ಬೆಂಗಳೂರು : ನಾವು ಬೇಕಾದಷ್ಟು ಧರ್ಮದ ಹೆಸರಿನಲ್ಲಿ, ಮಠಗಳ ವಿಚಾರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ, ಅವರು ನಮ್ಮ ತಾಲ್ಲೂಕಿನವರು, ಬೇಕಾದಷ್ಟು ಸಲ ನಮ್ಮ ಊರಿಗೆ ಬರುತ್ತಿರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ಕಾಡಲ್ಲಿ ಮಲಗಿದ್ದಾರೆ, ಕಾಡಲ್ಲಿ ಅವರ ಮನೆ ಇದೆ ಎಂದು ಬಿಜೆಪಿ ಪಕ್ಷದಲ್ಲಿ ಅಸಮಾಧಾನಗೊಂಡಿರುವ ಸಚಿವ ವಿ ಸೋಮಣ್ಣ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು ಜತೆಯಲ್ಲಿ ವಿಮಾನದಲ್ಲಿ ಪಯಣಿಸುವ ಪೋಟೋ ವೈರಲ್ ವಿಚಾರವಾಗಿ ಸ್ಪಷ್ಟನೆ ನೀಡಿದರು.
ಸೋಮಣ್ಣ ಅವರ ಸ್ವಂತ ಮನೆ ನಮ್ಮ ಕ್ಷೇತ್ರದಲ್ಲಿದೆ, ಆ ಬಾಂಧವ್ಯ ಇದೆ, ರಾಜಕಾರಣ ಬೇರೆ ಬಾಂಧವ್ಯ ಬೇರೆ, ಅವ್ರು ಬರ್ತಾರೆ ಅಂತ ಅವ್ರು ಹೇಳಿಲ್ಲ, ಅವ್ರು ಬರ್ತಾರೆ ಅಂತ ನಾನು ಹೇಳಿಲ್ಲ, ನಾನು ಕರೆದಿಲ್ಲ, ಪಾಪ ಅವ್ರ ಕೆಲಸ ಅವ್ರು ಮಾಡಿಕೊಂಡು ಇದ್ದಾರೆ ಎಂದು ತಿಳಿಸಿದರು.
ಅಧಿವೇಶನ ಮುಗಿಸಿಕೊಂಡು ಬೆಳಗಾವಿಯಿಂದ ಫ್ಲೈಟ್ ನಲ್ಲಿ ಬರ್ತಾ ಇದ್ವಿ, ಆ ಪೋಟೋ ಇಂದು ಹೊರ ಬಂದಿದೆ, ಪಕ್ಕದಲ್ಲಿ ಕುಳಿತುಕೊಂಡರೆ ತಪ್ಪೇನಿದೆ ಎಂದು ಮರುಪ್ರಶ್ನಿಸಿದರು.
ರಾಮನಗರದಿಂದ ಡಿ ಕೆ ಸುರೇಶ್ ಸ್ಪರ್ಧೆಗೆ ಹೈ ಕಮಾಂಡ್ ಸೂಚನೆ
ರಾಮನಗರದಿಂದ ಸಂಸದ ಡಿ ಕೆ ಸುರೇಶ್ ಸ್ಪರ್ಧೆಗೆ ಹೈ ಕಮಾಂಡ್ ಸೂಚನೆ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ನಾನು ತಳ್ಳಿ ಹಾಕೋದಕ್ಕೆ ಆಗಲ್ಲ, ಪ್ರಪೋಸಲ್ ಈಸ್ ದೇರ್, ಇನ್ನು ನಾನು ಯಾರ ಬಳಿಯು ಮಾತನಾಡಿಲ್ಲ, ಸುರೇಶ್ ಬಳಿಯೂ ಮಾತನಾಡಿಲ್ಲ ಕಾರ್ಯಕರ್ತರ ಬಳಿ ಮಾತನಾಡಿಲ್ಲ, ಇದು ಮೇಜರ್ ಡಿಸಿಷನ್ ಆಲೋಚನೆ ಮಾಡಲಾಗುವುದು ಎಂದು ತಿಳಿಸಿದರು.
ನಾನೇ ಪಿಸಿಸಿ ಪ್ರೆಸಿಡೆಂಟ್ ಕೆಲ ಪ್ರಪೋಸಲ್ ಇದೆ. ನಾನು ಇಲ್ಲ ಎನ್ನುವುದಿಲ್ಲ, ಲೋಕಲ್ ಕಾರ್ಯಕರ್ತರು ಮುಖಂಡರು ಬಹಳ ದಿನದಿಂದ ಒತ್ತಾಯ ಮಾಡುತ್ತಿದ್ದಾರೆ, ನನಗೆ ಬೈ ಎಲೆಕ್ಷನ್ ಮಾಡುವುದು ಇಷ್ಟ ಇಲ್ಲ, ಈಗ ಪಾರ್ಟಿ ಹೇಳ್ತಾ ಇದೆ, ಅದನ್ನ ಇನ್ನೂ ಚರ್ಚೆ ಮಾಡಿಲ್ಲ, ಡಿಕೆ ಸುರೇಶ್ ಇನ್ನೂ ಅರ್ಜಿ ಹಾಕಿಲ್ಲ ಎಂದು ತಿಳಿಸಿದರು.