Kangana Troll : ಪಠಾಣ್ ಸಕ್ಸಸ್ ಹಿನ್ನೆಲೆ ಕಂಗನಾ ಗೆ ಟ್ರೋಲ್ ಬಿಸಿ..!

ನವದೆಹಲಿ: ಜ.28: ಟ್ವಿಟರ್ ಗೆ ಎಂಟ್ರಿ ಯಾಗ್ತಿದ್ದಂತೆ ಬಾಲಿವುಡ್ ಬೆಡಗಿ ಕಂಗನಾ ದಿನಕ್ಕೊಂದು ಸ್ಟೇಟ್ಮೆಂಟ್ ಕೊಡೋ ಮೂಲಕ ಸುದ್ದಿ ಯಲ್ಲಿದ್ದಾರೆ. ಪಠಾಣ್ ಗೆಲುವಿನ ಬೆನ್ನಲ್ಲೇ ಕಂಗನಾ ರ ವ್ಯಂಗ್ಯ ಟ್ವೀಟ್ ಗೆ ಶಾರುಖ್ ಖಾನ್ ಅಭಿಮಾನಿಗಳು ಟ್ರೋಲ್ ಬಿಸಿ ಮುಟ್ಟಿಸಿದ್ದಾರೆ. ನಿಮ್ಮ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಕೇವಲ 55 ಲಕ್ಷ ಗಳಿಕೆ ಮಾಡಿತ್ತು. ನಿಮ್ಮ ಸಿನಿಮಾದ ಒಟ್ಟು ಸಂಗ್ರವಾಗಿದ್ದೇ 2.58 ಕೋಟಿ. ಆದರೆ, ಪಠಾಣ್ ಸಿನಿಮಾದ ಕಲೆಕ್ಷನ್ ಈಗಾಗಲೇ 100 ಕೋಟಿ ಮೀರಿದೆ. ಇದು ನಿಮ್ಮ ಜೀವಮಾನದ ಗಳಿಕೆಗಿಂತ ಹೆಚ್ಚು. ಕಂಗನಾ ಅವರಿಗೆ ಬಹಳ ಬೇಸರ ಆಗಿದೆ ಅನ್ಸುತ್ತೆ ಅಂತ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.

ಇದಕ್ಕೆಲ್ಲಾ ಉತ್ತರ ಕೊಟ್ಟಿರುವ ಕಂಗನಾ ರಣಾವತ್, ನಾನು ನಟಿಸಿದ್ದ ಸಿನಿಮಾ ಸೋತಿದೆ ಎಂಬ ವಾಸ್ತವ ನನಗೂ ತಿಳಿದಿದೆ. ಆದರೆ, ಶಾರುಖ್ ಖಾನ್ ಅವರು 10 ವರ್ಷಗಳ ನಂತರ ಸಿನಿಮಾ ಮಾಡಿದ್ದಾರೆ. ಅವರಿಗೆ ಅವಕಾಶ ನೀಡಿದಂತೆ ನಮಗೂ ನಮ್ಮ ದೇಶದ ಜನರು ಅವಕಾಶ ಕೊಡುತ್ತಾರೆ ಎಂಬ ನಂಬಿಕೆಯಿದೆ. ಏನಾದರೂ ಆಗಲಿ ನಾನು ಭಾರತದ ಪರ. ಭಾರತ ಮಹಾನ್, ಜೈ ಶ್ರೀರಾಮ್ ಎಂದಿದ್ದಾರೆ.

ಇನ್ನೊಬ್ಬ ಟ್ವಿಟರ್ ನಲ್ಲಿ ನಿಮ್ಮ ಜೀವಮಾನದಲ್ಲಿ ಸಂಪಾದಿಸಿದ್ದಕ್ಕಿಂತ ಹೆಚ್ಚು ಪಠಾಣ್ ಸಿನಿಮಾ ದಾಖಲೆ ಮೀರಿ ಬಾಕ್ಸಾಪೀಸ್ ನಲ್ಲಿ ಸದ್ದು ಮಾಡಿದೆ ಎಂದಿದ್ದರು. ಅದಕ್ಕೆ ಕಂಗನಾ ಪ್ರತಿಕ್ರಿಯೆ ನೀಡಿದ್ದು, ನಾನು ಸಂಪಾದನೆ ಮಾಡಿರುವ ಹಣವನ್ನೆಲ್ಲಾ ನನ್ನ ಸಿನಿಮಾಗೆ ಹಾಕಿರುವೆ‌. ಅದು ದೇಶಪ್ರೇಮವನ್ನು ಸಾರುವಂತಹ ಸಿನಿಮಾ ಆಗಿದ್ದು, ಭಾರತದ ಸಂವಿಧಾನದ ಕುರಿತದ್ದಾಗಿದೆ. ದೇಶದ ಮೇಲಿನ ಪ್ರೀತಿಯನ್ನು ನಾನು ಈ ಸಿನಿಮಾ ಮೂಲಕ ವ್ಯಕ್ತಪಡಿಸಲಿದ್ದೇನೆ. ಅದಕ್ಕಾಗಿ ನನ್ನ ಹತ್ತಿರವಿರುವ ಹಣ, ಆಭರಣ ಎಲ್ಲವನ್ನೂ ಸಹ ವ್ಯಯಿಸಿರುವೆ ಎಂದಿದ್ದು, ಹಣ ಎಲ್ಲರೂ ಸಂಪಾದನೆ ಮಾಡುವರು. ಆದರೆ, ಖರ್ಚು ಮಾಡುವ ತಾಕತ್ತು ಯಾರಿಗಾದರೂ ಇದೀಯಾ ಎಂದು ಪ್ರಶ್ನೆ ಹಾಕಿದ್ದಾರೆ.

#KanganaRanaut #sharukh khan #pathan #sharukh khan controversy #Kangana Troll #Bollywood

More News

You cannot copy content of this page