ಬೆಂಗಳೂರು: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯ ಮುಕ್ತಾಯಕ್ಕೆ ವೇದಿಕೆ ಸಜ್ಜಾಗಿದ್ದು, ಅಂತಿಮ ಪಂದ್ಯಕ್ಕಾಗಿ ಎರಡು ತಂಡಗಳು ಸಂಪೂರ್ಣ ತಯಾರಿ ಮಾಡಿಕೊಂಡಿವೆ.
ಅಹ್ಮದಾಬಾದ್ ಅಂಗಳದಲ್ಲಿ ನಡೆಯುವ ಫೈನಲ್ ಟೆಸ್ಟ್‌ನಲ್ಲಿ ಗೆದ್ದು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪ್ರವೇಶಸುವ ಲೆಕ್ಕಾಚಾರದಲ್ಲಿ ಟೀಮ್ ಇಂಡಿಯಾ ಅಖಾಡಕ್ಕಿಳಿಯುತ್ತಿದ್ದರೆ. ಸರಣಿಯಲ್ಲಿ 2-2ರಿಂದ ಸರಣಿಯಲ್ಲಿ ಸಮಬಲ ಸಾಧಿಸಿದ ಸಮಾಧಾನದ ಮೂಲಕ ಸರಣಿ ಮುಗಿಸುವ ನಿರೀಕ್ಷೆಯೊಂದಿಗೆ ಪ್ರವಾಸಿ ಆಸ್ಟ್ರೇಲಿಯಾ ತಂಡ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುತ್ತಿದೆ.
ಈ ನಡುವೆ ಸರಣಿಯ ಅಂತಿಮ ಪಂದ್ಯ ಉಭಯ ತಂಡಗಳ ಹಲವು ಆಟಗಾರರಿಗೆ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ವೇದಿಕೆಯಾಗಿದ್ದು, ಸರಣಿಯ ಮೂರು ಟೆಸ್ಟ್‌ಗಳಲ್ಲಿ ನಿರೀಕ್ಷಿತ ಪ್ರದರ್ಶನ ತೋರದ ಈ ಪ್ಲೇಯರ್ಸ್ ಯಾವ ರೀತಿ ತಮ್ಮ ತಂಡಕ್ಕೆ ಆಸರೆ ಆಗುತ್ತಾರೆ ಎಂಬುದು ಕ್ರಿಕೆಟ್ ಅಭಿಮಾನಿಗಳ ನಿರೀಕ್ಷೆಯಾಗಿದೆ. ಪ್ರಮುಖವಾಗಿ ಭಾರತ ‘ರನ್ ಮಷಿನ್’ ವಿರಾಟ್ ಕೊಹ್ಲಿ, ಆಸೀಸ್ ನಾಯಕ ಸ್ಟೀವ್ ಸ್ಮಿತ್, ಶುಭ್ಮನ್ ಗಿಲ್, ಮಿಚೆಲ್ ಸ್ಟಾರ್ಕ್ ಹಾಗೂ ಶ್ರೀಕರ್ ಭರತ್ ಅವರುಗಳು ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಾದ ಒತ್ತಡದಲ್ಲಿದ್ದಾರೆ.
ಸರಣಿಯ ಮೂರು ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿರುವ ವಿರಾಟ್ ಕೊಹ್ಲಿ ಈ ಟೆಸ್ಟ್‌ನಲ್ಲಿ ಕಮ್ ಬ್ಯಾಕ್ ಮಾಡಲೇಬೇಕಾದ ಒತ್ತಡದಲ್ಲಿದ್ದಾರೆ. ಆಡಿದ ಮೂರು ಟೆಸ್ಟ್‌ಗಳಲ್ಲಿ ಕೊಹ್ಲಿ ಅವರಿಂದ ದೊಡ್ಡ ಇನ್ನಿಂಗ್ಸ್ ಬಾರದಿರುವುದು ಭಾರತ ತಂಡಕ್ಕೆ ಭಾರೀ ಹಿನ್ನಡೆ ಮೂಡಿಸಿದೆ. ಹೀಗಾಗಿ ಅಹ್ಮದಾಬಾದ್ ನಲ್ಲಿ ಕೊಹ್ಲಿ ಬ್ಯಾಟ್ ನಿಂದ ರನ್ ಬರುವ ನಿರೀಕ್ಷೆಯಲ್ಲಿ ವಿರಾಟ್ ಅಭಿಮಾನಿಗಳಿದ್ದಾರೆ.
ಇನ್ನೂ ಆಸೀಸ್ ತಂಡದ ಹಂಗಾಮಿ ಕ್ಯಾಪ್ಟನ್ ಸ್ಟೀವ್ ಸ್ಮಿತ್ ಕೂಡ ಇದೇ ಒತ್ತಡದಲ್ಲಿದ್ದಾರೆ. 3ನೇ ಟೆಸ್ಟ್‌ನಲ್ಲಿ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತಿದ್ದ ಸ್ಮಿತ್ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರೂ, ವೈಯಕ್ತಿಕವಾಗಿ ತಂಡಕ್ಕೆ ದೊಡ್ಡ ಮಟ್ಟದ ಕಾಣಿಕೆ ನೀಡಿಲ್ಲ. ಹೀಗಾಗಿ ಸ್ಟೀವ್ ಸ್ಮಿತ್ ಸಹ ದೊಡ್ಡ ಇನ್ನಿಂಗ್ಸ್ ಕಟ್ಟುವ ಲೆಕ್ಕಾಚಾರ ಹೊಂದಿದ್ದು, ಇದಕ್ಕೆ ಅಹ್ಮದಾಬಾದ್ ಅಂಗಳ ಹೇಳಿ ಮಾಡಿಸಿದಂತಿದೆ.
