ಪಂಚೆ ಮೇಲಕ್ಕೆ ತೊಟ್ಟು, ಟಪ್ಪಾಂಗುಚ್ಚಿ ಹಾಕಿ ಭಾರೀ ಸ್ಟೆಪ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದ ನಟ ಸಲ್ಮಾನ್ ಖಾನ್ ಟೀಕೆಗೆ ಗುರಿಯಾಗಿದ್ದಾರೆ. ಸಲ್ಮಾನ್ ಖಾನ್ ಡ್ಯಾನ್ಸ್ ವಿರುದ್ಧ ಗುಡುಗಿದ ಮಾಜಿ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್, ತುಂಬಾ ಅಸಹ್ಯವಾಗಿ ನಟ ಸಲ್ಮಾನ್ ಖಾನ್ ಡಾನ್ಸ್ ಮಾಡಿದ್ದಾರೆ. ಅವರು ತಮ್ಮ ನಟನೆ ಮೂಲಕ ದಕ್ಷಿಣ ಭಾರತದ ಸಂಸ್ಕೃತಿಯನ್ನ ಅವಮಾನಿಸಿದ್ದಾರೆ ಎಂದು ಸಿಟ್ಟಾದರು.
ಬಾಲಿವುಡ್ ನಟ ಸಲ್ಮಾನ್ ಖಾನ್ ನಟನೆ ಜೊತೆಗೆ ನಿರ್ಮಾಣ ಜವಾಬ್ದಾರಿ ಹೊತ್ತ ‘ಕಿಸಿ ಕ ಭಾಯ್ ಕಿಸಿ ಕಿ ಜಾನ್’ ಸಿನಿಮಾ ಸಾಂಗ್ ರಿಲೀಸ್ ಆಗಿ ಸಾಮಾಜಿಕ ಜಾಲತಾಣದಲ್ಲಿ ಹಲ್ ಚಲ್ ಸೃಷ್ಟಿಸಿದೆ. ಸಲ್ಮಾನ್ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮೂಲಕ ಎಂಟ್ರಿ ಕೊಟ್ಟ ರಾಮ್ ಚರಣ್, ವೆಂಕಟೇಶ್ ಕಾಂಬಿನೇಷನ್ ಅಭಿಮಾನಿಗಳನ್ನು
ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಪಂಚೆ ತೊಟ್ಟು ಮಸ್ತ್ ಆಗಿ ಸ್ಟೆಪ್ ಹಾಕಿದ ನಾಯಕರಿಗೆ ಪೂಜಾ ಹೆಗ್ಡೆ ಸಾಥ್ ನೀಡಿದ್ದು, ಸಿನಿ ದುನಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಈಡಾಗಿದೆ.

ಆದರೆ ನಟ ಸಲ್ಮಾನ್ ಖಾನ್ ಪಂಚೆ ತೊಟ್ಟು ನೃತ್ಯ
ಮಾಡಿದ್ದು ಭಾರೀ ಟೀಕೆಗೆ ಗುರಿಯಾಗಿದೆ. ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಅಸಮಧಾನ ವ್ಯಕ್ತಪಡಿಸಿದ ಕ್ರಿಕೆಟಿಗ ಲಕ್ಷ್ಮಣ್ ಶಿವರಾಮಕೃಷ್ಣನ್, ಸಲ್ಮಾನ್ ಖಾನ್ ಅತ್ಯಂತ ಹಾಸ್ಯಾಸ್ಪದವಾಗಿ ನೃತ್ಯ ಮಾಡಿದ್ದಾರೆ. ಸಲ್ಮಾನ್ ಖಾನ್ ಧರಿಸಿರುವುದು ಲುಂಗಿ ಅಲ್ಲ. ಧೋತಿ. ಸಾಂಪ್ರದಾಯಿಕ ಉಡುಪನ್ನ ಅಸಹ್ಯಕರವಾಗಿ ತೋರಿಸಿ, ನಮ್ಮ ದಕ್ಷಿಣ ಭಾರತದ ಸಂಸ್ಕೃತಿಯನ್ನ ಅವಮಾನಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.