Nandamuri Taraka Ratna : ನಂದಮೂರಿ ತಾರಕರತ್ನಗೆ ಹೃದಯಾಘಾತ : ನಾರಾಯಣ ಹೃದಯಾಲಯ ವೈದ್ಯರಿಂದ ಹೆಲ್ತ್ ಬುಲೆಟಿನ್

ಬೆಂಗಳೂರು :ಜ.28: ತೆಲುಗು ಖ್ಯಾತ ನಟ ಜ್ಯೂ.ಎನ್ ಟಿಆರ್ ಸಹೋದರ ನಂದಮೂರಿ ತಾರಕ ರತ್ನ ಅವರಿಗೆ ಹೃದಯಾಘಾತವಾದ ಹಿನ್ನೆಲೆಯಲ್ಲಿ ಅವರನ್ನ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ರವಾನಿಸಲಾಗಿದೆ. ಬೆಂಗಳೂರಿನ ಆಸ್ಪತ್ರೆಯಲ್ಲಿ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉದಯ್ ಕನಲ್ಕರ್ ಹಾಗೂ ರಘು ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ.

ಹೃದಯಾಘಾತಕ್ಕೊಳಗಾದ ನಂದಮೂರಿ ತಾರಕರತ್ನ ಅವರಿಗೆ ಬ್ಲಿಡಿಂಗ್ ಕಂಟ್ರೋಲ್ ಮಾಡಲು ವೈದ್ಯರ ತಂಡ  ಶ್ರಮಿಸುತ್ತಿದೆ. ನಂದಮೂರಿ ತಾರಕರತ್ನ ಅವರು ಆಂಧ್ರ ಪ್ರದೇಶದ ಚಿತ್ತೂರಿನಲ್ಲಿ ನಡೆಯುತ್ತಿದ್ದ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಕುಸಿದ ಬಿದ್ದಿದ್ದರು. ಕೂಡಲೇ ಅವರನ್ನ ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತದ ಅವರನ್ನ ಬೆಂಗಳೂರಿನ ನಾರಾಯಣ ಹೃದಯಾಲಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕರೆತರಲಾತ್ತು.

ಈ ಸಂದರ್ಭದಲ್ಲಿ ಖ್ಯಾತ ತೆಲುಗು ನಟ ಬಾಲಕೃಷ್ಣ ಆಗಮಿಸಿದ್ದು, ಬೆಂಗಳೂರಿನಲ್ಲಿಯೇ ಉಳಿದುಕೊಂಡು, ಅವರ ಯೋಗ ಕ್ಷೇಮ ನೋಡುತ್ತಿದ್ದಾರೆ. ನಂದಮೂರಿ ತಾರಕರತ್ನ ಅವರ ಆರೋಗ್ಯ ವಿಚಾರಿಸಲು ಇಂದು ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆಗಮಿಸುವ ಸಾಧ್ಯತೆ ಇದೆ. ಇನ್ನು ಹೃದಯಾಘಾತದ ವಿಷಯ ತಿಳಿದು ತಾರಕರತ್ನ ಅವರ ಆರೋಗ್ಯ ವಿಚಾರಿಸಲು ತೆಲುಗು ನಟರು ಹಾಗೂ ರಾಜಕಾರಣಿಗಳು ಬರುವ ಸಾಧ್ಯತೆ ಇದೆ.

ನಾರಾಯಣ ಹೃದಯಾಲಯ ವೈದ್ಯರಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

ನಾರಾಯಣ ಹೃದಯಾಲಯದ ಆಸ್ಪತ್ರೆಯ ವೈದ್ಯರು ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ತಾರಕ ರತ್ನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತೀವ್ರ ಹೃದಯಾಘಾತವಾದ ಹಿನ್ನೆಲೆಯಲ್ಲಿ ಹೃದಯದ ರಕ್ತ ನಾಳಗಳು ಬ್ಲಾಕ್ ಆಗಿವೆ. ಬ್ಲಾಕ್ ಆಗಿರುವ ರಕ್ತನಾಳಗಳನ್ನ ಸರಿಪಡಿಸಲು ವೈದ್ಯರ ಶ್ರಮಿಸುತ್ತಿದ್ದಾರೆ.

ಇಂಟ್ರಾ-ಅಯೋರ್ಟಿಕ್ ಪಂಪ್ (ABP) ಮತ್ತು ವ್ಯಾಸೋಆಕ್ಟಿವ್  ನೆರವಿನಿಂದ ಹೃದಯ ಚಿಕಿತ್ಸೆ ನೀಡಲಾಗುತ್ತಿದೆ. ಆಂಜಿಯೋಪ್ಲ್ಯಾಸ್ಟಿ ಮೂಲಕ ಹಾನಿಗಳಗಾದ ರಕ್ತನಾಳಗಳಿಗೆ ಸ್ಟಂಟ್ ಅಳವಡಿಕೆ ಮಾಡಲಾಗಿದೆ. ಆದರೂ ರಕ್ತಸ್ರಾವ ನಿಂತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಎಕ್ಮೊ ನೆರವಿನಿಂದ ತೀವ್ರ ನಿಗಾ ಘಟಕದಲ್ಲಿ ಹೃದ್ರೋಗ ತಜ್ಞರು, ನುರಿತ ವೈದ್ಯರ ತಂಡದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ 24 ಗಂಟೆಗಳ ಚಿಕಿತ್ಸೆ ನಿರ್ಣಾಯಕವಾಗಿದೆ ಎಂದು ನಾರಾಯಣ ಹೆಲ್ತ್ ಸಿಟಿ ವೈದ್ಯಕೀಯ ತಂಡದಿಂದ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಿದ್ದಾರೆ.

#nandamuri taraka ratna haeart attack #haeart attack #tollywood #ju.ntr

More News

You cannot copy content of this page