ಟೀಮ್ ಇಂಡಿಯಾದ ಆರಂಭಿಕ ಆಟಗಾರರ ಶುಭ್ಮನ್ ಗಿಲ್ ಅವರಿಂದಲೂ ದೊಡ್ಡ ಇನ್ನಿಂಗ್ಸ್ ಬರಬೇಕಿದೆ. ಫಾರ್ಮ್ ವೈಫಲ್ಯಕ್ಕೆ ಸಿಲುಕಿದ್ದ ಕೆಎಲ್ ರಾಹುಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಗಿಲ್, ಇಂದೋರ್‌ನಲ್ಲಿ ನಡೆದ 3ನೇ ಟೆಸ್ಟ್‌ನಲ್ಲಿ ತಂಡಕ್ಕೆ ಆಸರೆಯಾಗಲಿಲ್ಲ. ಭರ್ಜರಿ ಫಾರ್ಮ್ ಹೊಂದಿರುವ ಗಿಲ್, ಅಂತಿಮ ಪಂದ್ಯದಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.
ಇನ್ನೂ ಟೀಂ ಇಂಡಿಯಾದ ಮತ್ತೋರ್ವ ಯುವ ಆಟಗಾರ ಶ್ರೀಕರ್ ಭರತ್ ಕೂಡ ಅಹ್ಮದಾಬಾದ್ ನಲ್ಲಿ ಉತ್ತಮ ಪ್ರದರ್ಶನ ನೀಡಲೇಬೇಕಾದ ಒತ್ತಡದಲ್ಲಿದ್ದಾರೆ. ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದಿರುವ ಭರತ್, ವಿಕೆಟ್ ಕೀಪಿಂಗ್ ನಲ್ಲಿ ಸ್ವಲ್ಪಮಟ್ಟಿಗೆ ಸಕ್ಸಸ್ ಕಂಡಿದ್ದರು, ಬ್ಯಾಟಿಂಗ್‌ನಲ್ಲಿ ಯಾವುದೇ ಕೊಡುಗೆ ನೀಡಿಲ್ಲ. ಇದರ ಪರಿಣಾಮ ಭರತ್, ನಾಲ್ಕನೇ ಪಂದ್ಯದಲ್ಲಿ ತಂಡದಲ್ಲಿ ಸ್ಥಾನ ಪಡೆಯುವುದು ಅನುಮಾನ ಎನ್ನಲಾಗಿದೆ. ಒಂದೊಮ್ಮೆ ಶ್ರೀಕರ್ ಭರತ್ ಅವರನ್ನ ತಂಡದಿಂದ ಕೈಬಿಟ್ಟರೆ ಮತ್ತೋರ್ವ ಯುವ ಆಟಗಾರ ಇಶಾನ್ ಕಿಶನ್ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡುವ ಸಾಧ್ಯತೆಯೂ ಇದೆ.
ಉಳಿದಂತೆ ಸರಣಿಯ ಆರಂಭಿಕ ಎರಡು ಟೆಸ್ಟ್‌ನಲ್ಲಿ ಗಾಯದ ಸಮಸ್ಯೆಗೆ ಸಿಲುಕಿದ್ದ ಆಸೀಸ್ ವೇಗಿ ಮಿಚೆಲ್ ಸ್ಟಾರ್ಕ್ ಮೂರನೇ ಟೆಸ್ಟ್‌ನಲ್ಲಿ ಕಣಕ್ಕಿಳಿದಿದ್ದರು. ಆದರೆ ವಿಕೆಟ್ ಪಡೆಯುವಲ್ಲಿ ಸಕ್ಸಸ್ ಕಾಣದ ಸ್ಟಾರ್ಕ್, ಅಂತಿಮ ಪಂದ್ಯದಲ್ಲಿ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ.
IND v/s AUS Final Test: ಅಂತಿಮ ಟೆಸ್ಟ್: ಕೊಹ್ಲಿ-ಸ್ಮಿತ್ ಸೇರಿ ಹಲವು ಆಟಗಾರರ ಮೇಲೆ ಹೆಚ್ಚಿದ ಒತ್ತಡ

More News
2ನೇ ವಿಮಾನ ನಿಲ್ದಾಣ: ಕನಕಪುರ ರಸ್ತೆ ಎರಡು ತಾಣ ವೀಕ್ಷಿಸಿದ ಎಎಐ ತಂಡ
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದಕ್ಷಿಣ ಕನ್ನಡ ಜಿಲ್ಲೆಗೆ ದ್ವಿತೀಯ ಸ್ಥಾನ
ಆನೆಗುಡ್ಡೆ ಶ್ರೀವಿನಾಯಕನ ಸನ್ನಿಧಿಯಲ್ಲಿ ‘ವೀರ ಚಂದ್ರಹಾಸ’ ಟ್ರೇಲರ್ ಅನಾವರಣ
ಗಣೇಶನ ಸನ್ನಿಧಿಯಲ್ಲಿ ಆರಂಭವಾಯಿತು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ನೂತನ ಚಿತ್ರ
ಮಹಿಳೆಯರ ರಕ್ಷಣೆಗೆ ಹೆಚ್ಚು ಒತ್ತು: ಗೃಹ ಸಚಿವ ಪರಮೇಶ್ವರ