ಬೆಂಗಳೂರು: ವಿಶ್ವದಾದ್ಯಂತ ಈಗ ಆರ್ ಆರ್ ಆರ್ ಸಿನಿಮಾದೇ ಸದ್ದು.. ಸ್ವಾತಂತ್ರ್ಯ ಪೂರ್ವ ಘಟ್ಟದಲ್ಲಿ ಬ್ರಿಟಿಷ್ ಸರ್ಕಾರದ ವಿರುದ್ಧ ಏಳುವ ಧಂಗೆಯನ್ನ ತೆರೆ ಮೇಲೆ ತಂದ ನಿರ್ದೇಶಕ ರಾಜಮೌಳಿ ಸಿನಿ ಪ್ರೇಮಿಗಳಿಂದ ಭೇಷ್ ಎನಿಸಿಕೊಂಡಿದ್ದರು.. ಬಾಕ್ಸ್ ಆಫೀಸ್ ನಲ್ಲಿ ಒಳ್ಳೆ ಕಮಾಯಿ ಮಾಡಿದ್ದಲ್ಲದೇ ಸಮುದ್ರದ ಆಚೆಗೂ ತನ್ನ ಗತ್ತನ್ನ ಮೆರೆದಿತ್ತು. ಆದರೆ ಸಿನಿಮಾ ಬಿಡುಗಡೆ ಗೂ ಮುನ್ನ ಪಠಾಣ್, ಕಾಂತಾರ ಸಿನಿಮಾ ವಿರೋಧ ಎದುರಿಸಿದಂತೆ ಆರ್ ಆರ್ ಆರ್ ಸಿನಿಮಾ ಕೂಡ ಎದುರಿಸಿತ್ತು. ಬಾಯ್ ಕಟ್ ಆರ್ ಆರ್ ಆರ್ ಎಂದು ಕೂಗೊಂದು ಕೇಳಿ ಬಂದಿತ್ತು. ಇದೀಗ ಆ ಕೂಗಿನ ವಿರುದ್ಧ ಬಹುಭಾಷಾ ನಟ ಪ್ರಕಾಶ್ ರೈ, ವ್ಯಂಗ್ಯ ಮಾಡಿದ್ದಾರೆ.


ಈ ಕುರಿತು ಟ್ವಿಟರ್ ನಲ್ಲಿ ಬರೆದುಕೊಂಡಿರುವ ನಟ ಪ್ರಕಾಶ್ ರೈ, RRR ಸಿನಿಮಾವನ್ನು ಬಾಯ್ಕಾಟ್ ಮಾಡಬೇಕು. ಒಂದು ವೇಳೆ RRR ರಿಲೀಸ್ ಮಾಡಿದ್ರೆ ಥಿಯೇಟರ್ ಸುಡಬೇಕು ಎಂದಿದ್ದ ಬಿಜೆಪಿ ಮತಾಂಧರು ಈಗ ಎಲ್ಲಿ ಅಡಗಿಕೊಂಡಿದ್ದಾರೆ. ವಿಶ್ವಗುರುವಿನ ಶಿಷ್ಯರು ‘RRR’ ಸಿನಿಮಾವನ್ನು ಬ್ಯಾನ್ ಮಾಡಿ, ಚಿತ್ರಮಂದಿರನ್ನು ಕೆಡವುತ್ತೀವಿ ಎಂದಿದ್ರು. ಎಲ್ಲಿ ಮಕಾಡೆ ಮಲ್ಕೊಂಡವ್ರೆ ನೋಡ್ರಪಾ ಎಂದು ಪ್ರಕಾಶ್ ರಾಜ್ ಟ್ವೀಟ್ ಮಾಡುವ ಮೂಲಕ ವ್ಯಂಗ್ಯ ಮಾಡಿದರು.

ಆರ್ ಆರ್ ಆರ್ ಸಿನಿಮಾ ಬಿಡುಗಡೆ ಮುನ್ನ ಆದಿವಾಸಿ ಮುಸ್ಲಿಂ ವ್ಯಕ್ತಿ ಪಾತ್ರದಲ್ಲಿ ಕಾಣಿಸಿಕೊಂಡ ಜ್ಯೂನಿಯರ್ ಎನ್ ಟಿ ಆರ್ ಚಿತ್ರದಲ್ಲಿ ಕೇಸರಿ ಶಾಲ್ ನ್ನು ಧರಿಸುತ್ತಾರೆ.. ಜೊತೆಗೆ ಆಂಜನೇಯ ದೇವರ ಫೋಟೋ ಸಹ ಬಿಡುಗಡೆ ಮಾಡಲಾಯ್ತು. ಇದು ಬಿಜೆಪಿಗರ ಕೆಂಗಣ್ಣಿಗೆ ಕಾರಣವಾಯ್ತು. ಈ ಬಗ್ಗೆ ಗುಡುಗಿದ್ದ ಆಂಧ್ರದ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಕುಮಾರ್, ಮುಂದಿನ ದಿನಗಳಲ್ಲಿ ಇಂತಹ ದೃಶ್ಯಗಳು ಸಿನಿಮಾದಲ್ಲಿ ಕಂಡರೆ ಚಿತ್ರಮಂದಿರಕ್ಕೆ ಬೆಂಕಿ ಹಚ್ಚುತ್ತೇವೆ. ಈಗಲೇ ಎಚ್ಚರಿಕೆ ಕೊಡ್ತೀನಿ ಎಂದು ಕೆಂಡಕಾರಿದ್ರು, ಸಾಕಷ್ಟು ಗದ್ದಲವೂ ಆಗಿತ್ತು.
ಸಿನಿಮಾಗೆ ಆಸ್ಕರ್ ಪ್ರಶಸ್ತಿ ಬಂದ ಬೆನ್ನಲ್ಲೇ ಈ ಘಟನೆಯನ್ನು ಮೆಲುಕು ಹಾಕಿದ ನಟ ಪ್ರಕಾಶ್ ರೈ, ವ್ಯಂಗ್ಯ ವಾಗಿ ಟ್ವೀಟ್ ಮಾಡಿದ್ದಾರೆ.. ಇನ್ನೂ ನಟನ ಟ್ವೀಟ್ ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.