ಬೆಂಗಳೂರು: ಆರ್ ಆರ್ ಆರ್ ನ ನಾಟು ನಾಟು ಹಾಡು ಆಸ್ಕರ್ ಅವಾರ್ಡ್ ಪಡೆದ ಮೇಲೆ ಸ್ಟಾರ್ ನಟರ ಪಟ್ಟಿಯಲ್ಲಿ ರಾಜ್ ಚರಣ್ ಮತ್ತು ಎನ್ ಟಿ ಆರ್ ಗುರುತಿಸಿಕೊಂಡಿದ್ದಾರೆ. ಇದೀಗ ಅವರು ಟಾಲಿವುಡ್ ನಿಂದ ಹಾಲಿವುಡ್ ಗೆ ಪಾದಾರ್ಪಣೆ ಮಾಡುವ ಮುನ್ಸೂಚನೆ ನೀಡಿದ್ದಾರೆ. ಅದರ ನಡುವೆ ತೆಲುಗು ಚಿತ್ರರಂಗದ ಸ್ಟಾರ್ ನಟ ರಾಮ್ ಚರಣ್ ಆಸ್ತಿ ಮತ್ತು ಅವರು ಬಳಸುವ ವಸ್ತುಗಳ ಕುರಿತು ಚರ್ಚೆಗಳು ನಡೆಯುತ್ತಿವೆ.

ನಟ, ನಿರ್ಮಾಪಕರಾಗಿರುವ ರಾಮ್ ಚರಣ್ ತಿಂಗಳಿನಲ್ಲಿ ಕೋಟಿ ಕೋಟಿ ಸಂಪಾದನೆ ಮಾಡ್ತಾ ಐಶಾರಾಮಿ ಜೀವನ ನಡೆಸ್ತಿದ್ದಾರೆ. ಇದೀಗ ಅವರಿಗೆ ಒಟ್ಟು ಆಸ್ತಿ ಎಷ್ಟಿದೆ ಎಂಬುದರ ಬಗ್ಗೆ ಎಲ್ಲರಿಗೂ ಕುತೂಹಲ ಮೂಡಿಸಿದೆ. ಇನ್ನೂ ರಾಮ್ ಅವರ ತಂದೆ 150 ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಕೋಟ್ಯಾಂತರ ರೂ.ಗಳನ್ನು ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮ್ ಚರಣ್ ಸಹ ಅಪ್ಪನನ್ನು ಹಿಂಬಾಲಿಸಿದರು. ತಮ್ಮ ಮೊದಲನೆಯ ಸಿನಿಮಾ ಚಿರುತ ಮೂಲಕ ಸಿನಿರಂಗಕ್ಕೆ ಪ್ರವೇಶಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಅದಾದ ಮೇಲೆ ಬಂದ ಮಗದೀರ ಸಿನಿಮಾ ಸಿನಿಮಾ ಇಂಡಸ್ಟ್ರಿಯಲ್ಲಿ ಸಖತ್ ಹಿಟ್ ಆಗಿ, ಬಾಕ್ಸಾಪೀಸ್ ಅನ್ನು ಅಲುಗಾಡಿಸಿತು.

ಅನಂತರ ಬಂದ ಕೆಲವು ಸಿನಿಮಾಗಳು ಪ್ಲಾಪ್ ಆದವು. ಆದರೂ ಸಹ ತಮ್ಮ ಹಠ ಬಿಡದೇ ಸಿನಿಮಾ ಕ್ಷೇತ್ರದಲ್ಲಿ ಚೇತರಿಸಿಕೊಂಡರು ರಾಮ್ ಚರಣ್. ಇದೇ ಸಂದರ್ಭದಲ್ಲಿ ತಮ್ಮ ತಂದೆಯೇ ನಟರಾಗಿ ಮಾಡಿದ ಸಿನಿಮಾ ಒಂದಕ್ಕೆ ನಿರ್ಮಾಣ ಕಾರ್ಯದಲ್ಲಿ ಜೊತೆಯಾಗಿದ್ದರು. ಅದು ಸುಮಾರಿಗೆ ಯಶಸ್ಸು ಕಂಡಿತು. ಅನಂತರ ರಾಮ್ ಚರಣ್ ಆರ್ ಆರ್ ಆರ್ ಸಿನಿಮಾದಲ್ಲಿ ಸೀತಾರಾಮರಾಜು ಆಗಿ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದರು.
ನಟ, ನಿರ್ಮಾಪಕ ಅಷ್ಟೇ ಅಲ್ಲದೆ ಅನೇಕ ಬ್ರಾಂಡ್ ಗಳಿಗೆ ಅಂಬಾಸಿಡರ್ ಆಗಿಯೂ ಇದ್ದಾರೆ. ಪೆಪ್ಸಿ, ಟಾಟಾ ಡೊಕೊಮೊ, ಅಪೊಲೊ ಜಿಯೊ, ಹೀರೊ ಮೊಟೊಗ್ರಾಪ್, ಫ್ರೂಟಿ, ವೊಲಾನೊ ಹೀಗೆ 30 ಕ್ಕಿಂತ ಹೆಚ್ಚಿನ ಬ್ರಾಂಡ್ ಗಳಿಗೆ ಅಂಬಾಸಿಡರ್ ಆಗಿದ್ದು, ಕೋಟ್ಯಾಂತರ ರೂ.ಗಳನ್ನು ಸಂಪಾದನೆ ಮಾಡ್ತಾ ಇದ್ದಾರೆ.

