ನವದೆಹಲಿ:ಜ.28; ಪಡ್ಡೆ ಹುಡುಗರ ನಿದ್ದೆ ಗೆಡಿಸೋ ಗ್ಲ್ಯಾಮರಸ್ ಲೇಡಿ ಊರ್ಪಿಗೆ ಈಗ ಶಾರುಖ್ ಜಪವಂತೆ.. ಪಠಾಣ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹಲ್ ಚಲ್ ಸೃಷ್ಟಿಸುವ ಜೊತೆಗೆ ಭಾರೀ ಟ್ರೆಂಡ್ ನಲ್ಲಿ ಓಡ್ತಿದೆ.. ಸಿನಿಮಾದಲ್ಲಿ ಶಾರುಖ್ ನಟನೆಗೆ ಅಭಿಮಾನಿಗಳು ಮೆಚ್ಚಿ ಜೈ ಕಾರ ಹಾಕೋದು ಸಹಜ.. ಆದ್ರೆ ಬಾಲಿವುಡ್ ಕಾಂಟ್ರವರ್ಸಿ ಬೆಡಗಿ ಊರ್ಫಿ ತಮ್ಮದೇ ಸ್ಟೈಲ್ ನಲ್ಲಿ ರಿಯಾಕ್ಷನ್ ನೀಡಿದ್ದಾರೆ..
ಶಾರುಖ್ ಖಾನ್ ಮತ್ತೆ ಪಠಾಣ್ ಮೂಲಕ ತೆರೆ ಮೇಲೆ ಅಬ್ಬರಿಸಿದ್ದಾರೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳಿಂದ ಸದ್ದು ಮಾಡಿದ್ದ ಸಿನಿಮಾ, ತೆರೆ ಮೇಲೆ ಬಂದಿದ್ದು, ಭರ್ಜರಿ ಪ್ರದರ್ಶನ ಕಾಣ್ತಿದೆ. ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತಿದೆ. ಅಷ್ಟೇ ಅಲ್ಲ, ಅಭಿಮಾನಿಗಳ ಮನಸ್ಸನ್ನು ಕದ್ದು ಬೀಗ್ತಿದೆ ಅನ್ನೋದಕ್ಕೆ ನಟಿ ಊರ್ಫಿಯ ರಿಯಾಕ್ಷನ್ ನೇ ಸಾಕ್ಷಿ..

ಉರ್ಫಿ ಜಾವೇದ್ ಈಗ ಮುಂಬೈನಲ್ಲಿ ಇದ್ದಾರೆ. ಪ್ರತಿದಿನ ಕ್ಯಾಮೆರಾ ಕಣ್ಣಿಗೆ ಬೀಳುತ್ತಲೇ ಇರ್ತಾರೆ.. ಹೊಸ ಹೊಸ ಸುದ್ದಿ ಕ್ರಿಯೇಟ್ ಮಾಡೋ ಅವಕಾಶ ಮಾಡಿಕೊಳ್ಳುತ್ತಲೇ ಇರ್ತಾರೆ.. ಯೂಟ್ಯೂಬ್ ಚಾನಲ್ ವೊಂದು ಪಠಾಣ್ ಸಿನಿಮಾ ಭಾರೀ ಕ್ಲಿಕ್ ಮಾಡಿತಲ್ಲಾ ಮೇಡಂ.. ನೀವ್ ಏನ್ ಹೇಳ್ತೀರಿ ಸಿನಿಮಾ ಬಗ್ಗೆ ಎಂದು ಪ್ರಶ್ನೆ ಹಾಕಿದ್ದಾರೆ. ಇದಕ್ಕೆ ಉತ್ತರಿಸಿದ ಊರ್ಫಿ, ಶಾರುಖ್ ನನ್ನನ್ನ ಮದುವೆ ಮಾಡ್ಕೊಳ್ಳಿ ಎಂದು ನೇರವಾಗಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಐ ಲವ್ ಯೂ ಶಾರುಖ್. ನನ್ನನ್ನು ನಿಮ್ಮ ಎರಡನೇ ಹೆಂಡ್ತಿ ಮಾಡ್ಕೊಳ್ಳಿ.. ಪ್ಲೀಸ್ ಎಂದು ಹೇಳಿಕೆ ಕೊಟ್ಟಿದ್ದು, ನಟಿಯ ಬೋಲ್ಡ್ ಸ್ಟೇಟ್ಮೆಂಟ್ ಗೆ ಮಂದಿ ದಂಗಾಗಿದ್ದಾರೆ.

ಬೋಲ್ಟ್ ಗೆಟಪ್, ಸ್ಟೈಲ್ ಮೂಲಕ ಭಾರೀ ಸುದ್ದಿ ಮಾಡಿ ಸದ್ದು ಮಾಡೋ ಉರ್ಫಿ ಜಾವೇದ್ ಗೆ ಒಂದೆಡೆ ಎಫ್ಐಆರ್ ಆದ್ರೆ ಮತ್ತೊಂದೆಡೆ ಟ್ರೋಲ್ ಗಳ ಕಾಟ. ಅದ್ಯಾವ್ದಕ್ಕೂ ಹೆಚ್ಚು ತಲೆ ಕೆಡಿಸಿಕೊಳ್ಳದ ನಟಿ ಊರ್ಫಿ ಹೊಸ ಫೋಟೋ ವಿಡಿಯೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅಷ್ಟೇ ಅಲ್ಲ, ಉರ್ಫಿ ಜಾವೇದ್ ಗೆ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದು ಯಾವುದೇ ಫೋಟೋ ಪೋಸ್ಟ್ ಮಾಡಿದರೂ ಲಕ್ಷಗಟ್ಟಲೆ ಲೈಕ್ಸ್ ಪಡೆಯುತ್ತಾರೆ. ಇದೀಗ ಶಾರುಖ್ ಗೆ ಪ್ರೇಮ ನಿವೇದನೆ ಮಾಡಿರೋ ವೀಡಿಯೋ ಅಷ್ಟೇ ಮಟ್ಟದಲ್ಲಿ ಸದ್ದು ಸುದ್ದಿ ಮಾಡ್ತಿದೆ. ಈ ಮೂಲಕ ಉರ್ಫಿ ಕೂಡಾ ಶಾರುಖ್ ಫ್ಯಾನ್ ಅನ್ನೋದು ಗೊತ್ತಾಗಿದೆ.
#urfi #Urfi Javed #bollywood #actress #Shah Rukh Khan #Pathan #actressUrfi’s