Actor Prabhas Wedding : ನಟ ಪ್ರಭಾಸ್ ಮದುವೆ ಫಿಕ್ಸ್? : ಕೃತಿ ಜೊತೆಗೆ ಮಾಲ್ಡೀವ್ಸ್ ನಲ್ಲಿ ನಿಶ್ಚಿತಾರ್ಥ?

ಹೈದ್ರಾಬಾದ್;ಫೆ.9: ಮೋಸ್ಟ್ ವಾಂಟೆಡ್ ಎಲಿಜಿಬಲ್ ಬ್ಯಾಚುಲರ್.. ಹೆಣ್ ಹೈಕಳ ಡಾರ್ಲಿಂಗ್ ಅಲಿಯಾಸ್ ಪ್ರಭಾಸ್ ಮದುವೆ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಸೃಷ್ಟಿಸಿದೆ.
ಮುಂದಿನ ವಾರ ಪ್ರಭಾಸ್ ಮಾಲ್ಡೀವ್ಸ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿ ಸಿನಿ ಅಂಗಳದಲ್ಲಿ ಬಿಸಿ ಬಿಸಿ ಚರ್ಚೆ ಆಗ್ತಿದೆ..

ಸಲಾರ್ ಶೂಟಿಂಗ್ ಬ್ರೇಕ್ ಪಡೆದಿರುವ ಪ್ರಭಾಸ್..!

ಪ್ರಶಾಂತ್ ನೀಲ್ ನಿರ್ದೇಶನದ ಹೈ ಬಜೆಕ್ಟ್, ಬಹು ನಿರೀಕ್ಷಿತ ಚಿತ್ರ ಸಲಾರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದ ನಟ ಪ್ರಭಾಸ್ ಏಕಾಏಕಿ ಬ್ರೇಕ್ ತೆಗೆದುಕೊಂಡಿದ್ದಾರೆ. ಮುಂದಿನ 15 ದಿನಗಳ ಕಾಲ ಶೂಟಿಂಗ್ ಗೆ ಬರೋದಕ್ಕೆ ಆಗಲ್ಲ ಎಂದು ಹೇಳಿದ್ದು, ಬ್ರೇಕ್ ಪಡೆದಿದ್ದಾರೆ. ಮೂಲಗಳ ಪ್ರಕಾರ ಪ್ರಭಾಸ್ ಜ್ವರದಿಂದ ಬಳಲುತ್ತಿರುವ ಕಾರಣ ಸಿನಿಮಾ ಶೂಟಿಂಗ್ ಗೆ ಬರೋಕೆ ಆಗೋದಿಲ್ಲ ಎಂದು ನಟ ಹೇಳಿದ್ದಾರಂತೆ. ಆದರೆ ಎಂಗೇಜ್ಮೆಂಟ್ ಆಗಲಿಕ್ಕೆಂದೇ ಪ್ರಭಾಸ್ ರಜೆ ತೆಗೆದುಕೊಂಡ್ರಾ ಎಂಬ ಸುದ್ದಿ ಸಿನಿ ಅಂಗಳದಲ್ಲಿ ಭಾರೀ ಚರ್ಚೆಗೆ ಗ್ರಾಮವಾಗಿದೆ.

ಆದಿಪುರುಷ್ ಚಿತ್ರದಲ್ಲಿ ರಾಮ ಸೀತಾ ಆಗಿ ನಟಿಸಿದ್ದ ಪ್ರಭಾಸ್ ಕೃತಿ ಸನೋನ್ ನಡುವೆ ಪ್ರೇಮ ಚಿಗುರೊಡೆದಿದೆ ಎನ್ನಲಾಗಿದೆ.. ಈ ಹಿಂದೆಯೂ ಇವರಿಬ್ಬರ ನಡುವೆ ಪ್ರೇಮ ಶುರುವಾಗಿದೆ ಎಂಬ ವಿಚಾರ ಸದ್ದು ಮಾಡಿತ್ತು.. ಆಗ ನಾವಿಬ್ಬರೂ ಒಳ್ಳೆ ಫ್ರೆಂಡ್ಸ್.. ಪ್ರೇಮದಲ್ಲಿ ಇಲ್ಲ.. ಮದುವೆ ಆಗೋ ಯೋಚನೆ ಇಲ್ಲ ಎಂದಿದ್ದರು ನಟಿ ಕೃತಿ ಸನೋನ್.. ಅದರ ನಡುವೇ ಮತ್ತೊಮ್ಮೆ ಪ್ರಭಾಸ್ ಮದುವೆ ವಿಚಾರ ಭಾರೀ ಸದ್ದು ಸುದ್ದಿ ಮಾಡ್ತಿದೆ.. ಮಾಲ್ಡೀವ್ಸ್ ನಲ್ಲಿ ಎಂಗೇಜ್ ಆಗೋ ಸಿದ್ದತೆಯಲ್ಲಿದ್ದಾರೆ ಅನ್ನೋ ಸುದ್ದಿ ಸಿನಿ ಅಂಗಳದಲ್ಲಿ ಹಬ್ಬಿದೆ.

ಇಬ್ಬರ ಮದುವೆ ನಿಜವಾ..? ಅಥವಾ ಪ್ರಚಾರದ ಗಿಮಿಕ್ ಹಾ ಎಂಬ ಚರ್ಚೆ ನಡೆಯುತ್ತಿದೆ. ಏನೇ ಆದ್ರು ಬೆಂಕಿ ಇಲ್ಲದೆ ಹೊಗೆ ಆಡ್ಲಿಕ್ಕೆ ಸಾಧ್ಯವಾ ಅನ್ನೋ ಆ್ಯಂಗಲ್ ನಲ್ಲಿ ಬಿಸಿ ಬಿಸಿ ಚರ್ಚೆಯೂ ಸಿನಿ ಪ್ರೀಯರಲ್ಲಿ ನಡೀತಿದೆ.

More News

You cannot copy content of this page