಸಾದ್ ಸೇರಿದಂತೆ ಹಲವು ನಟ, ನಿರ್ಮಾಪಕರು ಸೈಂದವ್ ಚಿತ್ರದ ಮೂಹೂರ್ತದಲ್ಲಿ ಭಾಗಿಯಾಗಿ ಚಿತ್ರತಂಡಕ್ಕೆ ಶುಭ ಕೋರಿದರು.

ವೆಂಕಟ್ ಬೋಯನಪಲ್ಲಿ ನಿಹಾರಿಕ ಎಂಟರ್ಟೈನ್ಮೆಂಟ್ ಬ್ಯಾನರ್ ನಡಿ ಈ ಚಿತ್ರವನ್ನು ಬಿಗ್ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಶ್ಯಾಮ್ ಸಿಂಗ ರಾಯ್’ ಸಿನಿಮಾ ಸೂಪರ್ ಸಕ್ಸಸ್ ಕಂಡ ಬೆನ್ನಲ್ಲೇ ಮತ್ತೊಂದು ಬಿಗ್ ಬಜೆಟ್ ಸಿನಿಮಾವನ್ನು ವಿಕ್ಟರಿ ವೆಂಕಟೇಶ್ ಗೆ ನಿರ್ಮಾಣ ಮಾಡುತ್ತಿದೆ ನಿಹಾರಿಕ ಎಂಟರ್ಟೈನ್ಮೆಂಟ್. ಸಿನಿಮಾಗೆ ಸಂತೋಷ್ ನಾರಾಯಣನ್ ಸಂಗೀತ ನಿರ್ದೇಶನ, ಎಸ್ ಮಣಿಕಂದನ್ ಕ್ಯಾಮೆರಾ ವರ್ಕ್, ಗ್ಯಾರಿ ಬಿಎಚ್ ಸಂಕಲನ ಮಾಡಿದ್ದಾರೆ.
#VICTORY VENKATESH #NANI #RANA DAGGUBHATI #NAGACHAITHNYA #NIHARIKA ENTERTAINMENT BANNER #DIRECTOR #SAILESH KOLANU #SAINDHAV #75TH FILM