Cabinet Meeting : ಸಚಿವ ಸಂಪುಟ ಸಭೆ : ಪ್ರಮುಖ ತೀರ್ಮಾನಗಳು..!

ಬೆಂಗಳೂರು; ಫೆ.9: ಸಚಿವ ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಮಾಧ್ಯಮಗಳ ಜೊತೆ ಮಾತನಾಡಿ, ಸಭೆಯಲ್ಲಿ ಕೈಗೊಂಡ ಪ್ರಮುಖ ವಿಚಾರಗಳ ಬಗ್ಗೆ ತಿಳಿಸಿದರು.

ಬಳ್ಳಾರಿ ಜಿಲ್ಲೆಯ ಹಗರಿಯಲ್ಲಿ ನೂತನ  ಕೃಷಿ ಸಂಶೋಧನಾ ಕಾಲೇಜು ಸ್ಥಾಪನೆ ಅನುಮೋದನೆ ನೀಡಲಾಗಿದೆ. ರಾಜ್ಯಕ್ಕೆ ಅನ್ವಯಿಸುವಂತೆ ಹೆಚ್ಚು ರೆಜ್ಯುಲೆಷನ್ ಉಪಗ್ರಹ ದತ್ತಾಂಶ ಖರೀದಿಗೆ 18 ಕೋಟಿ ಅನುಮೋದನೆ ಕೊಡುತ್ತಿದ್ದೇವೆ. ಕರ್ನಾಟಕ ನವೀಕರಣ ಮಾಡಬಹುದಾದ ಇಂಧನ ನೀತಿ 2022 ರಿಂದ 27ಕ್ಕೆ ತಿದ್ದುಪಡಿ ಮಾಡಿದ್ದೇವೆ. ದಾವಣಗೆರೆ ಹೊನ್ನಾಳಿಯಲ್ಲಿ 100 ರಿಂದ200 ಬೆಡ್ ಆಸ್ಪತ್ರೆಗೆ 23 ಕೋಟಿ ರೂಪಾಯಿ ಅನುಮೋದ ಸಿಕ್ಕಿದೆ. ಬೆಂಗಳೂರಿನ ಗೋವಿಂದರಾಜ ನಗರ ಕ್ಷೇತ್ರದ ಹೈಟೇಕ್ ಆಸ್ಪತ್ರೆಗೆ 24 ಕೋಟಿ ಬಿಡುಗಡೆ ಮಾಡಿದ್ದೇವೆ. ಚಿಕ್ಕಬಳ್ಳಾಪುರ  ಹಾಗೂ ನೆಲಮಂಗಲ ರೋಡ್ ನವೀಕರಣಕ್ಕೆ 8 ಕೋಟಿ ಇದ್ದ 10 ಕೋಟಿ 13 ಲಕ್ಷ ಬಿಡುಗಡೆ. ಸೊರಬದಲ್ಲಿ ವಿಸ್ತಾರಸೌಧಕ್ಕೆ ತಾಲ್ಲೂಕು ಆಫೀಸ್ ಗೆ 49.60 ಕೋಟಿ ಮಂಜೂರು.

ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಗ್ರಾಮದಲ್ಲಿ ಬುಡಕಟ್ಟು ಜನಾಂಗದ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಬನವಾಸಿ ಕಲ್ಯಾಣ ಸಂಸ್ಥೆಗೆ 1 ಎಕರೆ ಜಾಗ ಮಂಜೂರು. ಚಾಮರಾಜನಗರ 166 ಗ್ರಾಮದಲ್ಲಿ ಜಲಜೀವನ್ ಮಿಷನ್ ಗೆ 11 ಕೋಟಿ ಕೇಂದ್ರದ್ದು, ರಾಜ್ಯದ್ದು  14.5 ಕೋಟಿ.  30 ಐಟಿಐ. ಮೇಲ್ದರ್ಜೆಗೆ ಎರಿಸಲು ಟಾಟಾ ಟೆಕ್ನಾಲಜಿ ಸಹಯೋಗ (ಒಟ್ಟು 927 ಕೋಟಿ) ಅದರಲ್ಲಿ ರಾಜ್ಯ ಸರ್ಕಾರದ ಪಾಲು 131 ಕೋಟಿ , ಇದರಲ್ಲಿ 814 ಕೋಟಿ ಟಾಟಾ ಅವರು ಕೊಡ್ತಾರೆ. ಶಿಗ್ಗಾಂವ್ ನ ಕಲ್ಯಾಣ ಗ್ರಾಮದಲ್ಲಿ ಸರ್ಕಾರಿ ಉಪಕರಣಗಾರ ಹಾಗೂ ತರಬೇತಿ ಕೇಂದ್ರಕ್ಕೆ 73.75 ಕೋಟಿ ಅನುಮೋದನೆ.

