ಬೆಂಗಳೂರು:ಫೆ.9: ನನ್ನ ಪತಿ ಆದಿಲ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ.. ಹಲ್ಲೇ ನಡೆಸಿದ್ದಾನೆ. ಯಾವುದೇ ಕಾರಣಕ್ಕೂ ಆದಿಲ್ ಗೆ ಜಾಮೀನು ಸಿಗಬಾರದು ಎಂದು ನಟಿ ರಾಖಿ ಸಾವಂತ್ ದೂರಿದ್ದಾರೆ.
ಹಲವು ತಿಂಗಳ ಕಾಲ ಡೇಟಿಂಗ್ ನಡೆಸಿ, ಕಳೆದ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ನಟಿ ರಾಖಿ ಪತಿಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಗಂಡನ ವಿರುದ್ಧ ಅಕ್ರಮ ಸಂಬಂಧ, ವರದಕ್ಷಿಣೆ ಆರೋಪ ಸೇರಿದಂತೆ ಅನೇಕ ಆರೋಪಗಳನ್ನು ಮಾಡಿದ್ದು, ಇದೀಗ ಆದಿಲ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಟ್ಟಿದ್ದಾರೆ.

ಕೋರ್ಟ್ ಗೆ ಬಂದು ಈ ಬಗ್ಗೆ ಮಾತನಾಡಿದ ನಟಿ ರಾಖಿ, ನನ್ನ ಪತಿ ಆದಿಲ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ.. ಕ್ರೂರವಾಗಿ ನಡೆದುಕೊಂಡಿದ್ದಾನೆ. ತನ್ನ ಹುಡುಗಿಯ ಜೊತೆಗೆ ಸೇರಿಕೊಂಡು ಹಲ್ಲೇ ನಡೆಸಿದ್ದಾನೆ. ನನ್ನ ಮೊಬೈಲ್ ಕಳುವು ಮಾಡಿ ನನ್ನ ಮೊಬೈಲ್ ಓಟಿಪಿ ಪಡೆದು ನನಗೆ ಮೋಸ ಮಾಡಿದ್ದಾನೆ. ಯಾವುದೇ ಕಾರಣಕ್ಕೂ ಆತನಿಗೆ ಬೇಲ್ ನೀಡಬಾರದು ಎಂದು ನಟಿ ರಾಖಿ ಒತ್ತಾಯಿಸಿದ್ದಾರೆ.

ನಾನು ಮೆಡಿಕಲ್ ಟೆಸ್ಟ್ ನೀಡಿದ್ದೇನೆ.. ಸಂಪೂರ್ಣ ಸಾಕ್ಷಿ ಸಮೇತ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಯಾವುದೇ ಕಾರಣಕ್ಕೂ ಆತನಿಗೆ ಜಾಮೀನು ನೀಡಬಾರದೆಂದು ಕೋರ್ಟ್ ಗೆ ಬಂದಿದ್ದೇನೆ ಎಂದು ತಿಳಿಸಿದರು.

ಆದಿಲ್ ಜೊತೆಗಿನ ರಾಖಿ ಸಾವಂತ್ ವೈವಾಹಿಕ ಜೀವನ ಮುರಿದುಬಿದ್ದ ಕಾರಣ ರಾಕಿ ಬೆಂಬಲಕ್ಕೆ ಮಾಜಿ ಗಂಡ ರಿತೇಷ್ ಬಂದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ ಅವರು, ಏನೇ ಆಗಲಿ ರಾಖಿ ಪರವಾಗಿ ನಿಲ್ಲುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ.