ಬೆಂಗಳೂರು:ಫೆ.9: ‘ಕಾರ್ತಿಕೇಯ-2’ ಸೂಪರ್ ಹಿಟ್ ಬಳಿಕ ನಟ ನಿಖಿಲ್ ಪ್ಯಾನ್ ಇಂಡಿಯಾ ಸಿನಿಮಾ ‘ಸ್ಪೈ’ ನಲ್ಲಿ ಬ್ಯುಸಿ ಇದ್ದು, ಏಪ್ರಿಲ್ 14ರಂದು ಸಿನಿಮಾ ವರ್ಲ್ಡ್ ವೈಡ್ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ.
‘ಸ್ಪೈ’ ಸಿನಿಮಾ ‘ಕಾರ್ತಿಕೇಯ 2’ ನಂತೆ ಯೂನಿವರ್ಸಲ್ ಹಾಗೂ ಯುನೀಕ್ ಸಬ್ಜೆಕ್ಟ್ ಒಳಗೊಂಡಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಿ ತೆರೆ ಮೇಲೆ ಬರುತ್ತಿದೆ. ಖ್ಯಾತ ಸಂಕಲನಕಾರ ಗ್ಯಾರಿ ಬಿ.ಹೆಚ್ ನಿರ್ದೇಶನದಲ್ಲಿ ಮೂಡಿ ಬಂದ ಚೊಚ್ಚಲ ಚಿತ್ರ ಇದಾಗಿದ್ದು, ಕೆ.ರಾಜಶೇಖರ್ ರೆಡ್ಡಿ ED ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ‘ಸ್ಪೈ’ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಆಕ್ಷನ್ ಎಂಟರ್ಟೈನರ್ ಸಬ್ಜೆಕ್ಟ್ ಒಳಗೊಂಡ ಈ ಚಿತ್ರ ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ಏಪ್ರಿಲ್ 14ರಂದು ತೆರೆ ಕಾಣುತ್ತಿದೆ. ಇನ್ನು ಟೀಸರ್ ಮೂಲಕ ನಿರೀಕ್ಷೆ ಹುಟ್ಟಿಸಿರುವ ಈ ಚಿತ್ರದಲ್ಲಿ ನಿಖಿಲ್ ಸಖತ್ ಸ್ಟೈಲಿಶ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ನಿಖಿಲ್ ಜೋಡಿಯಾಗಿ ಐಶ್ವರ್ಯ ಮೆನನ್ ಸ್ಕ್ರೀನ್ ಶೇರ್ ಮಾಡಿದ್ದಾರೆ. ಆರ್ಯನ್ ರಾಜೇಶ್, ಅಭಿನವ್ ಗೋಮಾತಂ, ಮಾರ್ಕಂಡ್ ದೇಶಪಾಂಡೆ, ಸಾನ್ಯ ಠಾಕುರ್, ಜಿಶ್ಯು ಸೇನ್ ಗುಪ್ತ, ನಿತಿನ್ ಮೆಹ್ತ, ರವಿವರ್ಮ, ಕೃಷ್ಣ ತೇಜ, ಪ್ರಿಶಾ ಸಿಂಗ್, ಸೋನಿಯ ನರೇಶ್ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.


ಬಿಗ್ ಬಜೆಟ್ ನಲ್ಲಿ ನಿರ್ಮಾಣವಾಗಿರುವ ‘ಸ್ಪೈ’ ಚಿತ್ರ ತಾಂತ್ರಿಕವಾಗಿಯೂ ಗುಣಮಟ್ಟದಿಂದ ಮೂಡಿಬಂದಿದೆ. ಹಾಲಿವುಡ್ ಛಾಯಾಗ್ರಾಹಕ ಮಾರ್ಕ್ ಡೇವಿಡ್ ಜೊತೆಗೆ ವಂಶಿ ಪಾಚಿಪುಲುಸು ಜೊತೆಯಾಗಿ ಈ ಚಿತ್ರವನ್ನು ಸೆರೆ ಹಿಡಿದಿದ್ದಾರೆ. ಹಾಲಿವುಡ್ ಸಾಹಸ ನಿರ್ದೇಶಕ ಬಾಬಿ ಲೇನೆನ್ ನಿರ್ದೇಶನದಲ್ಲಿ ಚಿತ್ರದ ಸಾಹಸ ದೃಶ್ಯಗಳು ಮೂಡಿ ಬಂದಿವೆ. ಆಕ್ಷನ್ ಪ್ಯಾಕ್ಡ್ ಸ್ಪೈ ಥ್ರಿಲ್ಲರ್ ಚಿತ್ರಕ್ಕೆ ನಿರ್ಮಾಪಕ ರಾಜಶೇಖರ್ ರೆಡ್ಡಿ ಕಥೆ ನೀಡಿದ್ದು, ಶ್ರೀಚರಣ್ ಸಂಗೀತ ನಿರ್ದೇಶನ, ಗ್ಯಾರಿ ಬಿ,ಹೆಚ್ ಸಂಕಲನ, ಅರ್ಜುನ್ ಸೂರಿಸೆಟ್ಟಿ ಕಲಾ ನಿರ್ದೇಶನ ಸಿನಿಮಾಗಿದೆ.