ಹಾವೇರಿಯ ನೆಲಗೊಳ ಗ್ರಾಮದಲ್ಲಿ ಉನ್ನತಿಕರಣಕ್ಕೆ ಬಹು ಕೌಶಲ್ಯ ತರಬೇತಿ ಕೇಂದ್ರ ಬಾಲಕರ ವಿದ್ಯಾರ್ಥಿ ನಿಲಯಕ್ಕೆ 35.55 ಕೋಟಿ ಅನುಮೋದನೆ. ಮಡಿಕೇರಿಯಲ್ಲಿ ನೂತನ ಜಿಲ್ಲಾ ಪೊಲೀಸ್ ಕಟ್ಟಡ ನಿರ್ಮಾಣಕ್ಕೆ 12 ಕೋಟಿ ಅನುದಾನ. ಬೆಳಗಾವಿಯ ಚಿಕ್ಕೋಡಿಯಲ್ಲಿ ಬಹುಗ್ರಾಮ ಕುಡಿಯುವ ಯೋಜನೆಗೆ 32 ಕೋಟಿ ಅನುಮೋದನೆ ಮಂಜೂರು.ಇದರಲ್ಲಿ ಕೇಂದ್ರ 16 ಕೋಟಿ  ರಾಜ್ಯ 16 ಕೋಟಿ  ನೀಡಲಾಗುತ್ತೆ.

ಕಲಬುರಗಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ  ಕೇಂದ್ರ ಕಚೇರಿ ಬಹು ಅಂತಸ್ತಿನ ಕಟ್ಟಡಕ್ಕೆ ವಾಣಿಜ್ಯ ಸಂಕೀರ್ಣ ಪಿಪಿ ಮಾಡೆಲ್ ಕಟ್ಟಲು 26.58‌ ಕೋಟಿ ಅನುದಾನಕ್ಕೆ ಅನುಮೋದನೆ. ಕರ್ನಾಟಕ ಲೋಕಸೇವಾ ಆಯೋಗ ಅಲ್ಲಿ‌ಖಾಲಿ ಇರುವ ಸದಸ್ಯ ಹುದ್ದೆ ತುಂಬಲು ಸಿಎಂಗೆ ಕ್ಯಾಬಿನೆಟ್ ನಿಂದ ಅಧಿಕಾರ ವಹಿಸಿಲಾಗಿದೆ.

ಚಾಮರಾಜನಗರ ರಾಮಸಮುದ್ರ ನಗರಾಭಿವೃದ್ಧಿ ಯೋಜನೆ ಅಡಿ 16 ಎಕರೆ 24 ಗುಂಟೆ ಜಮೀನಿನಲ್ಲಿ 50:50 ವಸತಿ ಬಡಾವಣೆ , ಈ ಬಡವಾವಣೆ ಯೋಜನೆ ಅನುಷ್ಠಾನಕ್ಕೆ 12.5 ಕೋಟಿ ರೂಪಾಯಿ ಆಗಬಹುದು ಎಂದು ಅಂದಾಜು ಪಟ್ಟಿಗೆ ಅನುಮೋದನೆ ನೀಡಿದ್ದೇವೆ ಎಂದು ಸಚಿವ ಮಾಧುಸ್ವಾಮಿ ಹೇಳಿದರು.

More News

You cannot copy content of this page