ಒಂದು ಅಂದಾಜಿನ ಪ್ರಕಾರ ರಾಮ್ ಚರಣ್ ಸರಿಸುಮಾರು 1300 ಕೋಟಿ ಗೂ ಅಧಿಕ ಆಸ್ತಿ ಹೊಂದಿದ್ದು, ವರ್ಷಕ್ಕೆ ಬರೋಬ್ಬರಿ 30 ರಿಂದ 35 ಕೋಟಿ ಸಂಪಾದನೆ ಮಾಡ್ತಿದ್ದಾರೆ ಎನ್ನಲಾಗಿದೆ. ಆಸ್ಕರ್ ಅವಾರ್ಡ್ ಪಡೆದ ಆರ್ ಆರ್ ಆರ್ ಸಿನಿಮಾದಲ್ಲಿ ನಟಿಸಲು ರಾಮ್ ಚರಣ್ ಬರೋಬ್ಬರಿ 45 ಕೋಟಿ ಸಂಭಾವನೆ ಪಡ್ಕೊಂಡಿದ್ದಾರೆ ಎನ್ನಲಾಗಿದೆ.
ತಮ್ಮ ವೃತ್ತಿ ಜೀವನದಲ್ಲಿ ಅಷ್ಟೇ ಅಲ್ಲದೇ ವೈಯಕ್ತಿಕ ಜೀವನದಲ್ಲಿ ಸಹ ಕೋಟ್ಯಾಂತರ ರೂ.ಗಳು ಹರಿದುಬಂದಿದೆ. ಬಹುಕೋಟಿ ಒಡೆಯ ಅಪೋಲೊ ಆಸ್ಪತ್ರೆಗಳ ಅಧ್ಯಕ್ಷರು ಮತ್ತು ಸಹ-ಸಂಸ್ಥಾಪಕ ಡಾಕ್ಟರ್ ಪ್ರತಾಪ್ ಸಿ ರೆಡ್ಡಿ ಅವರ ಮೊಮ್ಮಗಳನ್ನು ಲವ್ ಮಾಡಿ 2014 ರಲ್ಲಿ ಮದುವೆಯಾಗಿದ್ದರು. ಆಕೆಯ ಹೆಸರಿನಲ್ಲಿ ಸಹ ಕೋಟ್ಯಾಂತರ ರೂಪಾಯಿಗಳ ಪ್ರಾಪರ್ಟಿಯಿದೆ ಎನ್ನಲಾಗಿದ್ದು, ಮೆಗಾ ಪ್ಯಾಮಿಲಿಯ ಕುಟುಂಬದ ಆಸ್ತಿ ಹೊರತುಪಡಿಸಿ ದಂಪತಿ ಒಟ್ಟು ಆಸ್ತಿ ಮೌಲ್ಯ 2000 ಕೋಟಿ. ಎನ್ನಲಾಗಿದೆ.
ನಟ ರಾಮ್ ಚರಣ್ ಅವರು 35 ಕೋಟಿ ರೂ.ಗಳ ವೆಚ್ಚದಲ್ಲಿ ಹೈದರಾಬಾದ್ ನಲ್ಲಿ ದೊಡ್ಡದಾದ ಬಂಗಲೆಯನ್ನು ಹೊಂದಿದ್ದಾರೆ. ಅದು ಸಂಪೂರ್ಣ ಐಟೆಕ್ ಆಗಿದ್ದು, ಅದ್ದೂರಿಯಾಗಿದೆ ಎನ್ನಲಾಗಿದೆ. ಇನ್ನೂ ಮುಂಬೈನಲ್ಲಿ ಒಂದು ಪೆಂಟ್ ಹೌಸ್ ಸಹ ಮಾಡಲಾಗಿದ್ದು, ಐಶಾರಾಮಿ ಕಾರುಗಳನ್ನು ಸಹ ಹೊಂದಿದ್ದಾರೆ. ರಾಮ್ ಚರಣ್ ಸಿನಿಮಾ ರಂಗದ ಕುಬೇರರಾಗಿದ್ದಾರೆ ಎನ್ನಬಹುದು.